Home
ಮೊಬೈಲ್

ಸದ್ದಿಲ್ಲದೆ Realme C65s ಲಾಂಚ್: ಬಿಗ್ ಬ್ಯಾಟರಿ, 256GB ಸ್ಟೋರೇಜ್‌.. ಕಡಿಮೆ ಬೆಲೆ!

ರಿಯಲ್‌ಮಿ (Realme) ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ಇದೆ. ಕಂಪನಿಯು ತನ್ನ 'C' ಸರಣಿಯಲ್ಲಿ ಹೊಸ ಮೊಬೈಲ್‌ ಅನ್ನು ಬಿಡುಗಡೆ ಮಾಡಿದೆ. ಅದುವೇ, ರಿಯಲ್‌ಮಿ C65s (Realme C65s) ಸ್ಮಾರ್ಟ್‌ಫೋನ್. ಕಂಪನಿಯು ನೂತನ ಫೋನನ್ನು ವಿಯೆಟ್ನಾಂನಲ್ಲಿ ಅನಾವರಣಗೊಳಿಸಿದೆ. ಈ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ 'C' ಸರಣಿಯನ್ನು ವಿಸ್ತರಿಸಿದೆ. ನೀವು, 15,000 ರೂ.ಗಳ ಬೆಲೆಯಲ್ಲಿ ಹೊಸ ಫೋನ್‌ ಖರೀದಿಸಲು ಬಯಸಿದರೆ ಇದು ಉತ್ತಮ ಆಯ್ಕೆಯಾಗಿದೆ. ಈ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಲು ಮುಂದೆ ಓದಿ.

ರಿಯಲ್‌ಮಿ C65s ಮೊಬೈಲ್ ಅನ್ನು ಮೂರು ಸ್ಟೋರೇಜ್‌ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಯುನಿಸೊಕ್ T612 ಪ್ರೊಸೆಸರ್ ಅನ್ನು ಹೊಂದಿದೆ. ಈ ಫೋನಿನಲ್ಲಿ 6.74 ಇಂಚಿನ ದೊಡ್ಡ ಡಿಸ್ಪ್ಲೇ ಇದೆ. ಎಐ ಕರೆ ಶಬ್ದ ಕಡಿತ, ಎಐ ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದಲ್ಲದೆ, 45 ವ್ಯಾಟ್ SuperVOOC ವೇಗದ ಚಾರ್ಜಿಂಗ್, 5000mAh ಬ್ಯಾಟರಿ, 16GB RAM ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಸದ್ದಿಲ್ಲದೆ Realme C65s ಲಾಂಚ್: ಬಿಗ್ ಬ್ಯಾಟರಿ, 256GB ಸ್ಟೋರೇಜ್‌.. ಬೆಲೆ?

ರಿಯಲ್‌ಮಿ C65s ಫೋನಿನ ಬೆಲೆ

ರಿಯಲ್‌ಮಿ C65s ಸ್ಮಾರ್ಟ್‌ಫೋನ್ ವಿಯೆಟ್ನಾಂನ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿಮಾಡಲಾಗಿದೆ. ಈ ನೂತನ ಫೋನ್‌ ಮೂರು ಸ್ಟೋರೇಜ್‌ಗಳಲ್ಲಿ ಬಿಡುಗಡೆಯಾಗಿದೆ. 6GB + 128GB ಸ್ಟೋರೇಜ್‌ ಬೆಲೆ ಸುಮಾರು 14,500 ರೂ. (4,290.000 VND) ಇದೆ. 8GB + 128GB ಸ್ಟೋರೇಜ್‌ ರೂಪಾಂತರವು ಸುಮಾರು 16,000 ರೂ.ಗೆ (4,790.000 VND) ಬಿಡುಗಡೆಯಾಗಿದೆ. ಮತ್ತು 8GB + 256GB ಸ್ಟೋರೇಜ್‌ ವೇರಿಯಂಟ್ 18,000 ರೂ. (5,290.000 VND) ಬೆಲೆಯನ್ನು ಹೊಂದಿದೆ.

ರಿಯಲ್‌ಮಿ C65s ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ರಿಯಲ್‌ಮಿ C65s ಸ್ಮಾರ್ಟ್‌ಫೋನ್ 6.74 ಇಂಚಿನ IPS LCD ಐ ಪ್ರೊಟೆಕ್ಷನ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಹೆಚ್‌ಡಿ ಪ್ಲಸ್ ಸ್ಕ್ರೀನ್ ರೆಸಲ್ಯೂಶನ್, 560 ನಿಟ್ಸ್‌ಗಳ ಗರಿಷ್ಠ ಬ್ರೈಟ್‌ನೆಸ್, 90Hz ರಿಫ್ರೆಶ್ ದರ ಮತ್ತು 180 Hz ವರೆಗೆ ಟಚ್ ಸ್ಯಾಂಪ್ಲಿಂಗ್ ದರವನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ.

ಪ್ರೊಸೆಸರ್: ಕಂಪನಿಯು ನೂತನ ಮೊಬೈಲ್ ಅನ್ನು ಪ್ರವೇಶ ಮಟ್ಟದ ಯುನಿಸೊಕ್ T612 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಗ್ರಾಫಿಕ್ಸ್‌ಗಾಗಿ Mali-G57 GPU ನೊಂದಿಗೆ ಬರುತ್ತದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ Realme UI ನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಸ್ಟೋರೇಜ್‌: ರಿಯಲ್‌ಮಿ C65S ಸ್ಮಾರ್ಟ್‌ಫೋನ್ 8GB RAM ಮತ್ತು 256GB ವರೆಗಿನ ಇಂಟರ್ನಲ್ ಸ್ಟೋರೇಜ್‌ ಸೌಲಭ್ಯವನ್ನು ಹೊಂದಿದೆ. ಇದಲ್ಲದೆ, ಈ ಫೋನ್ 8GB ವಿಸ್ತರಿಸಬಹುದಾದ RAM ಅನ್ನು ಸಹ ಹೊಂದಿದೆ. ಇದರಿಂದಾಗಿ 16GB RAM ವರೆಗೆ ಬಳಸಬಹುದು.

ಈ ಸುದ್ದಿ ಓದಿದ್ದೀರಾ?: iPhone 15 Plus ಭಾರೀ ಇಳಿಕೆ: 13,600 ರೂ. ಅಗ್ಗ! ಹೊಸ ಬೆಲೆ ಎಷ್ಟು?

ಕ್ಯಾಮೆರಾ: ಈ ಫೋನ್ ಡ್ಯುಯಲ್ ಕ್ಯಾಮೆರಾ (ಎಐ) ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ. ಈ ಕ್ಯಾಮೆರಾ ನೈಟ್ ಶಾಟ್, ಪನೋರಮಾ, ಪೋರ್ಟ್ರೇಟ್, ಟೈಮ್ ಲ್ಯಾಪ್ಸ್ ಪೋರ್ಟ್ರೇಟ್, ಸ್ಲೋ ಮೋಷನ್, ಕ್ಯೂಆರ್ ಕೋಡ್ ಸ್ಕ್ಯಾನಿಂಗ್, ಗೂಗಲ್ ಲೆನ್ಸ್ ಅನ್ನು ಬೆಂಬಲಿಸುತ್ತದೆ.

ಬ್ಯಾಟರಿ: ಕಂಪನಿಯು ರಿಯಲ್‌ಮಿ C65S ಮೊಬೈಲ್‌ ಅನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪರಿಚಯಿಸಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, SuperVOOC 45W ಫ್ಲಾಶ್ ಚಾರ್ಜಿಂಗ್‌ ಸೌಲಭ್ಯ ಒದಗಿಸಲಾಗಿದೆ. ಈ ಫೋನ್ 167.26×76.67×7.74 ಎಂಎಂ ದಪ್ಪ ಹೊಂದಿದೆ. ಎಮರಾಲ್ಡ್ ಗ್ರೀನ್ 189 ಗ್ರಾಂ ತೂಕ ಮತ್ತು ರಾಯಲ್ ಬ್ಲೂ 191 ಗ್ರಾಂ ತೂಕ ಇದೆ.

ಇತರೆ ವೈಶಿಷ್ಟ್ಯಗಳು: ಈ ಸ್ಮಾರ್ಟ್‌ಫೋನ್ IP54 ವಾಟರ್ ರೆಸಿಸ್ಟೆನ್ಸ್ ರೇಟಿಂಗ್, TUV ರೈನ್‌ಲ್ಯಾಂಡ್ ರೇಟಿಂಗ್ ಪಡೆದಿದೆ. ಎಐ ಕರೆ ಶಬ್ದ ಕಡಿತ, 4 ವರ್ಷಗಳವರೆಗೆ ಸುಗಮ ಕಾರ್ಯಕ್ಷಮತೆ, ಡ್ಯುಯಲ್ ನ್ಯಾನೋ ಸಿಮ್ ಸ್ಲಾಟ್, 4G, ವೈಫೈ 5, ಬ್ಲೂಟೂತ್ 5.0, 3.5 ಎಂಎಂ ಆಡಿಯೋ ಜ್ಯಾಕ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಮೈಕ್ರೊ ಎಸ್‌ಡಿ SD ಕಾರ್ಡ್ ಸ್ಲಾಟ್ ಲಭ್ಯವಿದೆ.

Best Mobiles in India

English summary
Realme C65s launched globally with Unisoc T612 SoC: know price, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+