6,999ರೂ.ಗೆ ಲಾಂಚ್ ಆಯ್ತು ಇನ್‌ಫಿನಿಕ್ಸ್‌ನ ತ್ರಿವಳಿ ಕ್ಯಾಮೆರಾ ಫೋನ್!

|

ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪನಿಗಳು ಗುರುತಿಸಿಕೊಂಡಿದ್ದು, ಅವುಗಳಲ್ಲಿ ಇನ್‌ಫಿನಿಕ್ಸ್‌ ಸ್ಮಾರ್ಟ್‌ಫೋನ್ ಕಂಪನಿ ಸಹ ಒಂದಾಗಿದೆ. ಈ ಕಂಪನಿಯು ತನ್ನ ಕೆಲವು ಫೋನ್‌ಗಳ ಪರಿಚಯಿಸಿ ಗ್ರಾಹಕರಿಂದ ಮೆಚ್ಚುಗೆ ಪಡೆದುಕೊಂಡಿದ್ದು, ಇದೀಗ ಮತ್ತೆ ಭಾರತೀಯ ಮಾರುಕಟ್ಟೆಗೆ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಒಂದನ್ನು ಲಾಂಚ್‌ ಮಾಡಿದೆ.

 6,999ರೂ.ಗೆ ಲಾಂಚ್ ಆಯ್ತು ಇನ್‌ಫಿನಿಕ್ಸ್‌ನ ತ್ರಿವಳಿ ಕ್ಯಾಮೆರಾ ಫೋನ್!

ಹೌದು, ಇನ್‌ಫಿನಿಕ್ಸ್‌ ಕಂಪನಿಯು ಸ್ಮಾರ್ಟ್ 3 ಪ್ಲಸ್‌ ಹೆಸರಿನ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಕಡಿಮೆ ದರದ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿರುವ ಈ ಫೋನ್ ಬೆಸ್ಟ್‌ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಈ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. 2GB RAM ಮತ್ತು 32GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿದ್ದು, ಆಂಡ್ರಾಯ್ಡ್‌ ಪೈ ಓಎಸ್‌ ಇದರಲ್ಲಿದೆ.

 6,999ರೂ.ಗೆ ಲಾಂಚ್ ಆಯ್ತು ಇನ್‌ಫಿನಿಕ್ಸ್‌ನ ತ್ರಿವಳಿ ಕ್ಯಾಮೆರಾ ಫೋನ್!

ಈ ಸ್ಮಾರ್ಟ್‌ಫೋನಿನ ಪ್ರಮುಖ ಹೈಲೈಟ್‌ ತ್ರಿವಳಿ ಕ್ಯಾಮೆರಾ ಆಗಿದ್ದು, ಗ್ರಾಹಕರಿಗೆ ಕಡಿಮೆ ದರದಲ್ಲಿ ಮೂರು ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್‌ ದೊರೆಯುವ ಮೊದಲ ಸ್ಮಾರ್ಟ್‌ಫೋನ್ ಎನಿಸಿಕೊಳ್ಳಲಿದೆ. ಹಾಗಾದರೇ ಇನ್‌ಫಿನಿಕ್ಸ್‌ ಸ್ಮಾರ್ಟ್‌ 3 ಪ್ರೋ ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ನೋಡೋಣ ಬನ್ನಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

720x1520 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.21 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 19.5:9 ಆಗಿದೆ. ಹಾಗೇ ಡಿಸ್‌ಪ್ಲೇ ಪ್ರತಿ ಇಂಚಿ ಪಿಕ್ಸಲ್ ಸಾಂದ್ರತೆಯು 269 ಆಗಿದ್ದು, ತನ್ನ ವರ್ಗದಲ್ಲಿಯೇ ಉತ್ತಮವಾಗ ಡಿಸ್‌ಪ್ಲೇ ಎನ್ನಬಹುದಾಗಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಸಾಮರ್ಥ್ಯದ 2GHz ಹಿಲಿಯೊ 22 ಪ್ರೊಸೆಸರ್‌ ಈ ಸ್ಮಾರ್ಟ್‌ಫೋನಿನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೇ 2GBRAM ನೀಡಲಾಗಿದ್ದು, ಆಂತರಿಕ ಸಂಗ್ರಹಕ್ಕಾಗಿ 32GB ಸ್ಥಳಾವಕಾಶ ನೀಡಲಾಗಿದೆ.ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯವಾಗಿ 256GB ಸಂಗ್ರಹ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಇನ್‌ಫಿನಿಕ್ಸ್‌ ಸ್ಮಾರ್ಟ್ 3 ಪ್ಲಸ್‌ ಸ್ಮಾರ್ಟ್‌ಫೋನಿನಲ್ಲಿ ಮೂರು ಕ್ಯಾಮೆರಾಗಳನ್ನು ನೀಡಲಾಗಿದ್ದು, 13 ಮೆಗಾಪಿಕ್ಸಲ್ ಕ್ಯಾಮೆರಾ ಇದರ ಅಪಾರ್ಚರ್‌ (f/1.8) ಆಗಿದೆ ಹಾಗೇ ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸಲ್ ನಲ್ಲಿದೆ. ಸೆಲ್ಫಿಗಾಗಿ 8ಮೆಗಾಪಿಕ್ಸಲ್ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ

ಬ್ಯಾಟರಿ

3500mAh ಸಾಮರ್ಥ್ಯದ ಬ್ಯಾಟರಿ ಒದಗಿಸಲಾಗಿದ್ದು, ಉತ್ತಮ ಬ್ಯಾಕ್‌ಅಪ್‌ ನೀಡುವ ಶಕ್ತಿಯನ್ನು ಪಡೆದಿದೆ. ಫಾಸ್ಟ್‌ ಚಾರ್ಜರ್‌ ಸೌಲಭ್ಯ ನೀಡಿಲ್ಲ ಆದರೆ ಉತ್ತಮ ಬೆಂಬಲ ನೀಡುವ ಚಾರ್ಜರ್‌ ನೀಡಲಾಗಿದೆ. ಹಾಗೇ ಬ್ಲೂಟೂತ್ v 5.00 ಸಾಮರ್ಥ್ಯದಲ್ಲಿದ್ದು, ವೇಗವಾಗಿ ಕನೆಕ್ಟ್‌ ಆಗಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್‌ಫಿನಿಕ್ಸ್‌ ಕಂಪನಿಯ ಈ ಹೊಸ ಸ್ಮಾರ್ಟ್‌ಫೋನ್ ಎರಡು ಕಲರ್ ಗಳ ಆಯ್ಕೆಯಲ್ಲಿ ಲಭ್ಯವಿದ್ದು, ಮಿಡ್‌ನೈಟ್‌ ಬ್ಲ್ಯಾಕ್‌, ಶಾಪಿಯರ್‌ ಕಲರ್‌. ದೇಶಿಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆಯು 6,999ರೂ.ಗಳು ಆಗಿದ್ದು, ಪ್ರಮುಖ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ದೊರೆಯಲಿದೆ.

Best Mobiles in India

English summary
Infinix Smart 3 Plus With Triple Rear Cameras And 3,500mAh Battery Launched.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X