8ಜಿಬಿ ಆಂತರಿಕ ಮೆಮೊರಿ ಐಫೋನ್‌5 ಸಿ ಬಿಡುಗಡೆ

Posted By:

8 ಜಿಬಿ ಆಂತರಿಕ ಮೆಮೊರಿ ಹೊಂದಿರುವ ಐಫೋನ್‌ 5ಸಿಯನ್ನು ಆಪಲ್‌ ಇಂಗ್ಲೆಂಡ್‌ನ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ಐಫೋನ್‌ಗೆ 409.99 ಪೌಂಡ್‌(ಅಂದಾಜು 41500 ರೂಪಾಯಿ) ದರವನ್ನು ಆಪಲ್‌ ನಿಗದಿ ಮಾಡಿದೆ.

ಭಾರತದ ಸೇರಿದಂತೆ ಏಷ್ಯಾದ ರಾಷ್ಟ್ರಗಳಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಜನ ಹೆಚ್ಚು ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಆ ಗ್ರಾಹಕರನ್ನು ಸೆಳೆಯಲು ಆಪಲ್‌ ಐಫೋನ್‌ 5ಸಿ ಯನ್ನು ಮಾರುಕಟ್ಟೆಗೆ ಪರಿಚಯಿಸಿತ್ತು.ಆದರೆ ಕಡಿಮೆ ಬೆಲೆಯ ಐಫೋನ್‌ 5ಸಿ ಭಾರತದಲ್ಲಿ ಬಿಡುಗಡೆಯಾಗುವ ಮೊದಲೇ ದುಬಾರಿ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿತ್ತು. ಮಾಧ್ಯಮಗಳ ವಿಶ್ಲೇಷಣೆಯಂತೆ ಐಫೋನ್‌ 5ಸಿ ದುಬಾರಿ ಬೆಲೆಯಲ್ಲಿ ದೇಶದಲ್ಲಿ ಬಿಡುಗಡೆಯಾಗಿತ್ತು.

ಐಫೋನ್‌ 5 ಸಿ ಈ ಹಿಂದೆ ಎರಡು ಆಂತರಿಕ ಮೆಮೊರಿಯಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು.16 ಜಿಬಿಗೆ 41,900 ರೂಪಾಯಿ, 32 ಜಿಬಿ ಆಂತರಿಕ ಮೆಮೊರಿಯ ಐಫೋನ್‌ಗೆ 53,500ಬೆಲೆಯನ್ನು ಆಪಲ್‌‌ ನಿಗದಿ ಮಾಡಿತ್ತು.ಆದರೆ ಈ ಆಪಲ್‌ ನಿರೀಕ್ಷಿಸಿದ್ದಷ್ಟು ಬೇಡಿಕೆ ಗ್ರಾಹಕರಿಂದ ವ್ಯಕ್ತವಾಗದ ಹಿನ್ನಲೆಯಲ್ಲಿ ಐಫೋನ್‌ ಸಿ ಬೆಲೆಯನ್ನು ಫೆಬ್ರವರಿಯಲ್ಲಿ ಕಡಿತಗೊಳಿಸಿತ್ತು.

ಆಪಲ್‌ಗೆ ಐಫೋನ್‌ 5ಸಿ ಬೆಲೆ ಅಗ್ಗವಾಗಿ ಕಂಡರೂ ಜಾಗತಿಕ ಮಟ್ಟದ ಕಂಪೆನಿಗಳ ಸ್ಮಾರ್ಟ್‌ಫೋನ್‌ ಹೋಲಿಸಿದರೆ ಬೆಲೆ ದುಬಾರಿಯಾಗಿತ್ತು. ಸ್ಮಾರ್ಟ್‌ಫೋನ್‌ ವಿವಿಧ ಬಣ್ಣದಲ್ಲಿ ಲಭ್ಯವಿದೆ ಎನ್ನುವ ಒಂದು ಅಂಶವನ್ನು ಹೊರತುಪಡಿಸಿದರೆ ಹಳೇಯ ಐಫೋನ್‌ 5ರ ವಿಶೇಷತೆಯನ್ನೇ ಹೊಸ ಐಫೋನ್‌5 ಸಿ ಹೊಂದಿದೆ.

 8ಜಿಬಿ ಆಂತರಿಕ ಮೆಮೊರಿ ಐಫೋನ್‌5 ಸಿ ಬಿಡುಗಡೆ

ಐಫೋನ್‌5 ಸಿ
ವಿಶೇಷತೆ:
ಸಿಂಗಲ್‌ ಸಿಮ್‌
4 ಇಂಚಿನ ರೆಟಿನಾ ಮಲ್ಟಿಟಚ್‌ ಸ್ಕ್ರೀನ್‌‌(1136*640 ಪಿಕ್ಸೆಲ್,326 ppi)
ಐಓಎಸ್‌ 7
A6 ಚಿಪ್‌‌
8/16/32ಜಿಬಿ ಆಂತರಿಕ ಮೆಮೊರಿ
1 GB ರ್‍ಯಾಮ್‌
8 ಎಂಪಿ ಐಸೈಟ್‌ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
ಜಿಪಿಎಸ್‌,ಗ್ಲೋನಾಸ್‌‌,ಡಿಜಿಟಲ್‌ ಕಂಪಾಸ್‌,
ವೈಫೈ,ಸೆಲ್ಯೂಲರ್‌,ಬ್ಲೂಟೂತ್‌,ಸಿರಿ
1510 mAh ಬ್ಯಾಟರಿ

ಇದನ್ನೂ ಓದಿ: ಐಫೋನ್‌ 5ಸಿ ಬೆಲೆ ದಿಢೀರ್‌ ಇಳಿಕೆ- ಯಾವ ತಾಣದಲ್ಲಿ ಎಷ್ಟು ರೂಪಾಯಿ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot