Subscribe to Gizbot

ಐಪೋನ್ 8 ನಲ್ಲಿ 3D ಸೆಲ್ಫಿ ಕ್ಯಾಮೆರಾ..!!

Written By:

ಆಪಲ್ 10ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಲಾಂಚ್ ಆಗಲಿರುವ ಐಪೋನ್ 8 ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಬರಲಿದ್ದು, ಸದ್ಯ ದೊರೆತಿರುವ ಮಾಹಿತಿ ಪ್ರಕಾರ ಐಪೋನ್ 8 ನಲ್ಲಿ 3D ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ ಎನ್ನಲಾಗಿದೆ.

ಐಪೋನ್ 8 ನಲ್ಲಿ 3D ಸೆಲ್ಫಿ ಕ್ಯಾಮೆರಾ..!!

ಓದಿರಿ: ಜಿಯೋ 50ರೂ.ಗೆ 1GB 4G ಡೇಟಾ ನೀಡಿದರೆ ಎರ್‌ಟೆಲ್‌ನಿಂದ 100 ರೂ.ಗೆ 10 GB ಡೇಟಾ

ಈ ಕುರಿತು ಮಾಹಿತಿ ಹೊರ ಹಾಕಿರುವ ಚೀನಾ ಮೂಲದ ಟೆಕ್ ಪತ್ರಿಕೆ, ಸದ್ಯ ಆಪಲ್ ಐಪೋನ್ 8 ನಲ್ಲಿ 3D ಸೆಲ್ಫಿ ಕ್ಯಾಮೆರಾವನ್ನು ಅಳವಡಿಸುವ ಕಾರ್ಯದಲ್ಲಿ ಮಗ್ನವಾಗಿದ್ದು, ಈ ಮೂಲಕ ಹೊಸ ಮಾದರಿಯ ಅನುಭವನ್ನು ತನ್ನ ಬಳಕೆದಾರರಿಗೆ ನೀಡಲು ಮಂದಾಗಲಿದೆ.

ಪ್ರತಿ ಬಾರಿ ಆಪಲ್ ಹೊಸ ಪೋನ್‌ನಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿವುದು ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಅದರಂತೆ ಈ ಬಾರಿ ತನ್ನ ನೂತನ ಪೋನ್‌ನಲ್ಲಿ 3D ಸೆಲ್ಫಿ ಕ್ಯಾಮೆರಾವನ್ನು ನೀಡಲಿದೆಂತೆ.

ಐಪೋನ್ 8 ನಲ್ಲಿ 3D ಸೆಲ್ಫಿ ಕ್ಯಾಮೆರಾ..!!

ಓದಿರಿ: ಜಿಯೋ ಪ್ರೈಮ್ ಆಫರ್ ಹಿಂದಿನ ರಹಸ್ಯವೇನು..? ಪ್ರತಿ ದಿನಕ್ಕೆ 10 ರೂ. ಲೆಕ್ಕಾಚಾರ ಹೇಗೆ..?

ಈ ಹಿನ್ನಲೆಯಲ್ಲಿ ಆಪಲ್ ಈ ಬಾರಿ ಐಪೋನ್ 8 ನಲ್ಲಿ 3D ಸೆಲ್ಫಿ ಕ್ಯಾಮೆರಾ ಜೊತೆಯಲ್ಲಿ ಇನ್ನು ಹಲವು ಆಯ್ಕೆಗಳನ್ನು ನೀಡಲಿದೆಯಂತೆ, 1.2 MP ಕ್ಯಾಮೆರಾವನ್ನು ನೀಡಲಿದ್ದು, ಇದು 3D ಪೋಟೋ ತೆಗೆಯಲು ಇದು ಸಹಾಯಕಾರಿಯಾಗಲಿದೆ.

5.8 ಇಂಚಿನ bezel-less ಡಿಸ್‌ಪ್ಲೇಯನ್ನು ಅಳವಡಿಸಲಿದೆ. ಇದರೊಂದಿಗೆ 3 GB RAM ಸಹ ಈ ಪೋನಿನಲ್ಲಿ ನೀಡಲಾಗುವುದು ಎನ್ನಲಾಗಿದೆ. ಇಲ್ಲದೇ ಈ ಪೋನ್ 64 GB ಮತ್ತು 256 GB ಮಾದರಿಯಲ್ಲಿ ಈ ಪೋನ್ ದೊರೆಯಲಿದೆ. ಅಲ್ಲದೇ ಈ ಪೋನ್‌ ಬೆಲೆ ಸ್ವಲ್ಪ ಕಡಿಮೆ ಮಾಡಿದೆ ಎನ್ನಲಾಗಿದೆ. 1000 ಡಾಲರ್‌ಗೆ ಲಭ್ಯವಿದೆ. ಅಂದರೆ ಸುಮಾರು 65,000 ರೂ.ಗಳಿಗೆ ಮಾರಾಟವಾಗಲಿದೆ.

Read more about:
English summary
Apple’s 10th anniversary edition iPhone 8 has given way to some speculations with the latest being that the phone will come with a 3D front camera. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot