Home
ಮೊಬೈಲ್

ಶಿಯೋಮಿಗೆ ಸೆಡ್ಡು: 3GB RAM, 20 MP ಸೆಲ್ಫಿ, 4000mAh ಬ್ಯಾಟರಿ, ಬೆಲೆ ಊಹಿಸಲಾಗದಷ್ಟು ಕಡಿಮೆ..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಕೊಳ್ಳಲು ಕೈ ತುಂಬ ಕಾಸು ಇರಲೇಬೇಕು ಎನ್ನುವ ದಿನಗಳು ಕಳೆದಾಗಿದೆ. ನಿಮ್ಮ ಬಳಿಗೆ ಇರುವ ಮೊತ್ತಕ್ಕೆ ಟಾಪ್ ಫೀಚರ್ ಗಳನ್ನು ಹೊಂದಿರುವ ಬೊಂಬಾಟ್ ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳಬಹುದಾಗಿದೆ. ಇದಕ್ಕಾಗಿಯೇ ಆನ್‌ಲೈನ್‌ ತಾಣಗಳು ದಿನಕ್ಕೊಂದು ಆಫರ್ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ರಿಲೀಸ್ ಮಾಡುತ್ತಿವೆ. ಇದೇ ಮಾದರಿಯಲ್ಲಿ ಫ್ಲಿಪ್ ಕಾರ್ಟಿನಲ್ಲಿ ಕಾಣಿಸಿಕೊಂಡಿರುವ ಇನ್‌ಫಿಕ್ಸ್ ಸ್ಮಾರ್ಟ್‌ಫೋನ್ ನಿಮ್ಮ ಬಜೆಟ್‌ಗೆ ಟಾಫ್ ಫೋನ್ ಆಗಲಿದೆ.

 3GB RAM, 20 MP ಸೆಲ್ಫಿ, 4000mAh ಬ್ಯಾಟರಿ, ಬೆಲೆ ಊಹಿಸಲಾಗದಷ್ಟು ಕಡಿಮೆ..!

ಫ್ಲಿಪ್‌ಕಾರ್ಟಿನಲ್ಲಿ ಮೊದಲ ಸೇಲ್‌ನಲ್ಲಿಯೇ ಶಿಯೋಮಿಯನ್ನು ಮೀರಿಸುವ ಮಾದರಿಯಲ್ಲಿ ಸೋಲ್ಡ್ ಔಟ್ ಆಗಿರುವ ಇನ್‌ಫಿನಿಕ್ಸ್ ಹಾಟ್ S3 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿದ್ದು, ಈಗಾಗಲೇ ಎರಡನೇ ಸೇಲ್‌ಗೆ ಭರ್ಜರಿ ತಯಾರಿಯನ್ನು ನಡೆಸಿದೆ. ಉತ್ತಮ ಗುಣಮಟ್ಟ ಮತ್ತು ಫೀಚರ್‌ಗಳು ಈ ಫೋನಿನ ಶಕ್ತಿ ಎಂದರೆ ತಪ್ಪಾಗಲಾರದು. ಈ ಹಿನ್ನಲೆಯಲ್ಲಿ ಈ ಸುಂದರ ಫೋನಿನ ಕುರಿತ ಮಾಹಿತಿಯೂ ಮುಂದಿನಂತಿದೆ.

20 MP ಸೆಲ್ಫಿ ಕ್ಯಾಮೆರಾ:

20 MP ಸೆಲ್ಫಿ ಕ್ಯಾಮೆರಾ:

ಇನ್‌ಫಿನಿಕ್ಸ್ ಹಾಟ್ S3 ಸ್ಮಾರ್ಟ್‌ಫೋನ್ ತನ್ನ ಸೆಲ್ಫಿ ಕ್ಯಾಮೆರಾದಿಂದಲೇ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದೆ. ಇದರಲ್ಲಿ 20 MP ಸೆಲ್ಫಿ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಉತ್ತಮ ಸೆಲ್ಪಿಗಳನ್ನು ತೆಗೆಯಲು ಇದು ಸಹಾಯಕಾರಿಯಾಗಿದೆ. ಹಿಂಭಾಗದಲ್ಲಿ 13MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದರಲ್ಲೂ ಉತ್ತಮ ಚಿತ್ರಗಳನ್ನು ತೆಗೆಯಬಹುದಾಗಿದೆ. ಎರಡು ಕಡೆಯಲ್ಲಿಯೂ LED ಪ್ಲಾಷ್ ಲೈಟ್ ನೀಡಲಾಗಿದೆ.

