Subscribe to Gizbot

ಫಸ್ಟ್‌ ಸೇಲ್‌ನಲ್ಲಿ ನೋಟ್ 5 ದಾಖಲೆ: ಮೂರು ನಿಮಿಷದಲ್ಲಿ ಮೂರು ಲಕ್ಷ ಪೋನ್‌ ಮಾರಾಟ..!

Written By:

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ದೊಡ್ಡ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಶಿಯೋಮಿ, ತನ್ನ ಪ್ರತಿ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದ ಸಂದರ್ಭದಲ್ಲಿ ಒಂದಲ್ಲ ಒಂದು ದಾಖಲೆಯನ್ನು ನಿರ್ಮಿಸುತ್ತದೆ. ಇದಕ್ಕಾಗಿ ತಾಜಾ ಉದಾಹರಣೆ ಎಂದರೆ ನಿನ್ನೆ ಮೊದಲ ಬಾರಿಗೆ ಮಾರಾಟಕ್ಕೆ ಲಭ್ಯವಾಗಿದ್ದ ರೆಡ್‌ಮಿ ನೋಟ್ 5 ಮತ್ತು ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ಮೂರು ನಿಮಿಷದಲ್ಲಿ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗಿದೆ.

ಫಸ್ಟ್‌ ಸೇಲ್‌ನಲ್ಲಿ ನೋಟ್ 5 ದಾಖಲೆ: ಮೂರು ನಿಮಿಷದಲ್ಲಿ ಮೂರು ಲಕ್ಷ ಪೋನ್‌ ಮಾರಾಟ

ಭಾರೀ ನಿರೀಕ್ಷೆಯನ್ನು ಹುಟ್ಟಿ ಹಾಕಿದ್ದ ರೆಡ್‌ ಮಿ ನೋಟ್ 5 ಸ್ಮಾರ್ಟ್‌ಫೋನ್ ಫಸ್ಟ್ ಸೇಲ್‌ನಲ್ಲಿಯೇ ದಾಖಲೆಯನ್ನು ನಿರ್ಮಿಸಿದೆ. ಈ ಹಿಂದೆಯೂ ರೆಡ್‌ಮಿ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಸಂದರ್ಭದಲ್ಲಿ ಅಭಿಮಾನಿಗಳು ಮುಗಿದ್ದ ಬಿದ್ದು ಕೊಳ್ಳುವುದು ಸಾಮಾನ್ಯವಾಗಿತ್ತು. ಇದೇ ಮಾದರಿಯಲ್ಲಿ ನೋಟ್ 5 ಸ್ಮಾರ್ಟ್‌ಫೋನ್ ಸಹ ಹೊಸ ದಾಖಲೆಗೆ ಸಾಕ್ಷಿಯಾಗಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೂರು ನಿಮಿಷದಲ್ಲಿ ಮೂರು ಲಕ್ಷ:

ಮೂರು ನಿಮಿಷದಲ್ಲಿ ಮೂರು ಲಕ್ಷ:

ರೆಡ್‌ಮಿ ನೋಟ್ 5 ಮತ್ತು ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ಮೂರು ನಿಮಿಷದ ಅವಧಿಯಲ್ಲಿ ಮೂರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿದೆ. ಮಿ.ಕಾಮ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಈ ಸ್ಮಾರ್ಟ್‌ಫೋನ್‌ಗಳು ಫಸ್ಟ್‌ ಸೇಲ್‌ನಲ್ಲಿ ಫಾಸ್ಟ್‌ಆಗಿ ಸೇಲ್ ಆಗಿದೆ.

Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್
ಬಿಗೆಸ್ಟ್ ಸೇಲ್:

ಬಿಗೆಸ್ಟ್ ಸೇಲ್:

ಈ ಕುರಿತು ಮಾಹಿತಿಯನ್ನು ನೀಡಿರುವ ಶಿಯೋಮಿ, ಇದು ಭಾರತೀಯ ಮೊಬೈಲ್ ಇತಿಹಾಸದಲ್ಲಿಯೇ ಅತೀ ದೊಡ್ಡ ಸೇಲ್‌ ಆಗಿದೆ ಎಂದು ವರ್ಣನೆ ಮಾಡಿದೆ. ಇದನ್ನು ಬಿಟ್ಟರೇ ಇಷ್ಟು ವೇಗವಾಗಿ ಇನ್ಯಾವುದೇ ಸ್ಮಾರ್ಟ್‌ಫೋನ್‌ ಮಾರಾಟವಾಗಿಲ್ಲ ಎನ್ನಲಾಗಿದೆ.

ವರ್ಷದ ಮೊದಲ ಸೇಲ್:

ವರ್ಷದ ಮೊದಲ ಸೇಲ್:

ಶಿಯೋಮಿ ಈ ವರ್ಷದಲ್ಲಿ ಮೊದಲ ಬಾರಿಗೆ ಸೇಲ್‌ನಲ್ಲಿ ಕಾಣಿಸಿಕೊಂಡಿತ್ತು. ವರ್ಷದ ಮೊದಲ ಸೇಲ್‌ನಲ್ಲಿಯೇ ಹೆಚ್ಚಿನ ಲಾಭವನ್ನು ಕಂಡಿರುವ ಶಿಯೋಮಿ, ಅಭಿಮಾನಿಗಳಿಗೆ ಇನ್ನಷ್ಟು ಹೊಸ ಫೋನ್‌ಗಳನ್ನು ಪರಿಯಿಸುವ ಕಾರ್ಯವನ್ನು ಮಾಡಲು ಮುಂದಾಗುವುದಾಗಿ ತಿಳಿಸಿದೆ.

