ಬರಲಿದೆ ಆಪಲ್‌ ಹೊಸ iOS 13 OS ; ಕಾಣಲಿದ್ದಿರಿ ಅಚ್ಚರಿಯ ಫೀಚರ್ಸ್‌!

|

ಆಪಲ್‌ ಕಂಪನಿಯು ಮೊಬೈಲ್‌ ಮಾರುಕಟ್ಟೆಯಲ್ಲಿ ಒಂದಿಲ್ಲೊಂದು ಸುದ್ದಿಯಿಂದ ಸದ್ದು ಮಾಡುತ್ತಲೇ ಇದ್ದು, ಇದೀಗ ಮತ್ತೆ ಹೊಸ ಎಕ್ಸ್‌ಕ್ಲೂಸಿವ್ ಸುದ್ದಿಯೊಂದನ್ನು ಹೊರಹಾಕಿ ಮಾರುಕಟ್ಟೆಯಲ್ಲಿ ಮತ್ತೆ ಸೌಂಡ್‌ ಮಾಡುತ್ತಿದೆ. ಕಂಪನಿಯ ಮುಂಬರಲಿರುವ ಐಫೋನ್ ಮತ್ತು ಐಪೋಡ್‌ಗಳಲ್ಲಿ iOS 13 ಓಎಸ್‌ ಇರಲಿದ್ದು, ಹಲವು ಅಚ್ಚರಿಗಳನ್ನು ತುಂಬಿಕೊಂಡೆ ಹೊರಬರಲಿದೆ. ಐಫೋನ್‌ ಪ್ರಿಯ ಗ್ರಾಹಕರ ಕುತೂಹಲ ಹೆಚ್ಚಿದೆ.

ಬರಲಿದೆ ಆಪಲ್‌ ಹೊಸ iOS 13 OS ; ಕಾಣಲಿದ್ದಿರಿ ಅಚ್ಚರಿಯ ಫೀಚರ್ಸ್‌!

ಹೌದು, ಆಪಲ್‌ ತನ್ನ ಹೊಸ iOS 13 ಓಎಸ್‌ ಅನ್ನು ಇದೇ ಜೂನ್ ತಿಂಗಳಲ್ಲಿ ಕ್ಯಾಲಿಫೊರ್ನಿಯದಲ್ಲಿ ನಡೆಯುವ 'ವರ್ಲ್ಡ್‌ ವೈಡ್‌ ಡೆವಲಪರ್ಸ್ ಕಾನ್ಫರೆಸ್ಸ್‌'ನಲ್ಲಿ(WWDC) ಪರಿಚಯಿಸಲಿದೆ. ಕಂಪನಿಯ ಮುಂದಿನ ಹೊಸ ಐಫೋನ್‌ಗಳಲ್ಲಿ ಮತ್ತು ಐಫೋಡ್‌ ಡಿವೈಸ್‌ಗಳಲ್ಲಿ ಈ iOS 13 ಓಎಸ್‌ ಕೆಲಸಮಾಡಲಿದ್ದು, ಗ್ರಾಹಕರಿಗೆ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದೆ. ಹಾಗೂ ಹಲವು ನೂತನ ಫೀಚರ್ಸ್‌ಗಳನ್ನು ಇನ್‌ಬಿಲ್ಟ್ ಹೊಂದಿರಲಿದೆ.

ಬರಲಿದೆ ಆಪಲ್‌ ಹೊಸ iOS 13 OS ; ಕಾಣಲಿದ್ದಿರಿ ಅಚ್ಚರಿಯ ಫೀಚರ್ಸ್‌!

ಕಳೆದ ವರ್ಷದ 'ವರ್ಲ್ಡ್‌ ವೈಡ್‌ ಡೆವಲಪರ್ಸ್ ಕಾನ್ಫರೆಸ್ಸ್‌'ನಲ್ಲಿ ಕಂಪನಿಯು iOS 12 ಅನ್ನು ಪರಿಚಯಿಸಿತ್ತು. ಇದೇ ರೀತಿ ಈ ವರ್ಷ iOS 13 ಓಎಸ್‌ ಬಳಕೆದಾರರಿಗೆ ಲಭ್ಯವಾಗಿದ್ದು, ಡಾರ್ಕ್‌ ಮೋಡ್‌, ರಿಮೈಂಡರ್‌ ಆಪ್‌, ಫೈಂಡ್‌ ಮೈ ಐಫೋನ್‌ ಸೇರಿದಂತೆ ಮತ್ತಷ್ಟು ಫೀಚರ್ಸ್‌ಗಳು ತುಂಬಿರಲಿವೆ. ಹಾಗಾದರೇ ಆಪಲ್‌ನ iOS 13 ಓಎಸ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಾರ್ಕ್‌ ಮೋಡ್‌

ಡಾರ್ಕ್‌ ಮೋಡ್‌

ಈ ಹಿಂದಿನ ವರ್ಲ್ಡ್‌ ವೈಡ್‌ ಡೆವಲಪರ್ಸ್ ಕಾನ್ಫರೆಸ್ಸ್‌'ನಲ್ಲಿ ಕಂಪನಿ ಹೊಸ ಓಎಸ್‌ ಅನ್ನು ಪರಿಚಯಿಸಿದ್ದು, ಹಾಗೇ ಈ ಸರತಿಯು iOS 13 ಓಎಸ್‌ ಪರಿಚಯಿಸಲಿದ್ದು, ಅದರ ವಿಶೇಷತೆಗಳನ್ನು ಪ್ರದರ್ಶಿಸಲಿದೆ. ಈ ಓಎಸ್‌ನ ವಿಶೇಷತೆ ಡಾರ್ಕ್‌ ಮೋಡ್ ಆಯ್ಕೆ ಆಗಿದ್ದು, ಇನ್‌ಬಿಲ್ಟ್‌ ಹೊಂದಿರಲಿದೆ. ಹೀಗಾಗಿ ಮುಂದಿನ ಐಫೋನ್‌ ಮತ್ತು ಐಫೋಡ್‌ಗಳಲ್ಲಿ ಬಳಕೆದಾರರು ಡಾರ್ಕ್‌ ಮೋಡ್‌ ಫೀಚರ್‌ ಲಭ್ಯವಾಗಲಿದೆ.

ಪರಿಷ್ಕೃತ ಹೆಲ್ತ ಆಪ್‌

ಪರಿಷ್ಕೃತ ಹೆಲ್ತ ಆಪ್‌

ಆಪಲ್‌ ಕಂಪನಿಯ ಉತ್ಪನ್ನಗಳ ಮೇಲೆ ಗ್ರಾಹಕರಿಗೆ ನಿರೀಕ್ಷೆಗಳು ಹೆಚ್ಚಿರುತ್ತವೆ ಆ ನಿರೀಕ್ಷೆಗಳನ್ನು ತಲುಪುವ ಪ್ರಯತ್ನಗಳನ್ನು ಕಂಪನಿ ಮಾಡುತ್ತದೆ. ಈ ನಿಟ್ಟಿನಲ್ಲಿ ಹೊಸ iOS 13 ಓಎಸ್‌ನಲ್ಲಿ ಪರಿಷ್ಕೃತ ಹೆಲ್ತ ಆಪ್‌ ಇನ್‌ಬಿಲ್ಟ್‌ ಆಗಿ ಸೇರಿಕೊಂಡಿರಲಿದ್ದು, ಗ್ರಾಹಕರಿಗೆ ರನ್ನಿಂಗ್, ಡೈಲಿ ಆಕ್ಟಿವಿಟಿ ಎಲ್ಲವನ್ನು ಟ್ರಾಕ್‌ ಮಾಡಲಿದೆ. ಇದರೊಂದಿಗೆ ಹೆಲ್ತ್‌ ಟ್ರಾಕ್‌ಗೆ ಸಂಭಂದಿಸಿದ ಹೆಚ್ಚಿನ ಆಯ್ಕೆಗಳನ್ನು ಒದಗಿಸಲಿದೆ.

ರಿಮೈಂಡರ್‌ ಮತ್ತು ಬುಕ್ಸ್‌ ಆಪ್‌

ರಿಮೈಂಡರ್‌ ಮತ್ತು ಬುಕ್ಸ್‌ ಆಪ್‌

ಹೊಸ ಓಎಸ್‌ನಲ್ಲಿ ರಿಮೈಂಡರ್‌ ಮತ್ತು ಬುಕ್ಸ್‌ ಆಪ್‌ ಇರಲಿದ್ದು, ಇದು ನಾಲ್ಕು ಡಿಫಾಲ್ಟ್‌ ಆಯ್ಕೆಗಳನ್ನು ಹೊಂದಿರಲಿದೆ. ಅವುಗಳೆಂದರೇ ಆಲ್‌ ಟಾಸ್ಕ್‌, ಶೆಡ್ಯುಲ್ಡ್‌ ಟಾಸ್ಕ್‌, ಟಾಸ್ಕ್‌ ಟು ಬಿ ಡನ್‌ ಟುಡೇ ಮತ್ತು ಫ್ಲ್ಯಾಗ್ಡ್‌ ಟಾಸ್ಕ್‌. ಇವು ಬಳಕೆದಾರರಿಗೆ ನೆನೆಪಿಸುವ ಕೆಲಸ ಮಾಡಲಿದ್ದು, ರಿಮೈಂಡರ್‌ ಸೆಟ್ಟ್ ಮಾಡಿಕೊಳ್ಳಬೇಕು. ಬುಕ್ಸ್‌ಗೆ ಸಂಭಂದಿತ ಆಪ್‌ ಸಹ ಇರಲಿದೆ.

ಐ ಮೆಸ್ಸೆಜ್‌ ಆಪ್‌

ಐ ಮೆಸ್ಸೆಜ್‌ ಆಪ್‌

ಐ ಮೆಸ್ಸೆಜ್‌ ಆಪ್‌ ವಾಟ್ಸಪ್‌ ಮೆಸ್ಸೆಜ್‌ ರೀತಿಯಲ್ಲಿಯೇ ಇರಲಿದ್ದು, ಪ್ರೋಫೈಲ್‌ ಪಿಚ್ಚರ್‌ ಮತ್ತು ಡಿಸ್‌ಪ್ಲೇ ನೇಮ್‌ ಆಯ್ಕೆಗಳನ್ನು ಹೊಂದಿರಲಿದೆ. ಈ ಐ ಮೆಸ್ಸೆಜ್‌ ಆಪ್‌ನಲ್ಲಿ ಪ್ರೈವೆಸ್ಸಿ ಸೆಟ್ಟಿಂಗ್‌ ಮಾಡಿಕೊಳ್ಳಲು ಆಯ್ಕೆ ಇದ್ದು, ಯಾರು ನನ್ನ ಪ್ರೊಫೈಲ್‌ ನೋಡಬಹುದು ಎಂಬುದನ್ನು ನಿಯಂತ್ರಿಸಬಹುದಾಗಿದೆ. ಹಾಗೇ ಮೆಮ್ಸ್‌, ಇಮೋಜಿಗಳು, ಎನಿಮೋಜಿಗಳು, ಸ್ಟಿಕ್ಕರ್ ಆಯ್ಕೆಗಳು ಸಹ ಇರಲಿವೆ.

ಮ್ಯಾಪ್‌ ಆಪ್‌

ಮ್ಯಾಪ್‌ ಆಪ್‌

ಐಫೋನ್‌ ಡಿವೈಸ್‌ಗಳಲ್ಲಿ ಆಪಲ್‌ ಮ್ಯಾಪ್‌ ಇದ್ದು, ಈ ಆಪ್‌ ನ್ಯಾವಿಗೇಶನ್ ಸೇವೆ ನೀಡುತ್ತದೆ. ಇದೀಗ ಹೊಸ ಅಪ್‌ಡೇಟ್‌ ಮಾದರಿಯ ಆಪ್‌ನಲ್ಲಿ ಗ್ರಾಹಕರಿಗೆ ಫ್ರಿಕ್ವೇಂಟ್‌ ಲೊಕೇಶನ್ ಸೆಟ್ಟ್ ಮಾಡಬಹುದಾಗಿದ್ದು, ಈ ಮೂಲಕ ವೇಗದ ನ್ಯಾವಿಗೇಶನ್ ಪಡೆಯಬಹುದಾಗಿದೆ. ಇದಲ್ಲದೇ ಆ ಫ್ರಕ್ವೆಂಟ್‌ ಲೊಕೇಶನ್‌ನಲ್ಲಿರುವವರು ಗ್ರೂಪ್‌ ಕ್ರಿಯೆಟ್‌ ಮಾಡಿಕೊಳ್ಳುವ ಆಯ್ಕೆಗಳು ಸೇರಿರಲಿವೆ ಎನ್ನಲಾಗಿದೆ.

ಫೈಂಡ್‌ ಮೈ ಐಫೋನ್‌ ಮತ್ತು ಫೈಂಡ್‌ ಮೈ ಫ್ರೆಂಡ್ಸ್‌

ಫೈಂಡ್‌ ಮೈ ಐಫೋನ್‌ ಮತ್ತು ಫೈಂಡ್‌ ಮೈ ಫ್ರೆಂಡ್ಸ್‌

ಆಪಲ್‌ 'ಫೈಂಡ್‌ ಮೈ ಐಫೋನ್‌' ಮತ್ತು 'ಫೈಂಡ್‌ ಮೈ ಫ್ರೆಂಡ್ಸ್‌' ಎರಡನ್ನು ಒಂದೇ ಆಪ್‌ನಲ್ಲಿ ವಿಲೀನ್‌ ಮಾಡಿದ್ದು, ಸದ್ಯ ಗ್ರೀನ್‌ಟಚ್‌ ಆಯ್ಕೆಯಿಂದ ಗುರುತಿಸಿಕೊಂಡಿದೆ. ಈ ಆಪ್‌ ಮೂಲಕ ಐಫೋನ್‌ ಹುಡುಕಬಹುದಾಗಿದ್ದು, ಜೊತೆಗೆ ಫೈಂಡ್‌ ಮೈ ಫ್ರೆಂಡ್‌ ಫೀಚರ್‌ ಸೇರಿಸಲಾಗಿದೆ. ಹಾಗೇ ಈ ಹಿಂದೆ ಆಪಲ್‌ ಬಾಹ್ಯವಾಗಿ ಫೋನ್‌ ಹುಡುಕುವ ಆಯ್ಕೆ ಪರಿಚಯಿಸಲಿದೆ ಎನ್ನವ ಮಾತುಗಳು ಇದ್ದವು.

ಮೇಲ್‌ ಆಪ್‌

ಮೇಲ್‌ ಆಪ್‌

ಹೊಸ iOS 13 ಓಎಸ್‌ ಹಲವು ಮಹತ್ತರ ಫೀಚರ್ಸ್‌ಗಳನ್ನು ತುಂಬಿಕೊಂಡಿದ್ದು, ಈ ಆಯ್ಕೆಗಳು ಗ್ರಾಹಕರಿಗೆ ಖುಷಿ ನೀಡಲಿವೆ. ಅವುಗಳಲ್ಲಿ ಮೇಲ್‌ ಆಪ್‌ ಒಂದಾಗಿದ್ದು, ಇದರಲ್ಲಿ ಬೇಡವಾದ ಮೇಲ್‌ಗಳನ್ನು ಬರದಂತೆ ತಡೆಯುವ ಆಯ್ಕೆಗಳು ಇರಲಿವೆ. ವೈಯಕ್ತಿಕ ಮೇಲ್‌ ಥ್ರೇಡ್‌ ಅನ್ನು ಮ್ಯೂಟ್‌ ಮಾಡುವ ಆಯ್ಕೆ ಸಹ ಇದ್ದು, ಪೊಲ್ಡರ್‌ ಮ್ಯಾನೇಜಮೆಂಟ್‌ ಆಯ್ಕೆಗಳು ಇರಲಿವೆ.

ಸ್ಲಿಪ್‌ ಮೋಡ್

ಸ್ಲಿಪ್‌ ಮೋಡ್

ಆಪಲ್‌ iOS 13 ಓಎಸ್‌ ಡಿವೈಸ್‌ಗಳಲ್ಲಿ ಸ್ಲಿಪ್‌ ಮೋಡ್‌ ಆಯ್ಕೆಯನ್ನು ಪರಿವಯಿಸಲಿದ್ದು, ಮಲಗುವಾಗ ಡಿವೈಸ್‌ಯಿಂದ ಡಿಸ್ಟರ್ಬ್ ಆಗಬಾರದೆಂದು ಈ ಆಯ್ಕೆಯನ್ನು ಗ್ರಾಹಕರು ಬಳಸಿಕೊಳ್ಳಬಹುದಾಗಿದೆ. ಡಾರ್ಕ್‌ ಮೋಡ್‌, ಲಾಕ್‌ ಸ್ಕ್ರೀನ್‌ ಮತ್ತು ನೋಟಿಫಿಕೇಶನ್‌ಗಳನ್ನು ಆಟೋ ಮ್ಯೂಟ್‌ ಮಾಡಿಕೊಳ್ಳಲಿದೆ.

ಓದಿರಿ : ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳ ಚಂದಾದಾರರ ಸಂಖ್ಯೆ ಹೆಚ್ಚಳ!.ಜಿಯೋ ಹೊಸ ಎಂಟ್ರಿ!ಓದಿರಿ : ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳ ಚಂದಾದಾರರ ಸಂಖ್ಯೆ ಹೆಚ್ಚಳ!.ಜಿಯೋ ಹೊಸ ಎಂಟ್ರಿ!

Best Mobiles in India

English summary
iOS 13: Everything we know so far about Apple’s next mobile operating system.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X