Home
ಮೊಬೈಲ್

ಸದ್ದಿಲ್ಲದೆ Infinix Hot 50i ಲಾಂಚ್: ಬಿಗ್ ಬ್ಯಾಟರಿ, ಅದ್ಭುತ ಕ್ಯಾಮೆರಾ.. ಬೆಲೆ ಎಷ್ಟು?

Infinix Hot 50i Launched: ಇನ್ಫಿನಿಕ್ಸ್‌ (Infinix) ಕಂಪನಿಯು ಸದ್ದಿಲ್ಲದೆ, ಹೊಸ ಫೋನನ್ನು ಬಿಡುಗಡೆ ಮಾಡಿದೆ. ತನ್ನ Hot 50 ಸರಣಿಯ ಅಡಿಯಲ್ಲಿ ಈ ಹೊಸ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಇದನ್ನು ಇನ್ಫಿನಿಕ್ಸ್‌ ಹಾಟ್ 50i (Infinix Hot 50i) ಎಂಬ ಹೆಸರಿನೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಈ ಫೋನ್ ಘಾನಾದಲ್ಲಿ ಮಾತ್ರ ಲಾಂಚ್ ಆಗಿದೆ. ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೂ ಲಗ್ಗೆ ಇಡಲಿದೆ. ಬನ್ನಿ, ಈ ಹೊಸ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಇನ್ಫಿನಿಕ್ಸ್‌ ಹಾಟ್ 50i (Infinix Hot 50i) ಫೋನ್‌ ಅಧಿಕೃತವಾಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಫೋನ್‌ 120Hz ರಿಫ್ರೆಶ್ ರೇಟ್ ಡಿಸ್ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಹೆಲಿಯೊ G81 ಚಿಪ್‌ಸೆಟ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. ಇದಲ್ಲದೆ, ಈ ಫೋನ್ 5000mAh ಬ್ಯಾಟರಿ, 18W ವೇಗದ ಚಾರ್ಜಿಂಗ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸದ್ದಿಲ್ಲದೆ Infinix Hot 50i ಲಾಂಚ್: ಬಿಗ್ ಬ್ಯಾಟರಿ, ಮಸ್ತ್ ಕ್ಯಾಮೆರಾ.. ಬೆಲೆ?

ಇನ್ಫಿನಿಕ್ಸ್‌ ಹಾಟ್ 50i ಫೋನಿನ ವಿನ್ಯಾಸ

ಪೋಸ್ಟರ್ ಪ್ರಕಾರ, ನೂತನ ಇನ್ಫಿನಿಕ್ಸ್‌ ಹಾಟ್ 50i ಅನ್ನು ಕರ್ವ್ ಸ್ಕ್ವೇರ್ ಆಕಾರದ ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಪರಿಚಯಿಸಲಾಗಿದೆ. ಇದರಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಎಲ್ಇಡಿ ಫ್ಲ್ಯಾಷ್ ಕಾಣಬಹುದು. ಈ ಫೋನ್‌ ಮುಂಭಾಗದಲ್ಲಿ ಫ್ಲಾಟ್ ಡಿಸ್ಪ್ಲೇ ಮತ್ತು ಪಂಚ್ ಹೋಲ್ ನಾಚ್ ವಿನ್ಯಾಸವನ್ನು ಹೊಂದಿದೆ. ಸ್ಪೀಕರ್ ಗ್ರಿಲ್ ಸಾಧನದ ಮೇಲ್ಭಾಗದಲ್ಲಿದೆ. ಕಂಪನಿಯ ಪ್ರಕಾರ, ಇದು ಅಲ್ಟ್ರಾ-ಸ್ಲಿಮ್ ಮತ್ತು ಅಲ್ಟ್ರಾ-ಬಾಳಿಕೆ ಬರುವ ಬಾಡಿಯೊಂದಿಗೆ ಬರುತ್ತದೆ. ಇದು ಟೈಟಾನಿಯಂ ಬೂದು ಬಣ್ಣದಲ್ಲಿ ಮಾತ್ರ ಬರುತ್ತದೆ.

ಇನ್ಫಿನಿಕ್ಸ್‌ ಹಾಟ್ 50i ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ಇನ್ಫಿನಿಕ್ಸ್‌ ಹಾಟ್ 50i ಮೊಬೈಲ್ ದೊಡ್ಡ 6.7 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು ಡೈನಾಮಿಕ್ ಬಾರ್ ವೈಶಿಷ್ಟ್ಯವನ್ನು ಸಹ ಹೊಂದಿದೆ. ಇದರಲ್ಲಿ ಪ್ರಮುಖ ನೋಟಿಫಿಕೇಶನ್‌ಗಳನ್ನು ತೋರಿಸಲಾಗುತ್ತದೆ.

ಪ್ರೊಸೆಸರ್: ಕಂಪನಿಯು ಹೊಸ ಇನ್ಫಿನಿಕ್ಸ್‌ ಹಾಟ್ 50i ಮೊಬೈಲ್ ಅನ್ನು ಮೀಡಿಯಾ ಟೆಕ್ ಹೆಲಿಯೊ G81 ಚಿಪ್‌ಸೆಟ್‌ನೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದೆ. ಇದು ಸುಗಮ ಅನುಭವವನ್ನು ನೀಡುತ್ತದೆ.

ಈ ಸುದ್ದಿ ಓದಿದ್ದೀರಾ?: Infinix: ನಾಳೆ ಹೊಸ 5G ಫೋನ್ ಸೇಲ್: 3,000 ರಿಯಾಯಿತಿ.. 5% ಕ್ಯಾಶ್‌ಬ್ಯಾಕ್!

ಕ್ಯಾಮೆರಾ: ಕ್ಯಾಮೆರಾ ಸೆಟಪ್‌ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲೆನ್ಸ್ ಅನ್ನು ನೀಡಲಾಗಿದೆ. ಇತರೆ ಕ್ಯಾಮೆರಾ ಲೆನ್ಸ್ ಮತ್ತು ಮುಂಭಾಗದ ಕ್ಯಾಮೆರಾದ ವಿವರಗಳು ಇನ್ನೂ ಲಭ್ಯವಿಲ್ಲ.

ಬ್ಯಾಟರಿ: ಕಂಪನಿಯು ಈ ಮೊಬೈಲ್‌ ಅನ್ನು ದೊಡ್ಡ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದನ್ನು ವೇಗವಾಗಿ ಚಾರ್ಜ್‌ ಮಾಡಲು, 18W ವೇಗದ ಚಾರ್ಜಿಂಗ್‌ ಬೆಂಬಲ ಲಭ್ಯವಿದೆ.

ಇತರೆ ಫೀಚರ್ಸ್‌: ಕಂಪನಿಯ ಪ್ರಕಾರ, ಇನ್ಫಿನಿಕ್ಸ್‌ ಹಾಟ್ 50i ಫೋನ್‌, 48 ತಿಂಗಳ TUV ನಿರರ್ಗಳ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದು 300% ಅಲ್ಟ್ರಾ ಪರಿಮಾಣದೊಂದಿಗೆ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ.

ಇನ್ಫಿನಿಕ್ಸ್‌ ಹಾಟ್ 50i ಫೋನಿನ ಬೆಲೆ ಎಷ್ಟು?

ಕಂಪನಿಯು ಜಾಗತಿಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸ್ತುತ ಹಲವು ವೈಶಿಷ್ಟ್ಯಗಳನ್ನು ಮಾತ್ರ ಬಹಿರಂಗಪಡಿಸಿದೆ. ಈ ಫೋನಿನ ಬೆಲೆ ಕೂಡ ಇನ್ನೂ ತಿಳಿದುಬಂದಿಲ್ಲ. ಮುಂಬರುವ ದಿನಗಳಲ್ಲಿ ಕಂಪನಿಯು ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಪ್ರಕಟಿಸಲಿದೆ. ನೀವು, ಹೊಸ ಫೋನನ್ನು ಖರೀದಿಸಲು ಬಯಸಿದರೆ ಸ್ವಲ್ಪ ದಿನ ಕಾಯುವುದು ಉತ್ತಮ.

Best Mobiles in India

English summary
infinix hot 50i launched globally: know Price, Specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+