ಶೀಘ್ರವೇ ಮಾರುಕಟ್ಟೆಗೆ ಬರಲಿರುವ ನೋಕಿಯಾ 3 ಸ್ಮಾರ್ಟ್‌ಫೋನ್ ಫಸ್ಟ್ ಲುಕ್ ವಿಡಿಯೋ ಇಲ್ಲಿದೇ...!!!!
ನೋಕಿಯಾ 3 ಮಧ್ಯಮ ಬೆಲೆಯ ಪೋನಾಗಿದ್ದು, ಜೂನ್ ಮಾಸದ ಅಂತ್ಯದ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ.
ಸದ್ಯ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನೋಕಿಯಾ ಆಂಡ್ರಾಯ್ಡ್ ಫೋನ್‌ಗಳ ಜಪ ಆರಂಭವಾಗಿದೆ. ನೋಕಿಯಾ 3 ಮಧ್ಯಮ ಬೆಲೆಯ ಪೋನಾಗಿದ್ದು, ಜೂನ್ ಮಾಸದ ಅಂತ್ಯದ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ.

ಓದಿರಿ: ದೀಪಾವಳಿಗೆ ಜಿಯೋ ದಿಂದ ಗಿಫ್ಟ್: ಭರ್ಜರಿ ಆಫರ್ 500 ರೂ.ಗೆ 100GB ಡೇಟಾ..!!!!!
ನೋಕಿಯಾ 3 ಸ್ಮಾರ್ಟ್‌ಪೋನು 10,000ಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗಲಿದ್ದು ಈ ಪೋನಿನ ವಿಶೇಷತೆಗಳ ಕುರಿತ ವಿಡಿಯೋ ಮುಂದಿದೆ ನೀವೆ ನೋಡಿರಿ.
ಓದಿರಿ: ಸ್ಮಾರ್ಟ್‌ಫೋನ್‌ಗಳ ಮೇಲೆ ಶಾಕಿಂಗ್ ಆಫರ್ ನೀಡಿದ ಫ್ಲಿಪ್‌ಕಾರ್ಟ್: ಸ್ಮಾರ್ಟ್‌ಫೋನ್ ಖರೀದಿಗೆ ಇದೇ ಒಳ್ಳೆ ಸಮಯ..!!!
ನೋಕಿಯಾ 3 ಹೇಗಿದೆ..? ವಿಡಿಯೋ ನೋಡಿ:
ನೋಕಿಯಾ 3 ಸ್ಮಾರ್ಟ್‌ಪೋನ್ ಇನ್ನೇನು ಕೆಲವೇ ದಿನಗಳಲ್ಲಿ ಲಾಂಚ್ ಆಗಲಿದ್ದು, ಈ ಹಿನ್ನಲೆಯಲ್ಲಿ ಫಸ್ಟ್‌ಲುಕ್ ಹೇಗಿದೆ ಎಂಬುದನ್ನು ನಾವು ಈ ವಿಡಿಯೋದಲ್ಲಿ ತಿಳಿಸಿದ್ದೇವೆ ನೋಡಿ.

ನೋಕಿಯಾ 3 ವಿಶೇಷತೆ:
ನೋಕಿಯಾ 3 ಸ್ಮಾರ್ಟ್‌ಪೋನಿನಲ್ಲಿ 5 ಇಂಚಿನ HD ಡಿಸ್‌ಪ್ಲೇ ಕಾಣಬಹುದಾಗಿದ್ದು, ಇದು 720x1280 p ರೆಸಲ್ಯೂಷನ್ ಗುಣಮಟ್ಟದ IPS ಡಿಸ್‌ಪ್ಲೇಯಾಗಿದ್ದು, ಇದರರಕ್ಷಣೆಗಾಗಿ ಗೋರಿಲ್ಲ ಗ್ಲಾಸ್ ಅಳವಡಿಸಲಾಗಿದೆ. ಇದರಲ್ಲಿ ಮೀಡಿಯಾ ಟೆಕ್ ಕ್ವಾಡ್ ಕೋರ್ 1.3GHz ಪ್ರೋಸೆಸರ್ ಜೊತೆಗೆ ನೂತನ ಆಂಡ್ರಾಯ್ಡ್ ನ್ಯಾಗಾವನ್ನು ಕಾಣಬಹುದಾಗಿದೆ.

ನೋಕಿಯಾ 3 ಇನ್ನೇನಿದೆ...?
ನೋಕಿಯಾ 3 ಸ್ಮಾರ್ಟ್‌ಪೋನಿನಲ್ಲಿ 2 GB RAM ಅಳವಡಿಸಲಾಗಿದ್ದು, 16 GB ಆಂತರಿಕ ಮೆಮೊರಿ ಇದ್ದು, 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. 2650 mAh ಬ್ಯಾಟರಿ ಸಹ ಇದರಲ್ಲಿದೆ.


Click it and Unblock the Notifications








