ಐಫೋನ್ 6 ಇಲ್ಲಿದೆ ನೋಡಿ
ಆಪಲ್‌ನ ಐಫೋನ್-6 ಸ್ಮಾರ್ಟ್‌ಫೋನ್ ಮತ್ತೆ ಮಾಧ್ಯಮಗಳಲ್ಲಿ ಸುದ್ದಿಯಲ್ಲಿದೆ. ಹೊಸ ವಿಡಿಯೋ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದು ಈ ವಿಡಿಯೋದಲ್ಲಿ ತೋರಿಸದಂತೆ ಐಫೋನ್ 6 ಇರಲಿದೆ ಎಂದು ಹೇಳಲಾಗುತ್ತಿದೆ.
ಸಪ್‌ಹೈರ್ ಗ್ಲಾಸ್ ಹೊಂದಿರುವ 4.6 ಇಂಚಿನ ಸ್ಕ್ರೀನ್, 16 ಎಂಪಿ ಕ್ಯಾಮೆರಾದೊಂದಿಗೆ ಈ ಐಫೋನ್ 6 ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಯಾವ ವರ್ಷದ ಐಫೋನ್‌ಲ್ಲಿ ಏನು ವಿಶೇಷತೆ?
ಬಾಕ್ಸ್ ಮತ್ತು ಐಫೋನ್ 6
1
ಈಗಾಗಲೇ ಐಫೋನ್ 5 ಎಸ್‌ನಲ್ಲಿ8 ಎಂಪಿ ಕ್ಯಾಮೆರಾ ನೀಡಲಾಗಿದೆ. ಮುಂದಿನ ಐಫೋನ್ 6ನಲ್ಲಿ 16 ಎಂಪಿ ಕ್ಯಾಮೆರಾದ ಜೊತೆಗೆ ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋ ಕ್ಲಿಕ್ಕಿಸಲು ಮತ್ತಷ್ಟು ಸೆನ್ಸರ್‌ಗಳನ್ನು ಸೇರಿಸಲು ಆಪಲ್ ಮುಂದಾಗುತ್ತಿದೆ.
2
ಐಫೋನ್6ನ್ನು ಉನ್ನತ ಗುಣಮಟ್ಟದ ತಂತ್ರಜ್ಞಾನದಿಂದ ತಯಾರಿಸಲು ಆಪಲ್ ಮುಂದಾಗುತ್ತಿದ್ದು ಅದಕ್ಕಾಗಿ ಐಫೋನ್‌ಗೆ ದುಬಾರಿ ಬೆಲೆಯ ಸಪ್‌ಹೈರ್(Sapphire) ಗ್ಲಾಸ್ ಅಳವಡಿಸಲು ಮುಂದಾಗಲಿದೆ. ಈಗ ಸ್ಮಾರ್ಟ್‌ಫೋನಲ್ಲಿ ಬಳಕೆಯಾಗಲಿರುವ ಕಾರ್ನಿಂಗ್ ಗೊರಿಲ್ಲ ಗ್ಲಾಸ್‌ಗಿಂತಲೂ ಮೂರು ಪಟ್ಟು ಗಟ್ಟಿ ಮತ್ತು ಗೀರು(ಸ್ಕ್ರಾಚ್) ನಿರೋಧಕ ಶಕ್ತಿ ಈ ಗ್ಲಾಸ್‌ನಲ್ಲಿ ಹೆಚ್ಚು ಇರುತ್ತದೆ. ಉದಾ:ಒಂದು ಗೊರಿಲ್ಲ ಗ್ಲಾಸ್‌ಗೆ 150 ರೂಪಾಯಿ ಆದರೆ, ಆದೇ ಗಾತ್ರದ ಸಪ್‌ಹೈರ್ ಗ್ಲಾಸ್ 1500 ರೂಪಾಯಿ ಆಗಲಿದೆ. ಹೀಗಾಗಿ ಐಫೋನ್6 ಬೆಲೆ ಮತ್ತಷ್ಟು ದುಬಾರಿಯಾಗಲಿದೆ.
3
4
ವಿಡಿಯೋ ವೀಕ್ಷಿಸಿ


Click it and Unblock the Notifications