ಫುಲ್ ಸ್ಕ್ರಿನ್ ಡಿಸ್‌ಪ್ಲೇ:

ಫುಲ್ ಸ್ಕ್ರಿನ್ ಡಿಸ್‌ಪ್ಲೇ:

ಇನ್‌ಫಿನಿಕ್ಸ್ ಹಾಟ್ S3 ಸ್ಮಾರ್ಟ್‌ಫೋನ್‌ನಲ್ಲಿ 5.65 ಇಂಚಿನ HD + ರೆಸಲ್ಯೂಷನ್ ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 18:9 ಅನುಪಾತದಿಂದ ಕೂಡಿದೆ. ಇದರಲ್ಲಿ ಸಿನೆಮಾ ಮತ್ತು ಟಿವಿ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. ಒಂದೇ ಕೈ ನಲ್ಲಿ ಬಳಕೆ ಮಾಡಿಕೊಳ್ಳಲು ಸೂಕ್ತವಾಗಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಇನ್‌ಫಿನಿಕ್ಸ್ ಹಾಟ್ S3 ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 430 ಆಕ್ಟಾ-ಕೋರ್ ಪ್ರೊಸೆಸರ್ ಮತ್ತು 3 GB RAM ನೊಂದಿಗೆ ಕಾಣಿಸಿಕೊಳ್ಳಲಿದ್ದು, ಮಲ್ಟಿ ಟಾಸ್ಕ್ ನಡೆಸಲು ಶಕ್ತವಾಗಿದೆ. ಇದಲ್ಲದೇ ಈ ಫೋನಿನಲ್ಲಿ 32 GB ಆಂತರಿಕ ಮೆಮೊರಿಯನ್ನು ಕಾಣಬಹುದಾಗಿದೆ. ಅಲ್ಲದೇ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಡೊಡ್ಡ ಬ್ಯಾಟರಿ:

ಡೊಡ್ಡ ಬ್ಯಾಟರಿ:

ಇನ್‌ಫಿನಿಕ್ಸ್ ಹಾಟ್ S3 ಸ್ಮಾರ್ಟ್‌ಫೋನ್‌ನಲ್ಲಿ ದೊಡ್ಡದಾದ 4000 mAh ಬ್ಯಾಟರಿಯನ್ನು ಕಾಣಬಹುದಾಗಿದ್ದು, ಇದು ನಿಮಗೆ 2 ದಿನಗಳ ಕಾಲ ಮೊಬೈಲ್ ಬಳಸಲು ಅನುಕೂಲ ಮಾಡಿಕೊಡಲಿದೆ.

ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಇದಲ್ಲದೇ ಇನ್‌ಫಿನಿಕ್ಸ್ ಹಾಟ್ S3 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದ್ದು, ಅಲ್ಲದೇ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಬೆಲೆ:

ಬೆಲೆ:

ಇನ್‌ಫಿನಿಕ್ಸ್ ಹಾಟ್ S3 ಸ್ಮಾರ್ಟ್‌ಫೋನ್‌ ಎರಡು ಆವೃತ್ತಿಯಲ್ಲಿ ಕಾಣಿಸಿಕೊಂಡಿದೆ. 3GB RAM/ 32 GB ಮೆಮೊರಿಯ ಪೋನ್ ರೂ.8,999ಕ್ಕೆ ದೊರೆಯುತ್ತಿದೆ. ಇದೇ ಮಾದರಿಯಲ್ಲಿ 4GB/ 64GB ಮೆಮೊರಿಯ ಪೋನ್ ರೂ. 10,999ಕ್ಕೆ ಲಭ್ಯವಿರಲಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಓದಿರಿ: ಫಸ್ಟ್‌ ಸೇಲ್‌ನಲ್ಲಿ ನೋಟ್ 5 ದಾಖಲೆ: ಮೂರು ನಿಮಿಷದಲ್ಲಿ ಮೂರು ಲಕ್ಷ ಪೋನ್‌ ಮಾರಾಟ..!

Best Mobiles in India

English summary
Best selfie smartphone in budget price-point. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+