ಐಫೋನ್ 5ಸಿ ಬೆಲೆ ದಿಢೀರ್ ಇಳಿಕೆ
ಆಪಲ್‌ನ ಕಡಿಮೆ ಬೆಲೆಯ ದುಬಾರಿ ಸ್ಮಾರ್ಟ್‌ಫೋನ್ ಐಫೋನ್ 5ಸಿ ಬೆಲೆ ಇಳಿಕೆಯಾಗಿದೆ. ಕಳೆದ ನವೆಂಬರ್‌ನಲ್ಲಿ 16 ಜಿಬಿ ಆಂತರಿಕ ಮೆಮೊರಿ ಹೊಂದಿರುವ ಐಪೋನ್ 5ಸಿ 41,900 ರೂಪಾಯಿ ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಆದರೆ ಈಗ ಕೆಲ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಈ ಐಫೋನ್ 36,999 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.
ಭಾರತದ ಸೇರಿದಂತೆ ಏಷ್ಯಾದ ರಾಷ್ಟ್ರಗಳಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಜನ ಹೆಚ್ಚು ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಆ ಗ್ರಾಹಕರನ್ನು ಸೆಳೆಯಲು ಆಪಲ್ ಐಫೋನ್ 5ಸಿ ಯನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಆದರೆ ಆದರೆ ಕಡಿಮೆ ಬೆಲೆಯ ಐಫೋನ್ 5ಸಿ ಭಾರತದಲ್ಲಿ ಬಿಡುಗಡೆಯಾಗುವ ಮೊದಲೇ ದುಬಾರಿ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿತ್ತು. ಮಾಧ್ಯಮಗಳ ವಿಶ್ಲೇಷಣೆಯಂತೆ ಐಫೋನ್ 5ಸಿ ದುಬಾರಿ ಬೆಲೆಯಲ್ಲಿ ದೇಶದಲ್ಲಿ ಬಿಡುಗಡೆಯಾಗಿತ್ತು.
ಆಪಲ್‌ಗೆ ಐಫೋನ್ 5ಸಿ ಬೆಲೆ ಅಗ್ಗವಾಗಿ ಕಂಡರೂ ಜಾಗತಿಕ ಮಟ್ಟದ ಕಂಪೆನಿಗಳ ಸ್ಮಾರ್ಟ್‌ಫೋನ್ ಹೋಲಿಸಿದರೆ ಬೆಲೆ ದುಬಾರಿಯಾಗಿತ್ತು. ಸ್ಮಾರ್ಟ್‌ಫೋನ್ ವಿವಿಧ ಬಣ್ಣದಲ್ಲಿ ಲಭ್ಯವಿದೆ ಎನ್ನುವ ಒಂದು ಅಂಶವನ್ನು ಹೊರತುಪಡಿಸಿದರೆ ಹಳೇಯ ಐಫೋನ್ 5ರ ವಿಶೇಷತೆಯನ್ನೇ ಹೊಸ ಐಫೋನ್5 ಸಿ ಹೊಂದಿದೆ. ಆಪಲ್ ನಿರೀಕ್ಷಿಸಿದಷ್ಟು ಐಫೋನ್ 5ಸಿ ಮಾರಾಟವಾಗದ ಕಾರಣ ಈಗ ಇದರ ಉತ್ಪಾದನೆಯನ್ನು ಚೀನಾದ ಫ್ಯಾಕ್ಟರಿಯಲ್ಲಿ ಸ್ಥಗಿತಗೊಳಿಸಿದೆ.
ಉತ್ಪಾದನೆಯಾಗಿರುವ ಐಫೋನ್ 5ಸಿ ಮಾರಾಟ ಮಾಡಲು ಆಪಲ್ ವಿವಿಧ ತಂತ್ರಗಳನ್ನು ಅನುಸರಿಸಲು ಮುಂದಾಗುತ್ತಿದ್ದು ಆರಂಭದ ಹಂತವಾಗಿ ಬೆಲೆಯನ್ನು ಇಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ.
ಐಫೋನ್ 5ಸಿ ಗ್ರಾಹಕರನ್ನು ಸೆಳೆಯಲು ವಿಫಲವಾದ ಹಿನ್ನೆಲೆಯಲ್ಲಿ ಆಪಲ್ ಭಾರತದಲ್ಲಿ ತನ್ನ ಬ್ರ್ಯಾಂಡ್ ಹೆಸರನ್ನು ಉಳಿಸಲು ಐಫೋನ್ 4ನ್ನು ಮಾರುಕಟ್ಟೆಗೆ ಮರು ಬಿಡುಗಡೆ ಮಾಡಿದೆ.ಅಮೆರಿಕ ಮತ್ತು ಯುರೋಪ್ ದೇಶದಲ್ಲಿ ಐಫೋನ್ 4 ಮಾರಾಟವನ್ನು ಆಪಲ್ ಸ್ಥಗಿತಗೊಳಿಸಿದ್ದು,ಭಾರತದಲ್ಲಿ ಈಗಲೂ ಐಫೋನ್ 4 ಬೇಡಿಕೆ ಇರುವುದರಿಂದ ಮತ್ತೆ ಬಿಡುಗಡೆ ಮಾಡಿದೆ.
ಹೀಗಾಗಿ ಇಲ್ಲಿ ಯಾವ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಐಫೋನ್ ಐಫೋನ್ 5ಸಿಗೆ ಎಷ್ಟು ಬೆಲೆ ನಿಗದಿಯಾಗಿದೆ ಎನ್ನುವ ನಿಮ್ಮ ಕುತೂಹಲಕ್ಕಾಗಿ ಇಲ್ಲಿ ಕೆಲವು ಆನ್‌ಲೈನ್ ಶಾಪಿಂಗ್ ತಾಣಗಳ ಬೆಲೆಗಳ ಮಾಹಿತಿಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಬೆಲೆಯನ್ನು ನೋಡಿಕೊಂಡು ಹೋಗಿ.
ಇದನ್ನೂ ಓದಿ: ಮೋಟೋ ಜಿ ಎಫೆಕ್ಟ್:ದೇಶೀಯ ಚೈನಾ ಕಂಪೆನಿ ಸ್ಮಾರ್ಟ್‌ಫೋನ್ ಬೆಲೆ ದಿಢೀರ್ ಇಳಿಕೆ
ಇದನ್ನೂ ಓದಿ: ಟಾಪ್ ಕಂಪೆನಿಗಳ ಸ್ಮಾರ್ಟ್‌ಫೋನ್ ಬೆಲೆ ದಿಢೀರ್ ಇಳಿಕೆ


Click it and Unblock the Notifications





