Subscribe to Gizbot

ಆಪಲ್ ಪ್ರಿಯರೇ ಇಲ್ಲೊಂದು ಆಚ್ಚರಿ ಸುದ್ದಿ

Written By:

ಸೆಪ್ಟೆಂಬರ್ 12 ರಂದು ಆಪಲ್ ಪ್ರಿಯರಿಗೆ ಹಬ್ಬವಾಗಿದ್ದು, ಅಂದು ಆಪಲ್ ತನ್ನ ನೂತನ ಐಫೋನ್‌ಗಳು ಸೇರಿದಂತೆ ಹಲವು ಗ್ಯಾಜೆಟ್‌ಗಳನ್ನು ಬಿಡುಗಡೆ ಮಾಡಲಿದ್ದು, ಆದರೆ ಈ ಬಾರಿ ಆಚ್ಚರಿಯ ಸುದ್ದಿಯೊಂದು ನಿಮಗಾಗಿ ಕಾದಿದೆ. ಅದುವೇ ಐಫೋನ್ ಮಾಡಲ್‌ಗಳ ಸಂಖ್ಯೆ ಬದಲಾಗಿದೆ ಮತ್ತು ಹೊಸ ಗ್ಯಾಜೆಟ್ ನಲ್ಲಿ ಆಪಲ್ ಟಿವಿ ಸಹ ಸೇರಿಕೊಂಡಿದೆ.

ಆಪಲ್ ಪ್ರಿಯರೇ ಇಲ್ಲೊಂದು ಆಚ್ಚರಿ ಸುದ್ದಿ

ಓದಿರಿ: ಜಿಯೋಗೆ ಸೆಡ್ಡು: ದೀಪಾವಳಿಗೆ ಏರ್‌ಟೆಲ್‌ನಿಂದ 2500ಕ್ಕೆ 4G ಸ್ಮಾರ್ಟ್‌ಫೋನ್.!!

10ನೇ ವಾರ್ಷಿಕೋತ್ಸವದ ಆಂಗವಾಗಿ ಹೊಸ ಗ್ಯಾಜೆಟ್‌ಗಳನ್ನು ತನ್ನ ಕಾಲಿಫೋರ್ನಿಯ ಕಚೇರಿಯಲ್ಲಿ ಬಿಡುಗಡೆ ಮಾಡಲಿದೆ. ಆಪಲ್, ಈ ಬಾರಿ ಆಪಲ್ ಹೊಸ ಪ್ರಯತ್ನವನ್ನು ಮಾಡಲು ಮುಂದಾಗಿದೆ. ಒಟ್ಟು ಮೂರು ಐಫೋನ್‌ಗಳನ್ನು ಲಾಂಚ್ ಮಾಡಲಿದ್ದು, ಜೊತೆಗೆ ಆಪಲ್ ವಾಚ್ ಮತ್ತು ಆಪಲ್ ಟಿವಿ ಸಹ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ 7 ಸರಣಿ ಫೋನ್‌ಗೆ ಕೊಕ್:

ಐಫೋನ್ 7 ಸರಣಿ ಫೋನ್‌ಗೆ ಕೊಕ್:

ಈ ಹಿಂದೆ ಬಿಡುಗಡೆಯಾಗಿದ್ದ ಐಫೋನ್ 7 ಸರಣಿಯ ಮತ್ತೇರಡು ಫೋನ್‌ಗಳು ಈ ಬಾರಿ ಬಿಡುಗಡೆಯಾಗಲಿದೆ ಎನ್ನುವ ನೀರಿಕ್ಷೆ ಹುಸಿಯಾಗಿದೆ. ಈ ಬಾರಿ ಆಪಲ್ ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಹಾಗೂ ಹೊಸದಾಗಿ ಐಫೋನ್ X ಬಿಡುಗಡೆ ಮಾಡಲಿದೆ ಎನ್ನುವ ಸುದ್ದಿಯು ಹರಿದಾಡುತ್ತಿದೆ.

