Home
ಮೊಬೈಲ್

ಅಬ್ಬರಿಸಲು ಬಂತು Infinix Zero Flip ಫೋನ್: 50MP ಸೆಲ್ಫಿ ಶೂಟರ್.. 70W ಚಾರ್ಜಿಂಗ್.. ಬೆಲೆ ಇಷ್ಟೊಂದಾ?

ಇನ್ಫಿನಿಕ್ಸ್ ತನ್ನ ಮೊದಲ ಫ್ಲಿಪ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಇನ್ಫಿನಿಕ್ಸ್ ಝೀರೋ ಫ್ಲಿಪ್ 5G (Infinix Zero Flip 5G) ಎಂಬ ಹೆಸರಿನೊಂದಿಗೆ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು ಕಂಪನಿಯ ಮೊದಲ ಫೋಲ್ಡ್ ಫೋನ್ ಆಗಿದೆ. ಈ ಮೊಬೈಲ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಬನ್ನಿ, ನೂತನ ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಸ್ಮಾರ್ಟ್‌ಫೋನ್‌ 6.9 ಇಂಚಿನ ಪ್ರಾಥಮಿಕ ಡಿಸ್ಪ್ಲೇ ಮತ್ತು 3.64 ಇಂಚಿನ ಬಾಹ್ಯ (ಹೊರ) ಡಿಸ್ಪ್ಲೇಯನ್ನು ಹೊಂದಿದೆ. MediaTek ಡೈಮೆನ್ಸಿಟಿ 8020 ಚಿಪ್‌ಸೆಟ್, 8GB RAM ಮತ್ತು 512GB ಸ್ಟೋರೇಜ್ ಒಳಗೊಂಡಿದೆ. 50 ಮೆಗಾಪಿಕ್ಸೆಲ್ ಮುಖ್ಯ ಮತ್ತು ಸೆಲ್ಫಿ ಕ್ಯಾಮೆರಾ, 4,720mAh ಬ್ಯಾಟರಿ, 70W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ.

Infinix Zero Flip ಬಿಡುಗಡೆ: 50MP ಸೆಲ್ಫಿ ಶೂಟರ್, 70W ಚಾರ್ಜಿಂಗ್.. ಬೆಲೆ?

ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಫೋನಿನ ಬೆಲೆ

ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಸ್ಮಾರ್ಟ್‌ಫೋನ್ ಕೇವಲ 8GB+512GB ಆಂತರಿಕ ಸ್ಟೋರೇಜ್‌ನಲ್ಲಿ ಬಿಡುಗಡೆಯಾಗಿದೆ. ಇದರ ಆರಂಭಿಕ ಬೆಲೆ ಸುಮಾರು 50,100 ರೂ. ($600) ಆಗಿದೆ. ಇದು ಬ್ಲಾಸಮ್ ಗ್ಲೋ ಮತ್ತು ರಾಕ್ ಬ್ಲಾಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ. ಜಾಗತಿಕ ದೇಶಗಳಿಗೆ ಅನುಗುಣವಾಗಿ ಫೋನಿನ ಬೆಲೆ ಬದಲಾಗಬಹುದು ಎಂದು ಕಂಪನಿ ಹೇಳಿದೆ.

ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಮೊಬೈಲ್ 6.9 ಇಂಚಿನ LTPO AMOLED FHD+ ಆಂತರಿಕ ಡಿಸ್ಪ್ಲೇಯನ್ನು ಹೊಂದಿದೆ. ಇದು 1080×2640, 120Hz ರಿಫ್ರೆಶ್ ರೇಟ್, 1400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್, 2160Hz PWM ಡಿಮ್ಮಿಂಗ್ ಬೆಂಬಲದ ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಈ ಫೋನ್ 3.64 ಇಂಚಿನ AMOLED ಬಾಹ್ಯ ಡಿಸ್ಪ್ಲೇ ಹೊಂದಿದೆ. ಇದು 1056×1066 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ, 1100 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಮತ್ತು 1920Hz PWM ಮಬ್ಬಾಗಿಸುವಿಕೆ ಬೆಂಬಲವನ್ನು ಹೊಂದಿದೆ. ಇದರೊಂದಿಗೆ, ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಇದೆ.

ಪ್ರೊಸೆಸರ್: ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಸ್ಮಾರ್ಟ್‌ಫೋನ್‌ MediaTek ಡೈಮೆನ್ಸಿಟಿ 8020 ಚಿಪ್‌ಸೆಟ್ ಹೊಂದಿದೆ. ಈ MediaTek ಚಿಪ್ 6 nm ಪ್ರಕ್ರಿಯೆಯ ಆಧಾರದ ಮೇಲೆ ಆಕ್ಟಾ-ಕೋರ್ CPU ಆಗಿದೆ. ಇದು ವಿಸ್ತೃತ ಬೆಂಬಲದೊಂದಿಗೆ 16GB RAM ವರೆಗೆ ಪವರ್ ಮಾಡಬಹುದು. 8GB RAM ಮತ್ತು 512GB ವರೆಗಿನ ಆಂತರಿಕ ಸ್ಟೋರೇಜ್‌ನೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ XOS 14.5 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಈ ಸುದ್ದಿ ಓದಿದ್ದೀರಾ?: ಸದ್ದಿಲ್ಲದೆ Infinix Hot 50i ಲಾಂಚ್: ಬಿಗ್ ಬ್ಯಾಟರಿ, ಅದ್ಭುತ ಕ್ಯಾಮೆರಾ.. ಬೆಲೆ ಎಷ್ಟು?

ಕ್ಯಾಮೆರಾ: ನೂತನ ಫ್ಲಿಪ್ ಮೊಬೈಲ್ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ GN5 ಮುಖ್ಯ ಲೆನ್ಸ್ ಹೊಂದಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ವೈಡ್ ಲೆನ್ಸ್ ಇದೆ. ಇದರಲ್ಲಿ ವ್ಲಾಗಿಂಗ್, ಡಿವಿ ಮೋಡ್, ಗೋಪ್ರೊ ಮೋಡ್ ಮುಂತಾದ ಆಯ್ಕೆಗಳೂ ಇವೆ. ಈ ಫೋನ್ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ JN1, ಆಟೋಫೋಕಸ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ನೀವು, ಈ ಕ್ಯಾಮೆರಾಗಳಿಂದ 4K 60fps ವಿಡಿಯೋ ರೆಕಾರ್ಡಿಂಗ್ ಮಾಡಬಹುದು.

ಬ್ಯಾಟರಿ: ಕಂಪನಿಯು ಈ ಫೋನನ್ನು 4,720mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದನ್ನು ವೇಗವಾಗಿ ಚಾರ್ಜ್‌ ಮಾಡಲು 70W ಚಾರ್ಜಿಂಗ್ ವೇಗದ ಚಾರ್ಜಿಂಗ್ ಲಭ್ಯವಿದೆ. 10W ವೈರ್ಡ್ ರಿವರ್ಸ್ ಚಾರ್ಜಿಂಗ್ ಸಹ ಇದೆ.

ಇತರೆ ವೈಶಿಷ್ಟ್ಯಗಳು: ಇನ್ಫಿನಿಕ್ಸ್ ಝೀರೋ ಫ್ಲಿಪ್ ಮೊಬೈಲ್ 170.35 x 73.4 x 7.64 ಎಂಎಂ (ಬಿಚ್ಚಿದಾಗ) ದಪ್ಪ ಮತ್ತು ಮಡಿಸಿದಾಗ 87.49 x 73.4 x 16.04 ಎಂಎಂ ದಪ್ಪ ಹೊಂದಿದೆ. ಈ ಫೋನ್ 195 ಗ್ರಾಂ ತೂಕವಿದೆ. ಈ ನೂತನ ಫೋನ್ ಸೈಡ್ ಫಿಂಗರ್‌ಪ್ರಿಂಟ್ ಸೆನ್ಸರ್, JBL ಡ್ಯುಯಲ್ ಸ್ಪೀಕರ್, x-ಆಕ್ಸಿಸ್ ಲೀನಿಯರ್ ಮೋಟಾರ್, Wi-Fi 6, ಬ್ಲೂಟೂತ್ 5.4, NFC, USB-C ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
Infinix Zero Flip 5G with MediaTek Dimensity 8020 SoC, 50MP front camera, 4,720mAh battery launched globally: price, specs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+