Home
ಮೊಬೈಲ್

ಶಾಕಿಂಗ್ ಬೆಲೆ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಲಾಂಚ್: ಖರೀದಿಸಲು ಸಿದ್ಧತೆ ನಡೆಸಿ..!!

ಇದೇ ಸಂದರ್ಭದಲ್ಲಿ HMD ಗ್ಲೊಬಲ್ ಸಂಸ್ಥೆಯೂ ಶಾಕಿಂಗ್ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಮೂರು ಫೋನ್‌ಗಳು ಒಂದೇ ದಿನ ಲಾಂಚ್ ಆದರೂ, ಬೇರೆ ಬೇರೆ ದಿನ ಸೇಲ್ ಆಗಲಿದೆ.

By Srinidhi

ಜೂನ್ 13ರಂದು ಮಾರುಕಟ್ಟೆಗೆ ಲಗ್ಗೆ ಇಡಲಿರುವ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಹವಾ ಎಬ್ಬಿಸಿದ್ದು, ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೇ ಸಂದರ್ಭದಲ್ಲಿ HMD ಗ್ಲೊಬಲ್ ಸಂಸ್ಥೆಯೂ ಶಾಕಿಂಗ್ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಮೂರು ಫೋನ್‌ಗಳು ಒಂದೇ ದಿನ ಲಾಂಚ್ ಆದರೂ, ಬೇರೆ ಬೇರೆ ದಿನ ಸೇಲ್ ಆಗಲಿದೆ.

ಶಾಕಿಂಗ್ ಬೆಲೆ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಲಾಂಚ್: ಖರೀದಿಸಲು ಸಿದ್ಧತೆ ನಡೆಸಿ..!

ಓದಿರಿ: ಶೀಘ್ರವೇ ಮಾರುಕಟ್ಟೆಗೆ ಬರಲಿರುವ ನೋಕಿಯಾ 3 ಸ್ಮಾರ್ಟ್‌ಫೋನ್ ಫಸ್ಟ್ ಲುಕ್ ವಿಡಿಯೋ ಇಲ್ಲಿದೇ...!!!!

ಒಟ್ಟು ಮೂರು ಸ್ಮಾರ್ಟ್‌ಫೋನ್‌ಗಳನ್ನು ನೋಕಿಯಾ ಲಾಂಚ್ ಮಾಡಲು ಮುಂದಾಗಿದೆ. ನೋಕಿಯಾ 6, ನೋಕಿಯಾ 5 ಮತ್ತು ನೋಕಿಯಾ 3 ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಕಾಣಿಸಿಕೊಳ್ಳಲಿದೆ. ಈ ಪೋನುಗಳ ಬೆಲೆಯೂ ಲಾಂಚ್ ಸಂದರ್ಭದಲ್ಲಿ ಭಾರೀ ಕಡಿಮೆ ಇರಲಿದೆ. ಕಾರಣ ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದ್ದು, ಇವುಗಳಿಗೆ ಭರ್ಜರಿ ಸ್ಪರ್ಧೆ ನೀಡಲು ನೋಕಿಯಾ ಸಿದ್ಧತೆ ನಡೆಸಿದೆ.

ನೋಕಿಯಾ 6 : ಬೆಲೆ ರೂ.16,000

ನೋಕಿಯಾ 6 : ಬೆಲೆ ರೂ.16,000

ನೋಕಿಯಾ 6 ಸ್ಮಾರ್ಟ್‌ಪೋನಲ್ಲಿ 5.5 ಇಂಚಿನ Full HD ಡಿಸ್‌ಪ್ಲೇ 2.5D ವಿನ್ಯಾಸ, ಗೋರಿಲ್ಲ ಗ್ಲಾಸ್ ರಕ್ಷಣೆ ಇದೆ. ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಜೊತೆಗೆ 3GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಒಂದು ಮಾದರಿ ಮತ್ತು 4GB RAM ಮತ್ತು 64GB ಇಂಟರ್ನಲ್ ಮೆಮೊರಿ ಇರುವ ಮತ್ತೊಂದು ಮಾದರಿಯೂ ಲಭ್ಯವಿದೆ. ಆಂಡ್ರಾಯ್ಡ್ ನ್ಯಾಗಾ, ಹಿಂಭಾಗದಲ್ಲಿ ಡುಯಲ್ ಟೋನ್ LED ಫ್ಲಾಶ್ ನೊಂದಿಗೆ 16 MP ಕ್ಯಾಮೆರಾ, ಮುಂಭಾಗದಲ್ಲಿ 8 MP ಕ್ಯಾಮೆರಾ ಮತ್ತು 3000mAh ಬ್ಯಾಟರಿ ಅಳವಡಿಸಲಾಗಿದೆ.

ನೋಕಿಯಾ 5: ಬೆಲೆ ರೂ. 14,000

ನೋಕಿಯಾ 5: ಬೆಲೆ ರೂ. 14,000

ನೋಕಿಯಾ 5 ಸ್ಮಾರ್ಟ್‌ಪೋನಿನಲ್ಲಿ 5.2 ಇಂಚಿನ HD ಡಿಸ್‌ಪ್ಲೇ, ನೂತನ ಆಂಡ್ರಾಯ್ಡ್ ನ್ಯಾಗಾ, ಸ್ನಾಪ್ ಡ್ರಾಗನ್ 430 ಪ್ರೋಸೆಸರ್, 2 GB RAM ಹಾಗೂ 16 GB ಆಂತರಿಕ ಮೆಮೊರಿ, ಮೈಕ್ರೋ SD ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಹಿಂಭಾಗದಲ್ಲಿ 13 MP ಕ್ಯಾಮೆರಾ, ಮುಂಭಾಗದಲ್ಲಿ 5 MP ಕ್ಯಾಮೆರಾ ಇದೆ. 3000 mAh ಬ್ಯಾಟರಿ ಇದ್ದು, 4G ಸಪೋರ್ಟ್ ಮಾಡಲಿದೆ.

ನೋಕಿಯಾ 3: ಬೆಲೆ ರೂ. 9000

ನೋಕಿಯಾ 3 ಸ್ಮಾರ್ಟ್‌ಪೋನಿನಲ್ಲಿ 5 ಇಂಚಿನ HD ಡಿಸ್‌ಪ್ಲೇ ಜೊತೆಗೆ ರಕ್ಷಣೆಗಾಗಿ ಗೋರಿಲ್ಲ ಗ್ಲಾಸ್, ಮೀಡಿಯಾ ಟೆಕ್ ಕ್ವಾಡ್ ಕೋರ್ 1.3GHz ಪ್ರೋಸೆಸರ್, ನೂತನ ಆಂಡ್ರಾಯ್ಡ್ ನ್ಯಾಗಾ, 2 GB RAM ಹಾಗೂ 16 GB ಆಂತರಿಕ ಮೆಮೊರಿ ಇದರಲ್ಲಿದೆ. 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ, ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, 2650mAh ಬ್ಯಾಟರಿ ಇದೆ, 4G ಸಪೋರ್ಟ್ ಮಾಡಲಿದೆ.

Best Mobiles in India

English summary
HMD Global is all set to launch Nokia phones in India on June 13. to Know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+