ಐಫೋನ್ X ಬಿಡುಗಡೆ:

ಐಫೋನ್ X ಬಿಡುಗಡೆ:

ಮೂಲಗಳ ಪ್ರಕಾರ ಐಫೋನ್ 8 ಮತ್ತು ಐಪೋನ್ 8 ಪ್ಲಸ್‌ಗೆ ಹೋಲಿಸಿಕೊಂಡರೆ ಐಫೋನ್ X ಹೆಚ್ಚು ವೇಗ ಮತ್ತು ಶಕ್ತಿಶಾಲಿಯಾಗಿರಲಿದೆ ಎನ್ನಲಾಗಿದೆ. ಇದರಲ್ಲಿ OLED ಡಿಸ್‌ಪ್ಲೇ ಇರಲಿದ್ದು, ಇದು ಮೊದಲ ಬಾರಿಗೆ ಐಫೋನ್ OLED ಡಿಸ್‌ಪ್ಲೇ ನಲ್ಲಿ ಕಾಣಿಸಿಕೊಂಡಿದೆ.

ಐಫೋನ್ Xನಲ್ಲಿ ಕೃತಕ ಬುದ್ಧಿಮತ್ತೆ:

ಐಫೋನ್ Xನಲ್ಲಿ ಕೃತಕ ಬುದ್ಧಿಮತ್ತೆ:

ಮೂಲಗಳ ಪ್ರಕಾರ ಐಫೋನ್ Xನಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿದೆ ಎನ್ನುವ ಮಾಹಿತಿಯೂ ಕೇಳಿ ಬಂದಿದ್ದು, ಇದಕ್ಕಾಗಿ ತನ್ನದೇ ಕೃತಕ ಬುದ್ದಿಮತ್ತೆ ಚಿಪ್ ಅಭಿವೃದ್ಧಿಯನ್ನು ಪಡಿಸಿದೆ ಎನ್ನುವ ರೂಮರ್ ಸಹ ಕೇಳಿ ಬಂದಿದೆ.

ಆಪಲ್ ವಾಚ್:

ಆಪಲ್ ವಾಚ್:

ಇದಲ್ಲದೇ ಈ ಬಾರಿ LTE ಸಫೋರ್ಟ್ ಮಾಡುವ ಆಪಲ್ ವಾಚ್ ಅನ್ನು ಬಿಡುಗಡೆ ಮಾಡಲಿದ್ದು, ಐಫೋನ್ ಇಲ್ಲದೇ ವಾಚ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ನ್ಯಾವಿಗೇಟ್, ಮ್ಯೂಸಿಕ್ ಮತ್ತು ಕರೆಗಳನ್ನು ಅದರಲ್ಲೇ ಮಾಡಬಹುದು.

ಆಪಲ್ ಟಿವಿ:

ಆಪಲ್ ಟಿವಿ:

ಇದಲ್ಲದೇ ಈ ಬಾರಿ ಆಪಲ್ TVಯೂ ಸಾಕಷ್ಟು ಅಭಿವೃದ್ಧಿಯಾಗಿದ್ದು, 4K ಮತ್ತು HDR ವಿಡಿಯೋ ಗಳನ್ನು ಪ್ಲೇ ಮಾಡಲಿದೆ. ಅಲ್ಲದೇ ಸಾಫ್ಟ್‌ವೇರ್‌ ಸಹ ಆಪ್‌ಡೇಟ್ ದೊರೆಯಲಿದೆ. ಅಲ್ಲದೇ ಇದು ಆಪಲ್ ಸಿರಿಯನ್ನು ಸಪೋರ್ಟ್ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
iPhone 8, iPhone 8 Plus, and, most importantly, iPhone X will be the centrepieces of Apple’s September 12 event in Cupertino, California, according to the rumour mill. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot