ಬರ್ತಿದೆ ಗೇಮಿಂಗ್ ಫೋನ್! 108MP ಕ್ಯಾಮೆರಾ.. ಬಿಗ್ ಬ್ಯಾಟರಿ, ದೊಡ್ಡ ಡಿಸ್ಪ್ಲೇ.. ಬೆಲೆ, ಲಾಂಚ್ ಯಾವಾಗ?
ಗೇಮಿಂಗ್ ಪ್ರಿಯರಿಗೆ ಇನ್ಫಿನಿಕ್ಸ್ ಒಳ್ಳೆಯ ಸುದ್ದಿ ತಂದಿದೆ. ಜನಪ್ರಿಯ ಕಂಪನಿ ಇನ್ಫಿನಿಕ್ಸ್ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಹೌದು, ಮೊಬೈಲ್ ಗೇಮಿಂಗ್ ಇಷ್ಟಪಡುವವರಿಗೆ, ಇನ್ಫಿನಿಕ್ಸ್ GT 30 ಪ್ರೊ (Infinix GT 30 Pro) ಹೆಸರಿನ ಶಕ್ತಿಶಾಲಿ ಫೋನನ್ನು ಪರಿಚಯಿಸಲು ಸಿದ್ಧವಾಗಿದೆ. ಈ ಗೇಮಿಂಗ್ ಫೋನಿನ ಬಗ್ಗೆ ಕಂಪನಿಯು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ, ಮೂಂಬರುವ ಈ ಫೋನಿನ ಪ್ರಮುಖ ವಿಶೇಷತೆಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಹಾಗಿದ್ರೆ, ಬನ್ನಿ ಈ ಮೊಬೈಲ್ ಯಾವೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಅಂತ ನೋಡೋಣ.
ಇನ್ಫಿನಿಕ್ಸ್ GT 30 ಪ್ರೊ 5G ಫೋನಿನ ಡಿಸ್ಪ್ಲೇ, ಪ್ರೊಸೆಸರ್, ಕ್ಯಾಮೆರಾ ಮತ್ತು ಬ್ಯಾಟರಿಯ ಬಗ್ಗೆ ಮಾಹಿತಿಯನ್ನು ಟಿಪ್‌ಸ್ಟರ್ ಹಂಚಿಕೊಂಡಿದ್ದಾರೆ. ಅದರಂತೆ, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಅಲ್ಟಿಮೇಟ್ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿರುತ್ತದೆ. ಈ ಮೊಬೈಲ್ 6.78 ಇಂಚಿನ ಡಿಸ್ಪ್ಲೇ ಹೊಂದಿರಲಿದೆ. ಜೊತೆಗೆ 5500mAh ಬ್ಯಾಟರಿ ಮತ್ತು 67W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ. ಇದು ಇನ್ಫಿನಿಕ್ಸ್ GT 20 ಪ್ರೊ ಫೋನಿನ ಉತ್ತರಾಧಿಕಾರಿಯಾಗಿ ಬರಲಿದೆ.

ಇನ್ಫಿನಿಕ್ಸ್ GT 20 ಪ್ರೊ ಬೆಲೆ
ಇನ್ಫಿನಿಕ್ಸ್ GT 20 ಪ್ರೊ ಮೊಬೈಲ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನಿನ 8GB RAM + 256GB ಸ್ಟೋರೇಜ್ ಮಾದರಿಯನ್ನು 22,999 ರೂ. ಬೆಲೆಗೆ ಪರಿಚಯಿಸಲಾಗಿದೆ. ಹಾಗೆಯೇ, 12GB RAM + 256GB ಸ್ಟೋರೇಜ್ ರೂಪಾಂತರವು 25,999 ರೂ.ಗೆ ಲಭ್ಯವಿದೆ. ಮುಂಬರುವ ಇನ್ಫಿನಿಕ್ಸ್ GT 30 ಪ್ರೊ ಫೋನ್ ಸಹ ಇದೇ ಬಜೆಟ್ ವಿಭಾಗದಲ್ಲಿ ಬರುವ ಸಾಧ್ಯತೆಯಿದೆ.
ಇನ್ಫಿನಿಕ್ಸ್ GT 30 ಪ್ರೊ ವೈಶಿಷ್ಟ್ಯಗಳು (ಲೀಕ್)
ಡಿಸ್ಪ್ಲೇ ವಿವರ
ಇನ್ಫಿನಿಕ್ಸ್ GT 30 ಪ್ರೊ ಫೋನ್ 6.78 ಇಂಚಿನ ಹೆಚ್‌ಡಿ ಅಮೋಲೆಡ್ ಡಿಸ್ಪ್ಲೇ ಹೊಂದಿರುತ್ತದೆ. ಇದು ಪಂಚ್ ಹೋಲ್ ಶೈಲಿಯ ಫ್ಲಾಟ್ ಸ್ಕ್ರೀನ್ ಆಗಿರಲಿದೆ. ಈ ಡಿಸ್ಪ್ಲೇಯು 1224 x 2720 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುತ್ತದೆ. ಇದರೊಂದಿಗೆ 144Hz ರಿಫ್ರೆಶ್ ದರ ಮತ್ತು ಹೆಚ್ಚಿನ ಬ್ರೈಟ್‌ನೆಸ್ ಬೆಂಬಲ ಪಡೆದಿರಲಿದೆ.
ಪ್ರೊಸೆಸರ್ ಸಾಮರ್ಥ್ಯ
ಮುಂಬರುವ ಇನ್ಫಿನಿಕ್ಸ್ GT 30 ಪ್ರೊ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 8350 ಅಲ್ಟಿಮೇಟ್ ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಎಐ (ಕೃತಕ ಬುದ್ಧಿಮತ್ತೆ) ಬೆಂಬಲಕ್ಕಾಗಿ, ಇದು ಎಐ ಮೀಡಿಯಾ ಟೆಕ್ ಎನ್‌ಪಿಯು ಸಹ ಒಳಗೊಂಡಿರಲಿದೆ. ಈ ಇನ್ಫಿನಿಕ್ಸ್ ಫೋನ್ ಆಂಡ್ರಾಯ್ಡ್ 15 ಆಧಾರಿತ XOS 15 ಜೊತೆಗೆ ಕೆಲಸ ನಿರ್ವಹಿಸುತ್ತದೆ.
ಕ್ಯಾಮೆರಾ ಸೆಟಪ್
ಇನ್ಫಿನಿಕ್ಸ್ GT 30 ಪ್ರೊ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ತಂತ್ರಜ್ಞಾನ) ಜೊತೆಗೆ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಇದರೊಂದಿಗೆ, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಇರುತ್ತದೆ. ವರದಿಯ ಪ್ರಕಾರ, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಈ ಫೋನ್ 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರಲಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಇನ್ಫಿನಿಕ್ಸ್ GT 30 ಪ್ರೊ ಫೋನ್ ದೊಡ್ಡ ಡಿಸ್ಪ್ಲೇ ಮತ್ತು ದೊಡ್ಡ ಕ್ಯಾಮೆರಾ ಜೊತೆಗೆ, ದೊಡ್ಡ ಬ್ಯಾಟರಿ ಸಹ ಹೊಂದಿರುತ್ತದೆ. ಈ ಮೊಬೈಲ್ 5,500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನುಚಾರ್ಜ್ ಮಾಡಲು, 67W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು.


Click it and Unblock the Notifications