ತನ್ನ ದಾಖಲೆಯನ್ನೇ ಅಳಿಸಿದೆ:

ತನ್ನ ದಾಖಲೆಯನ್ನೇ ಅಳಿಸಿದೆ:

ಈ ಹಿಂದೆ ಕಳೆದ ವರ್ಷದಲ್ಲಿ ಫಸ್ಟ್‌ ಸೇಲ್‌ನಲ್ಲಿ ರೆಡ್‌ಮಿ ನೋಟ್ 4, ರೆಡ್‌ಮಿ 4 ಮತ್ತು ರೆಡ್‌ಮಿ 4A ಸ್ಮಾರ್ಟ್‌ಫೋನ್‌ಗಳನ್ನು 2,50,00೦ ಸಂಖ್ಯೆಯಲ್ಲಿ ಮಾರಾಟವನ್ನು ಮಾಡಿ ದಾಖಲೆಯನ್ನು ನಿರ್ಮಿಸಿತ್ತು. ಸದ್ಯ ಈ ದಾಖಲೆಯನ್ನು ಸದ್ದಿಲ್ಲದೇ ಅಳಿಸಿ ಹಾಕಿದೆ. ತನ್ನದೇ ಮತ್ತೊಂದು ನೂತನ ದಾಖಲೆಯನ್ನು ಸ್ಥಾಪಿಸಿದೆ.

ಸೆಕೆಂಡ್ ಸೇಲ್ ಶೀಘ್ರ:

ಸೆಕೆಂಡ್ ಸೇಲ್ ಶೀಘ್ರ:

ರೆಡ್‌ಮಿ ನೋಟ್ 5 ಮತ್ತು ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ಮತ್ತೇ ಫೆಬ್ರವರಿ 28 ರಂದು ಮತ್ತೊಮ್ಮೆ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ, ಮೊದಲನೇ ಸೇಲ್‌ನಲ್ಲಿ ಕೊಂಡುಕೊಳ್ಳಲು ಸಾಧ್ಯವಾಗದವರು ಎರಡನೇ ಸೇಲ್‌ನಲ್ಲಿ ಪ್ರಯತ್ನಿಸಬಹುದಾಗಿದೆ.

ರೆಡ್‌ಮಿ ನೋಟ್ 5 ವಿಶೇಷತೆ:

ರೆಡ್‌ಮಿ ನೋಟ್ 5 ವಿಶೇಷತೆ:

ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನಿನಲ್ಲಿ 5.99 ಇಂಚಿನ FHD ಡಿಸ್‌ಪ್ಲೇ, 5 MP ಸೆಲ್ಪಿ ಕ್ಯಾಮೆರಾ, 12 MP ಹಿಂಬದಿ ಕ್ಯಾಮೆರಾ, ವೇಗದ ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್, ದೊಡ್ಡದಾದ 4000mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಶಿಯೋಮಿ ರೆಡ್‌ ಮಿ ನೋಟ್ 5 ಸ್ಮಾರ್ಟ್‌ಫೋನ್ ಒಟ್ಟು ಎರಡು ಆವೃತ್ತಿಯಲ್ಲಿ ಕಾಣಿಸಿಕೊಂಡಿದೆ. 3GB RAM/ 32GB ಮೆಮೊರಿಯ ಹೊಂದಿರುವ ಸ್ಮಾರ್ಟ್‌ಫೋನ್ ಬೆಲೆ ರೂ.9,999 ಆಗಿದ್ದು, 4GB RAM /64GB ಮೆಮೊರಿಯ ಫೋನ್ ರೂ.11,999ಕ್ಕೆ ದೊರೆಯುತ್ತಿದೆ.

ರೆಡ್‌ ಮಿ ನೋಟ್ 5 ಪ್ರೊ ವಿಶೇಷತೆ:

ರೆಡ್‌ ಮಿ ನೋಟ್ 5 ಪ್ರೊ ವಿಶೇಷತೆ:

5.99 ಇಂಚಿನ FHD ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 636 ಪ್ರೋಸೆಸರ್, 6 GB RAM, 64GB ಮೆಮೊರಿ, ಡ್ಯುಯಲ್ ಕ್ಯಾಮೆರಾ, ಫೇಸ್‌ಅನ್ ಲಾಕ್ ನಂತಹ ಹೈ ಎಂಡ್ ಫೀಚರ್ಸ್ ಹೊಂದಿರುವ ಶಿಯೋಮಿ ರೆಡ್‌ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ ಕೇವಲ ರೂ.16,999ಕ್ಕೆ ಬಿಡುಗಡೆಯಾಗಿದೆ. 4GB RAM ಮತ್ತು 64GB ಮೆಮೊರಿಯ ಆವೃತ್ತಿ ರೂ. 13,999ಕ್ಕೆ ದೊರೆಯುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ಸೇಲ್‌ನಲ್ಲಿ ನೋಟ್‌ 5 ಸಿಕ್ಕಲಿಲ್ಲ ಎನ್ನುವ ಚಿಂತೆ ಬೇಡ: ಬರುತ್ತಿದೆ ಅದನ್ನು ಮೀರಿರುವ ಮೊಟೊ G6

English summary
Xiaomi Sold Over 3 Lakh Units of Redmi Note 5 Pro and Redmi Note 5 Smartphones. to know more visit kannada.gozbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot