Subscribe to Gizbot

ಇಂಟೆಕ್ಸ್‌ ಬಿಡುಗಡೆ ಮಾಡಲಿದೆ ಅಕ್ಟಾ ಕೋರ್‌ ಪ್ರೊಸೆಸರ್‌ ಸ್ಮಾರ್ಟ್‌ಫೋನ್‌

Posted By:


ಭಾರತೀಯ ಸ್ಮಾರ್ಟ್‌ಫೋನ್‌ ಕಂಪೆನಿಗಳು ದೇಶದ ಮಾರುಕಟ್ಟೆಯಲ್ಲಿ ಜಾಗತಿಕ ಮಟ್ಟದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪೆನಿಗಳಿಗೆ ಸ್ಪರ್ಧೆ‌ ನೀಡಿ ಯಶಸ್ಸುಗಳಿಸಿರುವುದು ಹಳೇಯ ಸುದ್ದಿ. ಈಗ ಹೊಸ ಸುದ್ದಿ ಏನಪ್ಪಾ ಅಂದ್ರೆ ಸ್ಮಾರ್ಟ್‌ಫೋನ್‌ಗಳ ಗುಣಮಟ್ಟದಲ್ಲೂ ಜಾಗತಿಕ ಕಂಪೆನಿಗಳಿಗೆ ಸರಿಸಮವಾಗಿ ತಯಾರಿಸಲು ಭಾರತೀಯ ಕಂಪೆನಿಗಳು ಮುಂದಾಗಿದೆ.

ಭಾರತೀಯ ಮೂಲದ ಇಂಟೆಕ್ಸ್‌ ಕಂಪೆನಿ ಅಕ್ಟಾ ಕೋರ್‌(ಎಂಟು ಕೋರ್‌) ಪ್ರೊಸೆಸರ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಡಲು ಮುಂದಾಗಿದೆ. ವಿಶ್ವದ ವಿವಿಧ ಸ್ಮಾರ್ಟ್‌ಫೋನ್‌‌ಗಳನ್ನು ತಯಾರಿಸುವ ಕಂಪೆನಿಗಳು ಅಕ್ಟಾಕೋರ್‌ ಪ್ರೊಸೆಸರ್‌ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲು ಮುಂದಾಗುತ್ತಿವೆ. ಸ್ಯಾಮ್‌ಸಂಗ್‌ ಈಗಾಗಲೇ ತನ್ನ ಗೆಲಾಕ್ಸಿ ಎಸ್‌4 ಮತ್ತು ನೋಟ್‌ 3 ಫ್ಯಾಬ್ಲೆಟ್‌ನ್ನು ಅಕ್ಟಾ ಕೋರ್‌ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ.

 ಇಂಟೆಕ್ಸ್‌ ಬಿಡುಗಡೆ ಮಾಡಲಿದೆ ಅಕ್ಟಾ ಕೋರ್‌ ಪ್ರೊಸೆಸರ್‌ ಸ್ಮಾರ್ಟ್‌ಫೋನ್‌

ಚೀನಾದ ಮೀಡಿಯಾ ಟೆಕ್‌, ಅಮೆರಿಕದ ಕ್ವಾಲಕಂ,ಎನ್‌‌ವಿಡಿಯ, ಬ್ರಾಡ್‌ಕಾಂ ಕಂಪೆನಿಗಳು ತಯಾರಿಸಿದ ಚಿಪ್‌ಗಳನ್ನು ಸ್ಮಾರ್ಟ್‌ಫೋನ್‌ ಕಂಪೆನಿಗಳು ತಮ್ಮ ಫ್ಯಾಬ್ಲೆಟ್‌,ಟ್ಯಾಬ್ಲೆಟ್‌ನಲ್ಲಿ ಬಳಸುತ್ತವೆ. ಮಿಡಿಯಾ ಟೆಕ್‌ ಕಂಪೆನಿಯ ಜೊತೆ ಇಂಟೆಕ್ಸ್‌ ಒಪ್ಪಂದವಾಗಿದ್ದು, ಮುಂದಿನ ವರ್ಷದ ಜನವರಿಯಲ್ಲಿ ಅಕ್ಟಾ ಕೋರ್‌‌ ಪ್ರೊಸೆಸರ್‌‌ನೊಂದಿಗೆ ಸ್ಮಾರ್ಟ್‌‌ಫೋನ್‌ ಬಿಡುಗಡೆ ಮಾಡಲು ಯೋಜನೆ ಇಂಟೆಕ್ಸ್‌ ಯೋಜನೆ ರೂಪಿಸಿದೆ. ಹೊಸ ಸ್ಮಾರ್ಟ್‌ಫೋನ್‌ ಡ್ಯುಯಲ್‌ ಸಿಮ್‌,6 ಇಂಚಿನ ಎಚ್‌ಡಿ ಸ್ಕ್ರೀನ್‌ ಹೊಂದಿದ್ದು 20 ಸಾವಿರದೊಳಗೆ ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ಇಂಟೆಕ್ಸ್‌ ಬಿಡುಗಡೆ ಮಾಡಲಿದೆ.

1.7GHz ಅಕ್ಟಾ ಕೋರ್‌ ಮಿಡಿಯಾಟೆಕ್‌ ಎಂಟಿ 6592 ಪ್ರೊಸೆಸರ್‌,ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌,13 ಎಂಪಿ ಹಿಂದುಗಡೆ ಕ್ಯಾಮೆರಾ,5 ಎಂಪಿ ಮುಂದುಗಡೆ ಕ್ಯಾಮೆರಾ,16/ 32GB ಆಂತರಿಕ ಮೆಮೊರಿ,2GB ರ್‍ಯಾಮ್‌ ವಿಶೇಷತೆಯೊಂದಿಗೆ ಇಂಟೆಕ್ಸ್‌ ಫ್ಯಾಬ್ಲೆಟ್‌ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ:ವಿಶ್ವದ ವೇಗದ ಪ್ರೊಸೆಸರ್‌ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ ಯಾವುದು?

ವಿಡಿಯೋ ವೀಕ್ಷಿಸಿ:ಎಚ್‌‌ಪಿ ಪ್ರಿಂಟರ್‌ನಲ್ಲಿ ಪ್ರಿಂಟ್‌,ಸ್ಕ್ಯಾನ್‌,ಫ್ಯಾಕ್ಸ್‌ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot