ಕೇಂದ್ರ ಬಜೆಟ್ 2017-18: 1.5 ಲಕ್ಷ ಗ್ರಾಪಂಗಳಿಗೆ ಆಪ್ಟಿಕಲ್ ಫೈಬರ್ ಮೂಲಕ ಇಂಟರ್ನೆಟ್ ಸೌಲಭ್ಯ

Written By:

ಕೇಂದ್ರ ಸರಕಾರವೂ ನಿರೀಕ್ಷೆಯಂತೆ ಸಮತೋಲನ ಬಜೆಟ್ ಮಂಡಿಸಿದ್ದು, ಪ್ರಧಾನಿ ಮೋದಿ ಡಿಜಿಟಲ್ ಇಂಡಿಯಾ ಕನಸಿಗೆ ನೀರೆಯುವ ಸಲುವಾಗಿ ಭಾರತ್ ನೆಟ್ ಕಾರ್ಯಕ್ರಮಕ್ಕೆ ಬಜೆಟ್ ನಲ್ಲಿ 10,000 ಕೋಟಿ ಹಣವನ್ನು ಮೀಸಲಿಡಲಾಗಿದೆ. ದೇಶದಲ್ಲಿರುವ 1.5 ಲಕ್ಷ ಗ್ರಾಮ ಪಂಚಾಯತ್ ಗಳಿಗೆ ಅಂತರ್ಜಾಲ ಸೇವೆಯನ್ನು ನೀಡಲು ಮುಂದಾಗಿದೆ.

ಕೇಂದ್ರ ಬಜೆಟ್ 2017-18: 1.5 ಲಕ್ಷ ಗ್ರಾಪಂಗಳಿಗೆ ಆಪ್ಟಿಕಲ್ ಫೈಬರ್ ಮೂಲಕ ಇಂಟರ್ನೆ

ಓದಿರಿ: ಸ್ಯಾಮ್‌ಸಂಗ್ ಹಿಂದಿಕ್ಕಿದ ಆಪಲ್‌ನಿಂದ ನೂತನ ದಾಖಲೆ ನಿರ್ಮಾಣ

ಈಗಾಗಲೇ ಜಾರಿಯಲ್ಲಿರುವ ಭಾರತ್ ನೆಟ್ ಕಾರ್ಯಕ್ರಮದ ಅನ್ವಯ 10 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಇದೇ ಮಾರ್ಚ್ ಒಳಗೆ ಇಂಟರ್ನೆಟ್ ಸೌಲಭ್ಯವನ್ನು ಕಲ್ಪಿಸುವ ಕಾರ್ಯವೂ ಪೂರ್ಣಗೊಳಿಸುವ ಸಾಧ್ಯತೆ ಇದೆ. ಇದಕ್ಕಾಗಿ ಖಾಸಗಿ ಕಂಪನಿಗಳೊಂದಿಗೆ ಸರಕಾರ ಕೈ ಜೊಡಿಸಲು ಮುಂದಾಗಿದೆ.

ಈ ಕಾರ್ಯಕ್ರಮದ ಅನ್ವಯ ದೇಶದಲ್ಲಿ 1.5 ಲಕ್ಷ ಕಿಲೋ ಮೀಟರ್ ಆಪ್ಟಿಕಲ್ ಫೈಬರ್ ಲೈನ್ ಆಳಡಿಸಲಾಗುತ್ತಿದ್ದು, ಈ ಮೂಲಕ ಅಂತರ್ಜಾಲ ಸೇವೆಯನ್ನು ನೀಡುವ ಯೋಜನೆ ರೂಪಿಸಲಾಗಿದೆ.

ಕೇಂದ್ರ ಬಜೆಟ್ 2017-18: 1.5 ಲಕ್ಷ ಗ್ರಾಪಂಗಳಿಗೆ ಆಪ್ಟಿಕಲ್ ಫೈಬರ್ ಮೂಲಕ ಇಂಟರ್ನೆ

ಓದಿರಿ: ಫೇಸ್‌ಬುಕ್‌ನ ಹೊಸ ಆಲೋಚನೆ: ಟಿವಿ ಲೋಕಕ್ಕೆ ಹೊಸ ಹೆಜ್ಜೆ

ಗ್ರಾಮ ಪಂಚಾಯತಿಗಳು ಸಹ ಡಿಜಿಟಲ್ ಇಂಡಿಯಾ ಕನಸಿನ ಸಹಕಾರಕ್ಕೆ ತಮ್ಮದೇ ಕೊಡಗೆಯನ್ನು ನೀಡಲಿದ್ದು, ಗ್ರಾಮಗಳಲ್ಲಿ ಇಂಟರ್ನೆಟ್ ಸೇವೆ ಉತ್ತಮಗೊಂಡರೆ ಮುಂದಿನ ದಿನಗಳಲ್ಲಿ ದೇಶ ಅಭಿವೃದ್ಧಿ ಸಾಧ್ಯಗಲಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರ ದೇಶದಲ್ಲಿರುವ ಎಲ್ಲಾ ಗ್ರಾಮಗಳಿಗೂ ಅಂತರ್ಜಾಲ ಸೇವೆಯನ್ನು ನೀಡಲು ಮುಂಧಾಗಿದೆ.

Read more about:
English summary
Finance Minister Arun Jaitley’s speech constantly developed on the on-going Digital India initiative. The minister proposed optic-fibre based internet connectivity across 1.5 lakh gram panchayats across the country. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot