ಅಗ್ಗದ ಬೆಲೆಗೆ Infinix Smart 9 ಬಿಡುಗಡೆ: 6,500ಕ್ಕಿಂತ ಕಡಿಮೆ.. ವಿಶೇಷತೆಗಳೇನು?
ಇನ್ಫಿನಿಕ್ಸ್ ಟೆಕ್ ಬ್ರಾಂಡ್ ಅಗ್ಗದ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವಲ್ಲಿ ಪ್ರಸಿದ್ಧವಾಗಿದೆ. ಇದೀಗ, ತನ್ನ ಹೊಸ ಫೋನ್ ಇನ್ಫಿನಿಕ್ಸ್ ಸ್ಮಾರ್ಟ್ 9 (Infinix Smart 9) ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಅಗ್ಗದ ಸ್ಮಾರ್ಟ್‌ಫೋನ್ ಅನ್ನು ಮೊದಲು ಮಲೇಷ್ಯಾದಲ್ಲಿ ಪರಿಚಯಿಸಲಾಗಿದೆ. ಇದು ಮುಂದಿನ ದಿನಗಳಲ್ಲಿ ಭಾರತ ಸೇರಿದಂತೆ ಇತರೆ ಮಾರುಕಟ್ಟೆಗಳಿಗೆ ಲಗ್ಗೆ ಇಡಲಿದೆ. ಬನ್ನಿ, ಈ ಅಗ್ಗದ ಇನ್ಫಿನಿಕ್ಸ್ ಸ್ಮಾರ್ಟ್ 9 ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಇನ್ಫಿನಿಕ್ಸ್ ಸ್ಮಾರ್ಟ್ 9 ಮೊಬೈಲ್ ಅಗ್ಗದ ಬೆಲೆಯನ್ನು ಹೊಂದಿದ್ದರೂ, ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಕಂಪನಿಯು ಮೀಡಿಯಾ ಟೆಕ್ ಹೆಲಿಯೊ G81 ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಇದು 6.7 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದರೊಂದಿಗೆ 4GB RAM + 128GB ಸ್ಟೋರೇಜ್, 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗನ್ನು ಹೊಂದಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 9 ಫೋನಿನ ಬೆಲೆ
ಇನ್ಫಿನಿಕ್ಸ್ ಸ್ಮಾರ್ಟ್ 9 ಫೋನನ್ನು ಮಲೇಷ್ಯಾದಲ್ಲಿ 3GBRAM+64GB ಮತ್ತು 4GB+128GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದೆ. 3GBRAM+64GB ಬೆಲೆ 6,200 ರೂ. ಆಗಿದೆ. 4GB+128GB ಬೆಲೆ ಬಹಿರಂಗಪಡಿಸಿಲ್ಲ. ಮಲೇಷಿಯಾ ಮಾರುಕಟ್ಟೆಯಲ್ಲಿ, ಈ ಫೋನ್ ಅನ್ನು ಕಪ್ಪು, ಮಿಂಟ್ ಗ್ರೀನ್, ಗೋಲ್ಡ್ ಮತ್ತು ಸಿಲ್ವರ್ ಬಣ್ಣಗಳಲ್ಲಿ ಖರೀದಿಸಬಹುದು. ಕಂಪನಿಯು ಮುಂಬರುವ ದಿನಗಳಲ್ಲಿ ತನ್ನ ಈ ಹೊಸ ಮೊಬೈಲ್ ಅನ್ನು ಭಾರತದಲ್ಲಿ ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂದು ಬಹಿರಂಗಪಡಿಸಲಿದೆ.
ಇನ್ಫಿನಿಕ್ಸ್ ಸ್ಮಾರ್ಟ್ 9 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಇನ್ಫಿನಿಕ್ಸ್ ಸ್ಮಾರ್ಟ್ 9 ಫೋನ್ 6.7 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 720 x 1600 ಪಿಕ್ಸೆಲ್‌ಗಳ ರೆಸಲ್ಯೂಶನ್, 90.2% ಸ್ಕ್ರೀನ್-ಟು-ಬಾಡಿ ಅನುಪಾತ, 120Hz ರಿಫ್ರೆಶ್ ದರ, 240Hz ಸ್ಪರ್ಶ ಮಾದರಿ ದರ ಮತ್ತು 500 ನಿಟ್ಸ್ ಬ್ರೈಟ್‌ನೆಸ್ ಬೆಂಬಲವನ್ನು ಹೊಂದಿದೆ.
ಪ್ರೊಸೆಸರ್: ಕಂಪನಿಯು ಹೊಸ ಮೊಬೈಲ್ ಅನ್ನು ಮೀಡಿಯಾ ಟೆಕ್ ಹೆಲಿಯೊ G81 ಆಕ್ಟಾ ಕೋರ್ ಪ್ರೊಸೆಸರ್‌ನಲ್ಲಿ ಬಿಡುಗಡೆ ಮಾಡಿದೆ. ಈ 8 ಕೋರ್ ಸಿಪಿಯು 2.0 GHz ಗಡಿಯಾರದ ವೇಗದೊಂದಿಗೆ 2 ಕಾರ್ಟೆಕ್ಸ್-A75 ಕೋರ್‌ಗಳನ್ನು ಮತ್ತು 1.7 GHz ಗಡಿಯಾರದ ವೇಗದೊಂದಿಗೆ 6 ಕಾರ್ಟೆಕ್ಸ್-A55 ಕೋರ್‌ಗಳನ್ನು ಹೊಂದಿದೆ. ಗ್ರಾಫಿಕ್ಸ್‌ಗಾಗಿ, ಈ ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್ ಎಎಂ ಮಾಲಿ G52 MC2 ಜಿಪಿಯು ಅನ್ನು ಬೆಂಬಲಿಸುತ್ತದೆ.
ಸಾಫ್ಟ್‌ವೇರ್: ಇನ್ಫಿನಿಕ್ಸ್ ಸ್ಮಾರ್ಟ್ 9 ಮೊಬೈಲ್ ಅನ್ನು ಆಂಡ್ರಾಯ್ಡ್ 14 ಗೋ ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಈ ಫೋನ್ 3GB ಮತ್ತು 4GB RAM ಅನ್ನು ಬೆಂಬಲಿಸುತ್ತದೆ. ಈ ಎರಡೂ ರೂಪಾಂತರಗಳಲ್ಲಿ ವರ್ಚುವಲ್ RAM ತಂತ್ರಜ್ಞಾನವನ್ನು ಹೊಂದಿವೆ. 64 GB ಮತ್ತು 128 GB ಸ್ಟೋರೇಜ್ ಹೊಂದಿವೆ ಮತ್ತು 2TB ಮೆಮೊರಿ ಕಾರ್ಡ್ ಅನ್ನು ಎರಡರಲ್ಲೂ ಸ್ಥಾಪಿಸಬಹುದು.
ಈ ಸುದ್ದಿ ಓದಿದ್ದೀರಾ?: ಸದ್ದಿಲ್ಲದೆ Realme C65s ಲಾಂಚ್: ಬಿಗ್ ಬ್ಯಾಟರಿ, 256GB ಸ್ಟೋರೇಜ್.. ಕಡಿಮೆ ಬೆಲೆ!
ಕ್ಯಾಮೆರಾ: ಇನ್ಫಿನಿಕ್ಸ್ ಸ್ಮಾರ್ಟ್ 9 ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಇದು ಡ್ಯುಯಲ್ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ನೀಡಲಾಗಿದೆ.
ಬ್ಯಾಟರಿ: ಕಂಪನಿಯು ಇನ್ಫಿನಿಕ್ಸ್ ಸ್ಮಾರ್ಟ್ 9 ಮೊಬೈಲ್ ಅನ್ನು 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಸಂಪೂರ್ಣ ಚಾರ್ಜ್ ಮಾಡಿದ ನಂತರ, ಇದು 34 ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ಈ ಫೋನ್ ಬ್ಯಾಟರಿ ಚಾರ್ಜಿಂಗ್‌ಗಾಗಿ, ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು 10W ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.
ಇತರೆ ವೈಶಿಷ್ಟ್ಯಗಳು: ಈ ಫೋನ್ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ. ಇದರೊಂದಿಗೆ FM ರೇಡಿಯೋ ಸಹ ಲಭ್ಯವಿದೆ. ಇದು ಡ್ಯುಯಲ್ ಸ್ಪೀಕರ್‌ಗಳು, ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP54 ಪ್ರಮಾಣೀಕರಣವನ್ನು ಹೊಂದಿದೆ. ಈ ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್ OTG ಅನ್ನು ಸಹ ಬೆಂಬಲಿಸುತ್ತದೆ. ಇದರ ಮೂಲಕ ಯುಎಸ್‌ಬಿ ಪೆನ್ ಡ್ರೈವ್, ಕೀಬೋರ್ಡ್, ಮೌಸ್‌ನಂತಹ ಇತರ ಸಾಧನಗಳನ್ನು ಸಹ ಮೊಬೈಲ್‌ಗೆ ಸಂಪರ್ಕಿಸಬಹುದು.


Click it and Unblock the Notifications








