ಸೆಪ್ಟೆಂಬರ್ ನಲ್ಲಿ ಐಫೋನ್ 8 ಲಾಂಚ್: ಇಲ್ಲಿದೇ ಅಸಲಿ ಫೋಟೋ
ಐಫೋನ್ 8 ನೋಡಲು ಯಾವ ರೀತಿಯಲ್ಲಿರಲಿದೆ ಎನ್ನುವ ಫೋಟೋವೊಂದು ಸಹ ದೊರೆತಿದೆ. ಒಮ್ಮೆ ಈ ಫೋಟೋವನ್ನು ನೋಡಿದರೆ ಸಾಕು ಫೋನ್ ಕೊಳ್ಳುವ ಮನಸಾಗುತ್ತಿದೆ.
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಐಫೋನ್ 8 ಸೆಪ್ಟೆಂಬರ್‌ನಲ್ಲಿ ಲಾಂಚ್ ಆಗಲಿದೆ ಎನ್ನುವ ಮಾಹಿತಿಯೊಂದು ದೊರೆತಿದೆ. ಇದರೊಂದಿಗೆ ಐಫೋನ್ 8 ನೋಡಲು ಯಾವ ರೀತಿಯಲ್ಲಿರಲಿದೆ ಎನ್ನುವ ಫೋಟೋವೊಂದು ಸಹ ದೊರೆತಿದೆ. ಒಮ್ಮೆ ಈ ಫೋಟೋವನ್ನು ನೋಡಿದರೆ ಸಾಕು ಫೋನ್ ಕೊಳ್ಳುವ ಮನಸಾಗುತ್ತಿದೆ.
ಓದರಿ: ದೀಪಾವಳಿ ಧಮಾಕ: ಅಂಬಾನಿ ಸಿಡಿಸಿದ ಡೇಟಾ ಪಟಾಕಿ '1GBಗೆ ರೂ.5 ಮಾತ್ರ'.!!

ಸೆಪ್ಟೆಂಬರ್ ನಲ್ಲಿ ಲಾಂಚ್ ಆಗಲಿರುವ ಐಫೋನ್ 8, ಒಟ್ಟು 4 ಮಿಲಿಯನ್ ಯುನಿಟ್ ಮಾತ್ರವೇ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಇದಾದ ನಂತರದಲ್ಲಿ ಗ್ರಾಹಕ ಬೇಡಿಕೆಗೆ ಅನುಸಾರವಾಗಿ ಪೋನ್ ತಯಾರಿಸಲುವ ಆಲೋಚನೆಯಲ್ಲಿದೆ ಆಪಲ್.

ಬೆಲೆ:
ಮೂಲಗಳ ಪ್ರಕಾರ ಈ ಫೋನಿನ ಬೆಲೆ ರೂ. 80,000 ದಿಂದ ಒಂದು ಲಕ್ಷದ ವರೆಗೂ ಇರಲಿದ್ದು, ಆದರೆ ಕೊಡುವ ಬೆಲೆಗೆ ಮೋಸ ಇಲ್ಲ ಎನ್ನುವಂತೆ ಇದರಲ್ಲಿರುವ ಆಯ್ಕೆಗಳು ಗ್ರಾಹಕರನ್ನು ಖಂಡಿತವಾಗಿ ಸೆಳೆಯಲಿದೆ.

ಯಾವ ಬಣ್ಣ:
ಒಟ್ಟು ಮೂರು ಬಣ್ಣದಲ್ಲಿ ಐಪೋನ್ 8 ದೊರೆಯಲಿದ್ದು, ಬ್ಲಾಕ್, ಸಿಲ್ವರ್ ಮತ್ತು ಗೋಲ್ಡ್ ಬಣ್ಣದಲ್ಲಿ ದೊರೆಯಲಿದೆ. ಇದಾದ ನಂತರದಲ್ಲಿ ರೆಡ್ ಮತ್ತು ಪಿಂಜ್ ಬಣ್ಣದಲ್ಲಿ ಬಿಡುಗಡೆ ಮಾಡವ ಸಾಧ್ಯತೆಯೂ ಇರಲಿದೆ ಎನ್ನಲಾಗಿದೆ.

ನಾಲ್ಕು ಕ್ಯಾಮೆರಾ:
ಇದಲ್ಲದೇ ಈ ಫೋನಿನ ಹಿಂಭಾಗ ಮತ್ತು ಮುಂಭಾಗ ಎರಡು ಕಡೆಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದಾಗಿದ್ದು, ಎರಡು ಕಡೆಗಳಲ್ಲಿ ಎರಡೆರಡು ಕ್ಯಾಮೆರಾವನ್ನು ಅಳವಡಿಸಲಾಗಿದೆ.


Click it and Unblock the Notifications








