ಐಫೋನ್ 13 ಪ್ರೊ V/S ಐಫೋನ್ 12: ಖರೀದಿಗೆ ಯಾವುದು ಯೋಗ್ಯ?
ಜನಪ್ರಿಯ ಆಪಲ್ ಇತ್ತೀಚಿಗಷ್ಟೆ ತನ್ನ ಬಹುನಿರೀಕ್ಷಿತ 'ಐಫೋನ್ 13' ಸರಣಿಯನ್ನು ಲಾಂಚ್ ಮಾಡಿದೆ. ಹಲವು ಅಪ್‌ಡೇಟ್ ಫೀಚರ್ಸ್‌ಗಳೊಂದಿಗೆ ಲಗ್ಗೆ ಇಟ್ಟಿರುವ ಐಫೋನ್ 13 ಹೆಚ್ಚು ಗಮನ ಸೆಳೆದಿದೆ. ಇನ್ನೊಂದೆಡೆ ಐಫೋನ್ 13 ಬಿಡುಗಡೆ ಆದ ಬೆನ್ನಲ್ಲೇ ಐಫೋನ್ 12 ಫೋನ್ ಭರ್ಜರಿ ಬೆಲೆ ಇಳಿಕೆ ಕಂಡಿದೆ. ಹೀಗಾಗಿ ಹೊಸ ಐಫೋನ್ 13 ಪ್ರೊ ಮತ್ತು ಬೆಲೆ ಇಳಿಕೆ ಕಂಡ ಐಫೋನ್ 12 ಇವೆರಡರಲ್ಲಿ ಖರೀದಿಗೆ ಯಾವುದು ಬೆಸ್ಟ್?..ಎನ್ನುವ ಗೊಂದಲ ನೂತನವಾಗಿ ಐಫೋನ್ ಖರೀದಿಸುವವರಲ್ಲಿ ಮೂಡಿರುತ್ತದೆ.

ಹೊಸದಾಗಿ ಬಿಡುಗಡೆ ಆದ ಐಫೋನ್ 13 ಸರಣಿಯು ನಾಲ್ಕು ಐಫೋನ್ ಮಾಡೆಲ್‌ಗಳನ್ನು ಒಳಗೊಂಡಿದೆ. ಅವುಗಳು ಕ್ರಮವಾಗಿ ಐಫೋನ್ 13, ಐಫೋನ್ 13 ಮಿನಿ, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಆಗಿವೆ. ಐಫೋನ್ 13 ಪ್ರೊ ಫೋನ್ ಮತ್ತು ಈ ಹಿಂದಿನ ಸರಣಿಯ ಐಫೋನ್ 12 ಫೋನ್‌ಗಳ ನಡುವಿನ ಭಿನ್ನತೆಗಳೆನು?.ಬೆಲೆ ಎಷ್ಟು?..ಸದ್ಯ ಐಫೋನ್ 13 ಮತ್ತು ಐಫೋನ್ 12 ಇವೆರಡರಲ್ಲಿ ಯಾವುದು ಖರೀದಿಗೆ ಉತ್ತಮ ಆಯ್ಕೆ ಆಗಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಐಫೋನ್ 13 ಪ್ರೊ vs ಐಫೋನ್ 12: ಪ್ರೈಸ್ ಟ್ಯಾಗ್ ಹೀಗಿವೆ
ಹೊಸದಾಗಿ ಬಿಡುಗಡೆ ಆದ ಐಫೋನ್ 13 ಪ್ರೊ ಮೂರು ಸ್ಟೋರೇಜ್ ವೇರಿಯಂಟ್ ಮಾಡೆಲ್‌ಗಳ ಆಯ್ಕೆ ಪಡೆದಿದೆ. ಅವುಗಳ ಬೆಲೆಗಳು ಕ್ರಮವಾಗಿ ಐಫೋನ್ 13 ಪ್ರೊ ಬೆಲೆ 128 ಜಿಬಿಗೆ 1,19,900 ರೂ., 256 ಜಿಬಿಗೆ 1,29,900 ರೂ., ರೂ. 512 ಜಿಬಿಗೆ 1,49,900 ರೂ. 1 ಟಿಬಿಗೆ 1,69,900 ಗಳಾಗಿವೆ. ಇನ್ನು ಇನ್ನು ಬೆಲೆ ಇಳಿಕೆ ಕಂಡಿರುವ ಐಫೋನ್ 12 64GB ವೇರಿಯಂಟ್ 65,900ರೂ. ಆಗಿದೆ. ಐಫೋನ್ 12 128GB ವೇರಿಯಂಟ್ 70,900ರೂ. ಆಗಿದೆ. ಐಫೋನ್ 12 256GB ವೇರಿಯಂಟ್ 80,900ರೂ. ಆಗಿದೆ.

ಐಫೋನ್ 13 ಪ್ರೊ vs ಐಫೋನ್ 12: ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಐಫೋನ್ 13 ಪ್ರೊ ಫೋನ್ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಸೂಪರ್ ರೆಟೀನಾ XDR ಡಿಸ್‌ಪ್ಲೇ ಮಾದರಿಯಲ್ಲಿದೆ. ಹೈ ಎಂಡ್ ಬ್ರೈಟ್ನೆಸ್ ಹೊಂದಿದೆ. ಅದೇ ರೀತಿ ಐಫೋನ್ 12 ಫೋನ್ OLED ಡಿಸ್‌ಪ್ಲೇ ಹೊಂದಿದ್ದು, ಅಧಿಕ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ.
ಐಫೋನ್ 13 ಪ್ರೊ vs ಐಫೋನ್ 12: ಕ್ಯಾಮೆರಾ ಸೆಟ್‌ಅಪ್
ಐಫೋನ್ 13 ಪ್ರೊ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಟೆಲಿಫೋಟೋ, ಅಲ್ಟ್ರಾ, ವೈಲ್ಡ್ ಲೆನ್ಸ್ ನಲ್ಲಿವೆ. ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಹಾಗೆಯೇ ವಿಡಿಯೋಗಾಗಿ ಸಿನಿಮ್ಯಾಟಿಕ್ ಮೋಡ್ ಆಯ್ಕೆ ಇದ್ದು, ಅತ್ಯುತ್ತಮ ವಿಡಿಯೋ ರೆಕಾರ್ಡ್ ಮಾಡಬಹುದಾಗಿದೆ. ಹಾಗೆಯೇ ಐಫೋನ್ 12 ಡ್ಯುಯಲ್ ಕ್ಯಾಮೆರಾ ಪಡೆದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್ ಮೋಡ್ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.

ಐಫೋನ್ 13 ಪ್ರೊ vs ಐಫೋನ್ 12 ಪ್ರೊ: ಪ್ರೊಸೆಸರ್ ಮತ್ತು ಬ್ಯಾಟರಿ ಪವರ್
ಐಫೋನ್ 13 ಪ್ರೊ ಫೋನ್ ಹೊಸ A15 ಬಯೋನಿಕ್ ಆರು ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಅದೇ ರೀತಿ ಐಫೋನ್ 12 ಪ್ರೊ ಫೋನ್ A14 ಬಯೋನಿಕ್ ಚಿಪ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸಹ 5G ಸಪೋರ್ಟ್ ಮಾಡಲಿದೆ. A14 ಬಯೋನಿಕ್ ಗಿಂತ ಹೊಸ A15 ಬಯೋನಿಕ್ ಸಾಕಷ್ಟು ಅಪ್‌ಡೇಟ್ ಕಂಡಿದೆ. ಹಾಗೆಯೇ ಐಫೋನ್ 13 ಫೋನ್ ಬ್ಯಾಟರಿ ಈ ಹಿಂದಿನ ಐಫೋನ್ 12 ಗಿಂತ ಬ್ಯಾಕ್‌ಅಪ್ ಗಿಂತ ಉತ್ತಮವಾಗಿದೆ. ಇನ್ನು ಐಫೋನ್ 13 ಪ್ರೊ ಫೋನ್ ನಾಲ್ಕು ಬಣ್ಣಗಳ ಆಯ್ಕೆ ಪಡೆದಿದೆ.


Click it and Unblock the Notifications








