ಐಫೋನ್‌ 13 ಮತ್ತು ಐಫೋನ್ 12: ಖರೀದಿಗೆ ಯಾವುದು ಬೆಸ್ಟ್‌?

|

ಟೆಕ್ ದೊಡ್ಡಣ್ಣ ಆಪಲ್ ತನ್ನ ಬಹುನಿರೀಕ್ಷಿತ ಕ್ಯಾಲಿಫೋರ್ನಿಯಾ ಸ್ಟ್ರೀಮಿಂಗ್ ಹೆಸರಿನ ಈವೆಂಟ್‌ ಮೂಲಕ 'ಐಫೋನ್‌ 13' ಸರಣಿಯನ್ನು ಲಾಂಚ್ ಮಾಡಿದೆ. ಹಲವು ಅಪ್‌ಡೇಟ್‌ ಫೀಚರ್ಸ್‌ಗಳೊಂದಿಗೆ ಲಗ್ಗೆ ಇಟ್ಟಿರುವ ಐಫೋನ್‌ 13 ಹೆಚ್ಚು ಗಮನ ಸೆಳೆದಿದೆ. ಇನ್ನೊಂದೆಡೆ ಐಫೋನ್ 13 ಬಿಡುಗಡೆ ಆದ ಬೆನ್ನಲ್ಲೇ ಐಫೋನ್‌ 12 ಫೋನ್ ಭರ್ಜರಿ ಬೆಲೆ ಇಳಿಕೆ ಕಂಡಿದೆ. ಹೀಗಾಗಿ ಹೊಸ ಐಫೋನ್‌ 13 ಮತ್ತು ಬೆಲೆ ಇಳಿಕೆ ಕಂಡ ಐಫೋನ್ 12 ಇವೆರಡರಲ್ಲಿ ಖರೀದಿಗೆ ಯಾವುದು ಬೆಸ್ಟ್‌?..ಎನ್ನುವ ಗೊಂದಲ ನೂತನವಾಗಿ ಐಫೋನ್‌ ಖರೀದಿಸುವವರಲ್ಲಿ ಮೂಡಿರುತ್ತದೆ.

ಕ್ರಮವಾಗಿ

ಹೊಸದಾಗಿ ಬಿಡುಗಡೆ ಆದ ಐಫೋನ್‌ 13 ಸರಣಿಯು ನಾಲ್ಕು ಐಫೋನ್‌ ಮಾಡೆಲ್‌ಗಳನ್ನು ಒಳಗೊಂಡಿದೆ. ಅವುಗಳು ಕ್ರಮವಾಗಿ ಐಫೋನ್‌ 13, ಐಫೋನ್‌ 13 ಮಿನಿ, ಐಫೋನ್‌ 13 ಪ್ರೊ ಮತ್ತು ಐಫೋನ್‌ 13 ಪ್ರೊ ಮ್ಯಾಕ್ಸ್‌ ಆಗಿವೆ. ಐಫೋನ್‌ 13 ಫೋನ್ ಮತ್ತು ಈ ಹಿಂದಿನ ಸರಣಿಯ ಐಫೋನ್ 12 ಫೋನ್‌ಗಳ ನಡುವಿನ ಭಿನ್ನತೆಗಳೆನು?.ಬೆಲೆ ಎಷ್ಟು?..ಸದ್ಯ ಐಫೋನ್‌ 13 ಮತ್ತು ಐಫೋನ್ 12 ಇವೆರಡರಲ್ಲಿ ಯಾವುದು ಖರರೀದಿಗೆ ಉತ್ತಮ ಆಯ್ಕೆ ಆಗಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ 13 vs ಐಫೋನ್ 12: ಪ್ರೈಸ್‌ ಟ್ಯಾಗ್‌ ಹೀಗಿವೆ

ಐಫೋನ್ 13 vs ಐಫೋನ್ 12: ಪ್ರೈಸ್‌ ಟ್ಯಾಗ್‌ ಹೀಗಿವೆ

ಹೊಸದಾಗಿ ಬಿಡುಗಡೆ ಆದ ಐಫೋನ್‌ 13 ಮೂರು ಸ್ಟೋರೇಜ್ ವೇರಿಯಂಟ್‌ ಮಾಡೆಲ್‌ಗಳ ಆಯ್ಕೆ ಪಡೆದಿದೆ. ಅವುಗಳ ಬೆಲೆಗಳು ಕ್ರಮವಾಗಿ 128 GB ವೇರಿಯಂಟ್ ಬೆಲೆ 79,900 ರೂ, 256GB ವೇರಿಯಂಟ್ ಬೆಲೆಯು 89,900 ರೂ ಮತ್ತು 512GB ವೇರಿಯಂಟ್ ಬೆಲೆ 99,900 ರೂ ಗಳಾಗಿವೆ. ಇನ್ನು ಬೆಲೆ ಇಳಿಕೆ ಕಂಡಿರುವ ಐಫೋನ್‌ 12 64GB ವೇರಿಯಂಟ್ 65,900ರೂ. ಆಗಿದೆ. ಐಫೋನ್‌ 12 128GB ವೇರಿಯಂಟ್ 70,900ರೂ. ಆಗಿದೆ. ಐಫೋನ್‌ 12 256GB ವೇರಿಯಂಟ್ 80,900ರೂ. ಆಗಿದೆ.

ಐಫೋನ್ 13 vs ಐಫೋನ್ 12: ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಐಫೋನ್ 13 vs ಐಫೋನ್ 12: ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಐಫೋನ್ 13 ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 60Hz ರಿಫ್ರೆಶ್ ದರ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. ಅದೇ ರೀತಿ ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, ಅಧಿಕ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ.

ಐಫೋನ್ 13 vs ಐಫೋನ್ 12: ಕ್ಯಾಮೆರಾ ಸೆಟ್‌ಅಪ್‌

ಐಫೋನ್ 13 vs ಐಫೋನ್ 12: ಕ್ಯಾಮೆರಾ ಸೆಟ್‌ಅಪ್‌

ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ನೈಟ್‌ ಮೋಡ್ ಹಾಗೂ ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ. ಹಾಗೆಯೇ ಐಫೋನ್ 12 ಸಹ ಡ್ಯುಯಲ್ ಕ್ಯಾಮೆರಾ ಪಡೆದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್‌ ಮೋಡ್‌ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.

ಐಫೋನ್ 13 vs ಐಫೋನ್ 12: ಪ್ರೊಸೆಸರ್ ಮತ್ತು ಬ್ಯಾಟರಿ ಪವರ್

ಐಫೋನ್ 13 vs ಐಫೋನ್ 12: ಪ್ರೊಸೆಸರ್ ಮತ್ತು ಬ್ಯಾಟರಿ ಪವರ್

ಐಫೋನ್ 13 ಫೋನ್ ಹೊಸ A15 ಬಯೋನಿಕ್ ಆರು ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಅದೇ ರೀತಿ ಐಫೋನ್ 12 ಫೋನ್ A14 ಬಯೋನಿಕ್ ಚಿಪ್‌ ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸಹ 5G ಸಪೋರ್ಟ್‌ ಮಾಡಲಿದೆ. A14 ಬಯೋನಿಕ್ ಗಿಂತ ಹೊಸ A15 ಬಯೋನಿಕ್ ಸಾಕಷ್ಟು ಅಪ್‌ಡೇಟ್‌ ಕಂಡಿದೆ. ಹಾಗೆಯೇ ಐಫೋನ್ 13 ಫೋನ್ ಬ್ಯಾಟರಿ ಈ ಹಿಂದಿನ ಐಫೋನ್ 12 ಗಿಂತ ಬ್ಯಾಕ್‌ಅಪ್‌ ಗಿಂತ ಉತ್ತಮವಾಗಿದೆ. ಐಫೋನ್ 13 ಪಿಂಕ್, ರೆಡ್, ಬ್ಲ್ಯಾಕ್, ವೈಟ್ ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
iPhone 13 VS iPhone 12 Differences: Which is Best to Buy.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X