Home
ಮೊಬೈಲ್

'ಐಫೋನ್ 11 ಪ್ರೊ' ಮತ್ತು 'ಐಫೋನ್ XS' ನಡುವಿನ ಪ್ರಮುಖ ಭಿನ್ನತೆಗಳು!

ಸದ್ಯ ಟೆಕ್ ವಲಯದಲ್ಲಿ ಭಾರೀ ಸಿದ್ದಿಯಲ್ಲಿರುವುದು ಐಫೋನ್ 11 ಸರಣಿ ಆಗಿದ್ದು, ಈ ಸರಣಿಯು ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್‌ ಫೋನ್‌ಗಳನ್ನು ಹೊಂದಿದೆ. ಅವುಗಳಲ್ಲಿ ಐಫೋನ್ 11 ಪ್ರೊ, ಆಪಲ್‌ನ 'ಐಫೋನ್‌ ಎಕ್ಸ್‌ಎಸ್‌'ನ ಮುಂದುವರಿದ ಅವತರಣಿಕೆ ಆಗಿದೆ. ಮೇಲ್ನೊಟಕ್ಕೆ ಸಾಮ್ಯತೆ ಎನಿಸಿದರು, 'ಐಫೋನ್ 11 ಪ್ರೊ' ಹಲವು ಮಹತ್ತರ ಅಪ್‌ಗ್ರೇಡ್‌ಗಳನ್ನು ಪಡೆದುಕೊಂಡಿದೆ.

ಹೌದು, ಆಪಲ್‌ ಸಂಸ್ಥೆಯ ಜನಪ್ರಿಯ 'ಐಫೋನ್ XS' ಫೋನಿನ ಅಪ್‌ಗ್ರೇಡ್‌ ವರ್ಷನ್‌ ಐಫೋನ್ 11 ಪ್ರೊ ಆಗಿದೆ ಎನ್ನುವುದರಲ್ಲಿ ಅನುಮಾನವೆ ಇಲ್ಲ. ಆದರೆ ಕ್ಯಾಮೆರಾ, ಡಿಸ್‌ಪ್ಲೇ, ಪ್ರೊಸೆಸರ್‌, ಓಎಸ್‌, ಫೀಚರ್ಸ್‌ಗಳು ಸೇರಿದಂತೆ ಹಲವಾರು ಅಪ್‌ಗ್ರೇಡ್‌ಗಳನ್ನು ಒಳಗೊಂಡಿದೆ. ಹಾಗಾದರೇ 'ಐಫೋನ್ 11 ಪ್ರೊ' ಮತ್ತು ಐಫೋನ್ ಎಕ್ಸ್‌ಎಸ್‌ ಫೋನ್‌ಗಳ ನಡುವಿನ ಭಿನ್ನತೆಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ಡಿಸೈನ್

ಡಿಸ್‌ಪ್ಲೇ ಮತ್ತು ಡಿಸೈನ್

ಐಫೋನ್ 11 ಪ್ರೊ ಫೋನ್‌ 5.8 ಇಂಚಿನ ಸೂಪರ್ ರೇಟಿನಾ XDR ಮಾದರಿಯ OLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಐಫೋನ್ ಎಕ್ಸ್‌ಎಸ್‌ ಸಹ 5.8 OLED ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ ಮತ್ತು ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವು 1,125×2,436 ಆಗಿದೆ. ಈ ಅಂಶಗಳನ್ನು ಗಮನಿಸಿದರೇ ಐಫೋನ್ 11 ಪ್ರೊ ಡಿಸ್‌ಪ್ಲೇಯಲ್ಲಿ ಸೂಪರ್ ರೇಟಿನಾ XDR ಹೊಸತನ ಕಂಡುಬಂದಿದೆ

ಪ್ರೊಸೆಸರ್‌ ಹೇಗಿದೆ

ಪ್ರೊಸೆಸರ್‌ ಹೇಗಿದೆ

ಐಫೋನ್ 11 ಪ್ರೊ ಫೋನ್‌ ಹೊಸ A 13 ಬಯೋನಿಕ್‌ ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಪ್ರೊಸೆಸರ್‌ಗೆ ಪೂರಕವಾಗಿ ಹೊಸ iOS 13 ಬೆಂಬಲ ನೀಡಲಿದೆ. ಹಾಗೆಯೇ 'ಐಫೋನ್ ಎಕ್ಸ್‌ಎಸ್‌' A 12 ಬಯೋನಿಕ್‌ ಚಿಪ್‌ಸೆಟ್‌ ಪ್ರೊಸೆಸರ್‌ ಹೊಂದಿದೆ. ಆಪಲ್‌ನ ತನ್ನ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಅಪ್‌ಗ್ರೇಡ್‌ ಮಾಡಿಕೊಂಡಿರುವುದು ಐಫೋನ್‌ 11 ಪ್ರೊ ಗೆ ಪ್ಲಸ್‌ ಪಾಯಿಂಟ್‌ ಆಗಿದೆ.

ಮೂರು ಕ್ಯಾಮೆರಾಗಳು

ಮೂರು ಕ್ಯಾಮೆರಾಗಳು

ಐಫೋನ್ 11 ಪ್ರೊ ಫೋನ್‌ ಹಿಂಬದಿಯಲ್ಲಿ ಮೂರು ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಈ ಮೂರು ಕ್ಯಾಮೆರಾಗಳು ಮತ್ತು ಸೆಲ್ಫಿ ಸಹ 12ಎಂಪಿ ಸೆನ್ಸಾರ್‌ ಸಾಮರ್ಥ್ಯ ಪಡೆದಿವೆ. ಪ್ರಾಥಮಿಕ ಕ್ಯಾಮೆರಾವು ವೈಲ್ಡ್‌ ಆಂಗಲ್, ಸೆಕೆಂಡರಿ ಕ್ಯಾಮೆರಾವು ಅಲ್ಟ್ರಾ ವೈಲ್ಡ್‌ ಆಂಗಲ್ ಮತ್ತು ತೃತೀಯ ಕ್ಯಾಮೆರಾವು ಟೆಲಿಫೋಟೊ ಲೆನ್ಸ್‌ ಸಾಮರ್ಥ್ಯವನ್ನು ಹೊಂದಿವೆ. ಆದರೆ ಐಫೋನ್ ಎಕ್ಸ್‌ಎಸ್‌' ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಹೊಂದಿದೆ ಮತ್ತು ಅದು ಸಹ 12ಎಂಪಿ ಸಾಮರ್ಥ್ಯದಲ್ಲಿದೆ. ಮತ್ತು ಸೆಲ್ಪಿ 7ಎಂಪಿ ಸೆನ್ಸಾರ್‌ನಲ್ಲಿದೆ.

ಮೆಮೊರಿ ಬಲ

ಮೆಮೊರಿ ಬಲ

ಐಫೋನ್ 11 ಪ್ರೊ ಫೋನ್ ಮೂರು ಸ್ಟೋರೇಜ್ ವೇರಿಯಂಟ್ ಮಾದರಿಯ ಆಯ್ಕೆಗಳನ್ನು ಪಡೆದಿದೆ. ಅವುಗಳು ಕ್ರಮವಾಗಿ 64GB, 128GB ಮತ್ತು 256GB ಆಂತರಿಕ ಸ್ಟೋರೇಜ್ ಸ್ಥಳಾವಕಾಶ ಪಡೆದಿದೆ. ಹಾಗೆಯೇ 'ಐಫೋನ್ ಎಕ್ಸ್‌ಎಸ್‌' ಫೋನ್ ಸಹ 64GB, 256GB ಮತ್ತು 512GB ಆಂತರಿಕ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಗಳನ್ನು ಒಳಗೊಂಡಿದೆ. ಆದರೆ ಹೊಸ ಐಫೋನ್ 11 ಪ್ರೊ ವೇರಿಯಂಟ್‌ಗಳು ಗ್ರಾಹಕರನ್ನು ಸೆಳೆಯುವಂತಿವೆ.

Best Mobiles in India

English summary
Comparison between Apple iPhone 11 Pro and the outgoing Apple iPhone XS. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+