ಚೀನಾ ಸ್ಮಾರ್ಟ್‌ಫೋನ್‌ಗಳನ್ನು ನುಂಗಿ ಹಾಕಲು ಬಂದಿದೆ ಅಮೆರಿಕಾದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌...!

|

ಅಮೆರಿಕಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯಾದ ಇನ್‌ಫೋಕಸ್ ಭಾರತೀಯ ಮಾರುಕಟ್ಟೆಗೆ ಹೊಸದೊಂದು ಸ್ಮಾರ್ಟ್‌ಫೋನ್ ಅನ್ನು ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡಿದೆ, ಈಗಾಗಲೇ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಫೋನ್‌ಗಳ ಬೇಡಿಕೆಯೂ ಹೆಚ್ಚಾಗಿರುವ ಕಾರಣ ಇನ್‌ ಫೋಕಸ್ A2 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ.

ಚೀನಾ ಸ್ಮಾರ್ಟ್‌ಫೋನ್‌ಗಳನ್ನು ನುಂಗಿ ಹಾಕಲು ಬಂದಿದೆ ಅಮೆರಿಕಾದ ಸ್ಮಾರ್ಟ್‌ಫೋನ್‌

4G VoLTE ಸೇವೆಯನ್ನು ಹೊಂದಿರುವ ಇನ್‌ಫೋಕಸ್ A2 ಸ್ಮಾರ್ಟ್‌ಫೋನ್ ರೂ.5,999ಕ್ಕೆ ಮಾರಾಟವಾಗಲಿದ್ದು, ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಚೀನಾ ಮೂಲಕ ಕಂಪನಿಗಳಿಗೆ ಸಾಕಷ್ಟು ಹೊಡೆತವನ್ನು ನೀಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಇನ್‌ ಫೋಕಸ್ A2 ಸ್ಮಾರ್ಟ್‌ಫೋನ್ ಕುರಿತದ ಮಾಹಿತಿಯೂ ಇಲ್ಲಿದೆ.

ಓದಿರಿ: ನೀವು ಬುದ್ದಿವಂತರಾಗಿದ್ದರೇ ಅಮೆಜಾನ್‌ನಲ್ಲಿ ಎಲ್ಲವು ಉಚಿತ: ಪಡೆಯುವುದು ಹೇಗೆ..?

5 ಇಂಚಿನ HD ಡಿಸ್‌ಪ್ಲೇ:

5 ಇಂಚಿನ HD ಡಿಸ್‌ಪ್ಲೇ:

ಇನ್‌ಫೋಕಸ್ A2 ಸ್ಮಾರ್ಟ್‌ಫೋನಿನಲ್ಲಿ 5 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದಲ್ಲದೇ ಇದಕ್ಕೆ 2.5D ಕರ್ವಡ್ ಗ್ಲಾಸ್ ಸುರಕ್ಷತೆಯನ್ನು ಹೊಂದಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಡಿಸ್‌ಪ್ಲೇಯೂ ಉತ್ತಮವಾಗಿದ್ದು, ವಿಡಿಯೋ ನೋಡಲು ಮತ್ತು ಗೇಮಿಂಗ್ ಗಾಗಿ ಹೇಳಿ ಮಾಡಿಸಿದಂತಿದೆ.

2GB RAM-16GB ಇಂಟರ್ನಲ್ ಮೆಮೊರಿ:

2GB RAM-16GB ಇಂಟರ್ನಲ್ ಮೆಮೊರಿ:

ಇದಲ್ಲದೇ ಇನ್‌ ಫೋಕಸ್ A2 ಸ್ಮಾರ್ಟ್‌ಫೋನಿನಲ್ಲಿ ಸೆಪೆರೆಡ್ರಮ್ ಚಿಪ್ ಸೆಟ್ ನೊಂದಿಗೆ 2GB RAM ಮತ್ತು 16 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಇದಲ್ಲದೇ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

5MP ಕ್ಯಾಮೆರಾ ಕಾಣಬಹುದು:

5MP ಕ್ಯಾಮೆರಾ ಕಾಣಬಹುದು:

ಇದಲ್ಲದೇ ಈ ಸ್ಮಾರ್ಟ್‌ಫೋನಿನಲ್ಲಿ 5MP ಕ್ಯಾಮೆರಾವನ್ನು ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ ಕಾಣಬಹುದಾಗಿದೆ. ಅಲ್ಲದೇ LED ಫ್ಲಾಷ್ ಲೈಟ್ ಅನ್ನು ಅಳವಡಿಸಲಾಗಿದೆ. ಇದರಿಂದ ತೆಗೆಯುವ ಫೋಟೋಗಳು ಉತ್ತಮವಾಗಿ ಮೂಡಿಬರಲಿದೆ.

ಆಂಡ್ರಾಯ್ಡ್ 7.1:

ಆಂಡ್ರಾಯ್ಡ್ 7.1:

ಇದಲ್ಲದೇ ಇನ್‌ ಫೋಕಸ್ A2 ಸ್ಮಾರ್ಟ್‌ ಫೋನ್‌ನಲ್ಲಿ ಆಂಡ್ರಾಯ್ಡ್ ನ್ಯಾಗಾ 7.1 ಅನ್ನು ಕಾಣಬಹುದಾಗಿದೆ. ಇದಲ್ಲದೇ ಡ್ಯುಯಲ್ ಹೈಬ್ರಿಡ್ ಸಿಮ್ ಸ್ಲಾಟ್ ಅನ್ನು ಸಹ ನೀಡಲಾಗಿದೆ. ಜೊತೆಗೆ 2,400 mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

Best Mobiles in India

English summary
InFocus A2 entry-level smartphone launched in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X