Infinix: ಬರ್ತಿದೆ ಹೊಸ 5G ಫೋನ್.. ಬಿಡುಗಡೆ ದಿನಾಂಕ ಘೋಷಣೆ; ಇಲ್ಲಿದೆ ಟಾಪ್ 5 ಫೀಚರ್ಸ್
ಇನ್ಫಿನಿಕ್ಸ್ (Infinix) ಕಂಪನಿಯು ಹಾಟ್ 40 5G ಸರಣಿಯನ್ನು ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈಗ ಇದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಇದರ ಅಡಿಯಲ್ಲಿ ಇನ್ಫಿನಿಕ್ಸ್ ಝೀರೋ 40 5G (Infinix Zero 40 5G) ಸ್ಮಾರ್ಟ್‌ಫೋನ್ ಸೆಪ್ಟೆಂಬರ್ 18 ರಂದು ಬಿಡುಗಡೆಯಾಗಲಿದೆ. ಅಧಿಕೃತ ಟೀಸರ್ ಬಿಡುಗಡೆ ಮಾಡುವ ಮೂಲಕ ಕಂಪನಿಯು ಈ ಮಾಹಿತಿಯನ್ನು ಹಂಚಿಕೊಂಡಿದೆ. ಬನ್ನಿ, ಈ ಫೋನಿನ ವಿನ್ಯಾಸ ಮತ್ತು ಟಾಪ್ 5 ಪ್ರಮುಖ ವೈಶಿಷ್ಟ್ಯಗಳನ್ನು ತಿಳಿಯೋಣ.
ಇನ್ಫಿನಿಕ್ಸ್ ಝೀರೋ 40 5G ಸ್ಮಾರ್ಟ್‌ಫೋನ್ ಸೆಪ್ಟೆಂಬರ್ 18 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಬಿಡುಗಡೆಯ ನಂತರ, ಇನ್ಫಿನಿಕ್ಸ್ ಝೀರೋ 40 5G ಮೊಬೈಲ್ ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಮತ್ತು ಇತರ ಚಿಲ್ಲರೆ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಾಗುತ್ತದೆ. ಕಂಪನಿಯು ಅನೇಕ ಎಐ (ಕೃತಕ ಬುದ್ಧಿಮತ್ತೆ) ವೈಶಿಷ್ಟ್ಯಗಳೊಂದಿಗೆ ಈ ಫೋನನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ.

ಇನ್ಫಿನಿಕ್ಸ್ ಝೀರೋ 40 5G ವಿನ್ಯಾಸ
ಟೀಸರ್ ಪೋಸ್ಟರ್ ಪ್ರಕಾರ, ಇನ್ಫಿನಿಕ್ಸ್ ಝೀರೋ 40 5G ಫೋನಿನ ಹಿಂಭಾಗದ ಪ್ಯಾನೆಲ್‌ನಲ್ಲಿ ದೊಡ್ಡ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಇರುತ್ತದೆ. ಇದರ ಹತ್ತಿರ ಎಲ್ಇಡಿ ಫ್ಲ್ಯಾಷ್ ಸಹ ಕಾಣಿಸುತ್ತದೆ. ಇದರೊಂದಿಗೆ, ಇನ್ಫಿನಿಕ್ಸ್ ಬ್ರ್ಯಾಂಡಿಂಗ್ ಅನ್ನು ಕೆಳಭಾಗದಲ್ಲಿ ನೀಡಲಾಗಿದೆ. ಫೋನಿನ ಮುಂಭಾಗದ ಫಲಕದಲ್ಲಿ ಕರ್ವ್ ವಿನ್ಯಾಸ ಮತ್ತು ಪಂಚ್ ಹೋಲ್ ನಾಚ್ ಅನ್ನು ನೋಡಬಹುದು. ಈ ಫೋನ್ ಮೂವಿಂಗ್ ಟೈಟಾನಿಯಂ, ರಾಕ್ ಬ್ಲಾಕ್ ಮತ್ತು ವೈಲೆಟ್ ಗಾರ್ಡನ್ ಬಣ್ಣಗಳ ಆಯ್ಕೆಗಳಲ್ಲಿ ಭಾರತದಲ್ಲಿ ಲಭ್ಯವಿರುತ್ತವೆ.
ಯಾವೆಲ್ಲಾ ಎಐ ಫೀಚರ್ಸ್‌ಗಳಿವೆ?
ಕಂಪನಿಯು ಟೀಸರ್‌ನಲ್ಲಿ Infinix AI ವೈಶಿಷ್ಟ್ಯಗಳನ್ನು ಉಲ್ಲೇಖಿಸಿದೆ. ಇನ್ಫಿನಿಕ್ಸ್ ಝೀರೋ 5G ಸ್ಮಾರ್ಟ್ ವರ್ಧಿತ ವೈಶಿಷ್ಟ್ಯಗಳ ಎಐ ಚಾಲಿತ ಸೂಟ್ ಅನ್ನು ಹೊಂದಿರುತ್ತದೆ ಎಂದು ಖಚಿತಪಡಿಸಲಾಗಿದೆ. ಇದರಲ್ಲಿ ಎಐ ಎರೇಸರ್, ಎಐ ವಾಲ್‌ಪೇಪರ್, ಎಐ ಕಟ್ ಔಟ್ ಸ್ಟಿಕ್ಕರ್ ವೈಶಿಷ್ಟ್ಯ, ಎಐ ವ್ಲಾಗ್, ಎಐ ಇಮೇಜ್ ಜನರೇಟರ್, ಎಐ ಟ್ರಾನ್ಸ್‌ಲೇಟ್ ಮತ್ತು ಎಐ ಟೆಕ್ಸ್ಟ್ ಜನರೇಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳು ಲಭ್ಯವಿರುತ್ತವೆ.
ಇನ್ಫಿನಿಕ್ಸ್ ಝೀರೋ 40 5G ಫೋನಿನ ನಿರೀಕ್ಷಿತ ಬೆಲೆ
ಇನ್ಫಿನಿಕ್ಸ್ ಝೀರೋ 40 5G ಫೋನಿನ ಜಾಗತಿಕ ಬೆಲೆಯನ್ನು ನೋಡಿದರೆ, ಇದು ಭಾರತದಲ್ಲಿ ಸುಮಾರು 25 ರಿಂದ 30 ಸಾವಿರ ರೂ.ಗಳಲ್ಲಿ ಬಿಡುಗಡೆಯಾಗಬಹುದು. ಈ ಸ್ಮಾರ್ಟ್‌ಫೋನ್ ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ Relame 13 Pro ಸರಣಿ, ನಥಿಂಗ್ 2A ಪ್ಲಸ್ ಮತ್ತು Poco X6 Pro ಫೋನ್‌ಗಳೊಂದಿಗೆ ಸ್ಪರ್ಧಿಸಬಹುದು.
ಇನ್ಫಿನಿಕ್ಸ್ ಝೀರೋ 40 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಇನ್ಫಿನಿಕ್ಸ್ ಝೀರೋ 40 5G ಫೋನ್ 6.78 ಇಂಚಿನ 3D ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 144Hz ರಿಫ್ರೆಶ್ ದರ, 1300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲಿಸುತ್ತದೆ. ಇದಲ್ಲದೆ, ಭದ್ರತೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಮತ್ತು TÜV ರೈನ್‌ಲ್ಯಾಂಡ್ ಐ-ಕೇರ್ ಮೋಡ್ ಪ್ರಮಾಣೀಕರಣ ಹೊಂದಿದೆ.
ಪ್ರೊಸೆಸರ್: ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಇನ್ಫಿನಿಕ್ಸ್ ಝೀರೋ 40 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದೇ ಚಿಪ್‌ಸೆಟ್‌ನೊಂದಿಗೆ ಹೊಸ ಫೋನನ್ನು ಭಾರತದಲ್ಲಿ ಪರಿಚಯಿಸುವ ಸಾಧ್ಯತೆಯಿದೆ.
ಸ್ಟೋರೇಜ್: ಈ ನೂತನ ಮೊಬೈಲ್ 12GB RAM ಮತ್ತು 512GB ವರೆಗಿನ ಇಂಟರ್ನಲ್ ಸ್ಟೋರೇಜ್ ಒಳಗೊಂಡಿರುತ್ತದೆ. ಇದರೊಂದಿಗೆ ವಿಸ್ತೃತ RAM ತಂತ್ರಜ್ಞಾನವೂ ಲಭ್ಯವಿರುತ್ತದೆ.
ಈ ಸುದ್ದಿ ಓದಿದ್ದೀರಾ?: Vivo T3 Ultra: ಬಂತು ಗಟ್ಟಿಮುಟ್ಟಾದ 5G ಫೋನ್.. ಸಖತ್ ಫೀಚರ್ಸ್, ಬೆಲೆ ಇಷ್ಟೇನಾ?
ಕ್ಯಾಮೆರಾ: ಈ ಫೋನ್ ಎಲ್ಇಡಿ ಫ್ಲ್ಯಾಷ್‌ನೊಂದಿಗೆ ಹಿಂದಿನ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು. ಇದರಲ್ಲಿ OIS ತಂತ್ರಜ್ಞಾನದೊಂದಿಗೆ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಫ್ರಂಟ್ ಕ್ಯಾಮೆರಾ ಲಭ್ಯವಿರುತ್ತದೆ.


Click it and Unblock the Notifications








