1 ವರ್ಷ ಸರೋವರದ ನೀರಿನೊಳಗಿದ್ದು, ವರ್ಕ್‌ ಆಗುತ್ತಿದೆ 'ಐಫೋನ್ 4'

ಆಕಸ್ಮಿಕವಾಗಿ ಸರೋವರದೊಳಗೆ ಬಿದ್ದಿದ್ದ ಐಫೋನ್‌ 4, ವರ್ಷದ ನಂತರ ಸಿಕ್ಕಿದ್ದು ಮೊದಲಿನಂತೆ ವರ್ಕ್‌ ಆಗುತ್ತಿದೆ.

By Suneel
|

ಈ ವರ್ಷದಲ್ಲಿ ಲಾಂಚ್ ಆದ ಐಫೋನ್ 7 ಮತ್ತು ಐಫೋನ್ 7 ಪ್ಲಸ್‌ ಸೇರಿದಂತೆ, ಇವುಗಳಿಗಿಂತ ಹಿಂದೆ ಲಾಂಚ್‌ ಆದ ಯಾವುದೇ ಐಫೋನ್‌ಗಳು ಅಧಿಕೃತವಾಗಿ ನೀರು ನಿರೋಧಕ ಡಿವೈಸ್‌ಗಳಲ್ಲ. ಆದರೆ ಈಗೊಂದು ಕುತೂಹಲಕಾರಿ ವಿಷಯ ಅಂದ್ರೆ 2010 ರಲ್ಲಿ ಲಾಂಚ್‌ ಆಗಿದ್ದ 'ಐಫೋನ್‌ 4' ಒಂದು ವರ್ಷ ನೀರಿನೊಳಗೆ ಇದ್ದರೂ ಸಹ ಯಾವುದೇ ಸಮಸ್ಯೆ ಆಗದೇ, ನೀರನ್ನು ಒರೆಸಿ ಒಣಗಿಸಿದ ನಂತರ ಐಫೋನ್‌ 4 ಆನ್‌ ಆಗಿದೆ.

1 ವರ್ಷ ಸರೋವರದ ನೀರಿನೊಳಗಿದ್ದು, ವರ್ಕ್‌ ಆಗುತ್ತಿದೆ 'ಐಫೋನ್ 4'

ಐಫೋನ್ 4 ಮಾಲೀಕರಾದ ಮೈಕೆಲ್ ಗುಂಟ್ರುಮ್ ಎಂಬುವವರು 2015 ರ ಮಾರ್ಚ್‌ನಲ್ಲಿ ಐಸ್ ಫಿಶಿಂಗ್‌ಗಾಗಿ ಹೋಗಿದ್ದರು. ಈ ಸಮಯದಲ್ಲಿ ಅವರ ಐಫೋನ್‌ 4, ಪೆನ್ಸಿಲ್ವೇನಿಯಾದ 'ಕೈಲಿ ಸರೋವರ'ದಲ್ಲಿ ಬಿದ್ದಿದ್ದು. " 25 ಡಿಗ್ರಿ ಶೀತ ವಾತಾವರಣ ಇತ್ತು, ಈ ವೇಳೆ ನಾನು ಮತ್ತು ನನ್ನ ಇಬ್ಬರು ಸ್ನೇಹಿತರು ಐಸ್ ಫಿಶಿಂಗ್‌ಗಾಗಿ ಹೋಗಿದ್ದವು. ಈ ವೇಳೆ ಪೋರ್ಟೆಬಲ್ ಶಾಂಟಿ ಮೇಲೆ ಕುಳಿತಿದ್ದೆವು, ಈ ವೇಳೆ ಮೀನು ರಾಡ್ ಕಚ್ಚಿತ್ತು. ಮೀನು ಎತ್ತಲು, ಐಫೋನ್‌ 4 ಅನ್ನು ನನ್ನ ಲ್ಯಾಪ್‌ಟಾಪ್‌ ಮೇಲೆ ಇಟ್ಟೆ, ಆದರೆ ಅದು ಆಕಸ್ಮಿಕವಾಗಿ ಹಿಮಚ್ಛಾದಿತ ನೆಲದ ಮೇಲೆ ಬೀಳುವ ಬದಲು, ನೀರು ಇರುವ ರಂಧ್ರದೊಳಗೆ ಬಿತ್ತು. ಬ್ಲೂ ಗಿಲ್ ಮೀನು ಸಿಕ್ಕಿತ್ತು. ಆದರೆ ಇದು ಐಫೋನ್‌ 4 ಗೆ ಸಮವಲ್ಲ" ಎಂದು Buzzfeed ಜೊತೆ ಹೇಳಿಕೊಂಡಿದ್ದಾರೆ.

ಆಪಲ್ ಕುರಿತಾದ ಎಂಟು ವಿವಾದ ಕಥೆಗಳು

1 ವರ್ಷ ಸರೋವರದ ನೀರಿನೊಳಗಿದ್ದು, ವರ್ಕ್‌ ಆಗುತ್ತಿದೆ 'ಐಫೋನ್ 4'

ಸರೋವರದೊಳಗೆ ಬಿದ್ದ ಐಫೋನ್‌ 4 ಸಿಕ್ಕಿದ್ದು ಹೇಗೆ?

2015 ರ ಸೆಪ್ಟೆಂಬರ್‌ ತಿಂಗಳಲ್ಲಿ ಕೈಲಿ ಸರೋವರ ಅಣೆಕಟ್ಟು ನಿರ್ಮಾಣದ ಕೊರತೆಯಿಂದಾಗಿ ನೀರಿಲ್ಲದೇ ಬರಿದಾಗಿತ್ತು. ಈ ವೇಳೆ ಮೆಕಾನಿಕಲ್ ಇಂಜಿನಿಯರ್‌ ಆದ ಡೇನಿಯಲ್ ಕಾಲ್‌ಗ್ರೆನ್ ತಮ್ಮ ಲೋಹ ಪತ್ತೆದಾರನ್ನು ಕರೆದುಕೊಂಡು ಖಾಲಿ ಸರೋವರದಲ್ಲಿ ಹೊಳೆಯುವ ವಸ್ತುಗಳ ಪತ್ತೆಗಾಗಿ ಹೋಗಿದ್ದರು. ಈ ವೇಳೆ ಅವರಿಗೆ ಗುಂಟ್ರುಮ್'ರವರ ಐಫೋನ್‌ 4 ಸಿಕ್ಕಿ, ಅದನ್ನು ಒಣಗಿಸಿ ವರ್ಕ್ ಆಗುತ್ತದೆಯೇ ಎಂದು ತಿಳಿಯಲು ರೈಸ್‌'ನಲ್ಲಿ ಇಡಲಾಗಿತ್ತು.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

1 ವರ್ಷ ಸರೋವರದ ನೀರಿನೊಳಗಿದ್ದು, ವರ್ಕ್‌ ಆಗುತ್ತಿದೆ 'ಐಫೋನ್ 4'

ಶಾಕ್‌ ಏನಪ್ಪಾ ಅಂದ್ರೆ 6 ತಿಂಗಳುಗಳಿಗಿಂತ ಹೆಚ್ಚು ಕಾಲ ನೀರಿನೊಳಗಿದ್ದ ಐಫೋನ್‌ 4 ಎರಡು ದಿನಗಳ ನಂತರ ಮರುಜೀವ ಪಡೆದಂತಾಗಿ ವರ್ಕ್‌ ಆಗುತ್ತಿದೆ. ಆದರೆ ಸಾಧಾರಣ ಡ್ಯಾಮೇಜ್‌ ಆಗಿರುವುದು ಮಾತ್ರ ಕಂಡುಬಂದಿದೆ. ಐಫೋನ್‌ 4 ಡಿಸ್‌ಪ್ಲೇ ಹೆಚ್ಚು ಹಾನಿಗೊಳಗಾಗಿದ್ದರು, ಡಿವೈಸ್‌ ಉತ್ತಮವಾಗಿ ವರ್ಕ್‌ ಆಗುತ್ತಿದೆ. ಕಾಲ್‌ಗ್ರೆನ್, ಸರೋವರದಲ್ಲಿ ಸಿಕ್ಕ ಐಫೋನ್ 4 ವರ್ಕ್‌ ಆಗುತ್ತಿರುವ ಬಗ್ಗೆ ಮಾಹಿತಿ ನೀಡಲು ಗುಂಟ್ರುಮ್ ಜೊತೆಯಲ್ಲಿ ಸಂಪರ್ಕದಲ್ಲಿದ್ದಾರೆ.

1 ವರ್ಷ ಸರೋವರದ ನೀರಿನೊಳಗಿದ್ದು, ವರ್ಕ್‌ ಆಗುತ್ತಿದೆ 'ಐಫೋನ್ 4'

6 ತಿಂಗಳು ನೀರಿನಲ್ಲಿದ್ದು, ವರ್ಕ್‌ ಆಗುತ್ತಿರುವ ಐಫೋನ್‌ 4(iPhone 4) ಔಟರ್‌ಬಾಕ್ಸ್‌ನಿಂದ ಮಾಡಲಾಗಿದ್ದು, ಹೆಚ್ಚು ಡ್ಯಾಮೇಜ್‌ ಆಗದೇ ಉಳಿಯಲು ಸಾಧ್ಯವಾಗಿದೆ ಎಂದು ವರದಿ ಮಾಡಲಾಗಿದೆ. ಆದ್ದರಿಂದ ಆಪಲ್ ಇನ್ನೊಂದು ವಿಶೇಷ ಪಾಯಿಂಟ್‌ ಪಡೆದಂತಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳಿಗಾಗಿ ಕ್ಲಿಕ್ ಮಾಡಿ

Best Mobiles in India

Read more about:
English summary
iPhone 4 Reportedly Survives Even After Spending a Year at the Bottom of a Lake. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X