Subscribe to Gizbot

ದೀಪಾವಳಿ ಧಮಾಕ: ಅಂಬಾನಿ ಸಿಡಿಸಿದ ಡೇಟಾ ಪಟಾಕಿ '1GBಗೆ ರೂ.5 ಮಾತ್ರ'.!!

Written By:

ರಿಯಲನ್ಸ್ ಮಾಲೀಕತ್ವದ ಜಿಯೋ ದೇಶದಲ್ಲಿ ಹೊಸ ಕ್ರಾಂತಿಯನ್ನು ಶುರು ಮಾಡಿದೆ ಎಂದರೆ ತಪ್ಪಾಗಲಾದರು. ಮೊದಲು ಜನ ಸಾಮಾನ್ಯ ಜೇಬಿಗೆ ಹೊರೆಯಾಗಿದ್ದ ಮೊಬೈಲ್ ಡೇಟಾವನ್ನು ಉಚಿತವಾಗಿ ನೀಡಿತು, ನಂತರ ಕರೆ ಮಾಡುವದನ್ನು ಉಚಿತ ಮಾಡಿತು, ಅಲ್ಲದೇ ಸದ್ಯ ಮೊಬೈಲ್ ಅನ್ನು ಸಹ ಉಚಿತವಾಗಲಿ ನೀಡುವ ಪ್ರಯತ್ನವನ್ನು ಘೋಷಣೆ ಮಾಡಿದೆ. ಅದರೊಂದಿಗೆ ಇನ್ನು ಅನೇಕ ವಲಯಗಳಲ್ಲಿ ತನ್ನ ಛಾಪು ಮೂಡಿಲು ತಯಾರಿಯನ್ನು ನಡೆಸಿದೆ.

ದೀಪಾವಳಿ ಧಮಾಕ: ಅಂಬಾನಿ ಸಿಡಿಸಿದ ಡೇಟಾ ಪಟಾಕಿ '1GBಗೆ ರೂ.5 ಮಾತ್ರ'.!!

ಓದಿರಿ: ಏರ್‌ಟೆಲ್‌ನಿಂದ ಕೌಂಟರ್ : ಜಿಯೋ ಬೇಡ ಎಂದ ಗ್ರಾಹಕ! ಯಾವುದು ಆಫರ್?

ಹಲವು ದಿನಗಳಿಂದ ಕಾಯುತ್ತಿದ್ದ ಜಿಯೋ ಫೈಬರ್ ಸೇವೆಯೂ ಇದೇ ದೀಪಾವಳಿಯ ವೇಳೆಗೆ ಶುರುವಾಗಲಿದೆ. ಈ ಕುರಿತು ಅಂಬಾನಿ ಕುಟುಂಬದಿಂದಲೇ ಮಾಹಿತಿ ಸಿಕ್ಕಿದೆ. ಅದುವೇ ಜಿಯೊ 4G ಸೇವೆಯ ಮಾದರಿಯಲ್ಲಿ ಭರ್ಜರಿ ವೆಲ್‌ಕಮ್ ಆಫರ್ ನೊಂದಿಗೆ ಕಾಣಿಸಿಕೊಳ್ಳಲಿದೆ. ಈ ಹಿನ್ನಲೆಯಲ್ಲಿ ಜಿಯೋ ಫೈಬರ್ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಟ್ವೀಟ್ ಮಾಡಿದ ಅಂಬಾನಿ ಮುದ್ದು ಮಗಳು:

ಜಿಯೋ ಫೋನ್ ಲಾಚಿಂಗ್ ವೇಳೆ ವೇದಿಕೆಯ ಮೇಲೆ ಫೋನಿನ ವಿಶೇಷತೆಗಳನ್ನು ತಿಳಿಸಿಕೊಡಲು ತಮ್ಮ ಮಕ್ಕಳಿಗೆ ಅವಕಾಶ ಮಾಡಿಕೊಟ್ಟಿದ್ದ ಅಂಬಾನಿ, ಈ ಬಾರಿ ಜಿಯೋ ಫೈಬರ್ ಕುರಿತ ಮಾಹಿತಿಯನ್ನು ಅಂಬಾನಿ ಮಗಳು ಇಶಾ ಹಂಚಿಕೊಂಡಿದ್ದಾರೆ. ಜಿಯೋ ಫೈವರ್ ರೌಟರ್ ಫೋಟೊವನ್ನು ಟ್ವೀಟ್ ಮಾಡಿದ್ದಾರೆ.

ದೀಪಾವಳಿ ಧಮಾಕ:

ದೀಪಾವಳಿ ಧಮಾಕ:

ಜಿಯೋ ದೀಪಾವಳಿಗೆ ಭರ್ಜರಿ ಆಫರ್ ಅನ್ನು ನೀಡಿದೆ. ದೀಪಾವಳಿಯನ್ನು ಮತ್ತಷ್ಟು ಸಂಭ್ರಮ ಗೊಳಿಸಲು ತನ್ನ ಬ್ರಾಡ್‌ ಬ್ಯಾಂಡ್ ಸೇವೆಯನ್ನು ಲಾಂಚ್ ಮಾಡುತ್ತಿದೆ. ಒಟ್ಟಿನಲ್ಲಿ ತನ್ನ ನಂಬಿದ ಗ್ರಾಹಕರಿಗೆ ಆಚ್ಚರಿಯನ್ನು ನೀಡಲು ಮುಂದಾಗಿದೆ.

ರೂ.500ಕ್ಕೆ ಒಂದು GB ಡೇಟಾ:

ರೂ.500ಕ್ಕೆ ಒಂದು GB ಡೇಟಾ:

ಜಿಯೋ ಫೈಬರ್ ಆರಂಭಿಕ ಕೊಡುಗೆಯಾಗಿ ತಿಂಗಳಿಗೆ ರೂ.500ಕ್ಕೆ 100 GB ಡೇಟಾವನ್ನು ನೀಡುವುದಾಗಿ ತಿಳಿಸಿದೆ. ಈ ಹಿಂದೆ ಜಿಯೋ 4G VoLTE ಸೇವೆಯನ್ನು ಆರಂಭಿಸಿದ ಸಂದರ್ಭದಲ್ಲಿಯೂ ಇದೇ ಮಾದರಿಯ ಆಫರ್ ನೀಡಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಮೂರು ತಿಂಗಳ ಕೊಡುಗೆ:

ಮೂರು ತಿಂಗಳ ಕೊಡುಗೆ:

ಮೂಲಗಳ ಪ್ರಕಾರ ಇದಲ್ಲದೇ ಮೊದಲ ಮೂರು ತಿಂಗಳಿಗೆ ಪ್ರಮೋಷನ್ ಆಫರ್ ವೊಂದನ್ನು ಜಿಯೋ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿಯೂ ದೊರೆತಿಲ್ಲ ಎನ್ನಲಾಗಿದೆ.

100 ಸಿಟಿಗಳಲ್ಲಿ ಸೇವೆ ಲಭ್ಯ:

100 ಸಿಟಿಗಳಲ್ಲಿ ಸೇವೆ ಲಭ್ಯ:

ಭಾರತದಲ್ಲಿ ಪ್ರಥಮವಾಗಿ ಸುಮಾರು 100 ಸಿಟಿಗಳಲ್ಲಿ ಸೇವೆಯನ್ನು ಜಿಯೋ ಫೈಬರ್ ನೀಡಲಿದೆ ಎನ್ನಲಾಗಿದೆ. ಇದಾದ ನಂತರದಲ್ಲಿ ಎಲ್ಲಾ ನಗರ ಮತ್ತು ಗ್ರಾಮೀಣ ಭಾಗಕ್ಕೂ ಸೇವೆಯನ್ನು ವಿಸ್ತರಿಸಲಿದೆ ಎಂದು ಮಾಹಿತಿ ಲಭ್ಯವಾಗಿದೆ.

Jio Monsoon Offers !! ಜಿಎಸ್‌ಟಿ ಸ್ಟಾಟರ್ ಕಿಟ್ ಜೊತೆಗೆ ಜಿಯೋ ಹೊಸ 12 ಆಫರ್‌ಗಳು !!
1Gbps ವೇಗ:

1Gbps ವೇಗ:

ಇದಲ್ಲದೇ ಜಿಯೋ ಫೈಬರ್ ಭಾರತದಲ್ಲಿ ಅತೀ ವೇಗದ ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡಲಿದೆ. ಇದಕ್ಕಾಗಿ 1Gbps ವೇಗ ಸೇವೆಯನ್ನು ನೀಡಲಿದೆ. ಇದಕ್ಕಾಗಿಯೇ ಆಪ್ಟಿಕಲ್ ಫೈಬರ್ ಅನ್ನು ಬಳಕೆ ಮಾಡಿಕೊಳ್ಳುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Reliance Jio Fiber to offer 100GB data for Rs 500 in 100 cities by Diwali and speed 1Gbps. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot