Subscribe to Gizbot

ಬಜೆಟ್ ಬೆಲೆಯಲ್ಲಿ ಮೊದಲ ಐಫೋನ್ ಲಾಂಚ್‌ಗೆ ಸಿದ್ಧತೆ ನಡೆಸಿದ ಆಪಲ್: ಮೊಬೈಲ್ ಮಾರುಕಟ್ಟೆ ತಲ್ಲಣ..!

Written By:

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಅಭಿಮಾನಿಗಳನ್ನು ಹೊಂದಿರುವ ಆಪಲ್, ದುಬಾರಿ ಬೆಲೆಯಲ್ಲಿ ಗುಣಮಟ್ಟದ ಐಫೋನ್ ಗಳನ್ನು ಮಾರಾಟ ಮಾಡುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಕ್ಷ ಬೆಲೆಯ ಐಫೋನ್ X ವಿನ್ಯಾಸದ ಮೂಲಕವೇ ಹೊಸ ದಾಖಲೆಯನ್ನು ಸೃಷ್ಟಿಸಿದ್ದು, ಇದೇ ಮಾದರಿಯಲ್ಲಿ ಕಡಿಮೆ ಬೆಲೆಯಲ್ಲಿ ಹೊಸ ಐಫೋನ್‌ವೊಂದನ್ನು ಬಿಡುಗಡೆ ಮಾಡಲು ಆಪಲ್ ಮುಂದಾಗಿದೆ.

ಬಜೆಟ್ ಬೆಲೆಯಲ್ಲಿ ಮೊದಲ ಐಫೋನ್ ಲಾಂಚ್‌ಗೆ ಸಿದ್ಧತೆ ನಡೆಸಿದ ಆಪಲ್

ಈಗಾಗಲೇ ಮಾರುಕಟ್ಟೆಯಲ್ಲಿ ಆಪಲ್ ಲಾಂಚ್ ಮಾಡಲಿರುವ ಐಫೋನ್ ‍X SE ಕುರಿತು ನಿರೀಕ್ಷೆಗಳು ಹೆಚ್ಚಾಗಿದ್ದು, ಐಫೋನ್ SE ಮುಂದುವರೆದ ಭಾಗ ಇದಾಗಿದೆ. ಐಫೋನ್‌ನಲ್ಲಿ ಅತೀ ಕಡಿಮೆ ಬೆಲೆಗೆ ದೊರೆಯುತ್ತಿರುವುದು ಐಫೋನ್ SE ಮಾತ್ರವೇ, ಈ ಹಿನ್ನಲೆಯಲ್ಲಿ ಬಜೆಟ್ ಬೆಲೆಯಲ್ಲಿ ಈ ನೂತನ ಐಫೋನ್ ‍X SEಯನ್ನು ಬಿಡುಗಡೆ ಮಾಡಲು ಆಪಲ್ ಯೋಜನೆಯನ್ನು ರೂಪಿಸಿದೆ. ಜನ ಸಾಮಾನ್ಯರ ಕೈಗೂ ಆಪಲ್ ತಲುಪಿಸುವ ಕಾರ್ಯಕ್ಕೆ ಮುಂದಾಗಿದೆ.

ಮೂಲಗಳ ಪ್ರಕಾರ ಐಫೋನ್ ‍X SE ಮಾರ್ಚ್ 27ರಂದು ಲಾಂಚ್ ಆಗುವ ಸಾಧ್ಯತೆ ಇದೆ. ಈ ಐಫೋನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಜೆಟ್ ಬೆಲೆಯ ಮತ್ತು ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಸ್ಪರ್ಧೆಯನ್ನು ನೀಡಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಐಫೋನ್ ‍X SE ಕುರಿತಂತೆ ನಿರೀಕ್ಷೆಗಳು ಹೆಚ್ಚಾಗಿದೆ.

ಓದಿರಿ: ಫೇಸ್‌ಬುಕ್ ಬಳಕೆ ಸೇಫ್‌ ಅಲ್ಲ: ಆಧಾರ್ ನಂತರ ಕೋಟಿ-ಕೋಟಿ ಫೇಸ್‌ಬುಕ್ ಬಳಕೆದಾರರ ಮಾಹಿತಿ ಲೀಕ್..!

ಮುಂಭಾಗದಲ್ಲಿ ನೋಡಲು ಐಫೋನ್ X ಮಾದರಿಯಲ್ಲಿ ಕಾಣಿಸಿಸುವ ಐಫೋನ್ ‍X SE ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟು ಹಾಕಲಿದೆ. ಐಫೋನ್ ದುಬಾರಿ ಎನ್ನುವವರು ಸಹ ಕೊಳ್ಳಬಹುದಾದ ಬೆಲೆಗೆ ಮಾರಾಟವಾಗಲಿದೆ. ಐಫೋನ್ ಅಭಿಮಾನಿಗಳು ಐಫೋನ್ ‍X SE ಬಿಡುಗಡೆಯಾಗುವುದನ್ನು ಕಾಯುತ್ತಿದ್ದಾರೆ ಎನ್ನಲಾಗಿದೆ.

ಐಫೋನ್ ‍X SE ಕುರಿತಂತೆ ವಿಡಿಯೋವೊಂದು ಲೀಕ್ ಆಗಿದ್ದು, ವಿನ್ಯಾಸ ಉತ್ತಮವಾಗಿದ್ದು, ಐಫೋನ್ X ಮಾದರಿಯಲ್ಲಿಯೇ ಕಾಣಿಸಿಕೊಂಡಿದೆ. ಈ ಐಫೋನ್‌ನಲ್ಲಿ 4.2 ಇಂಚಿನ 19:9 ಅನುಪಾತದ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, A10 ಚಿಪ್‌ಸೆಟ್ ನೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ. ಎರಡು ಆವೃತ್ತಿಯಲ್ಲಿ ಈ ಐಫೋನ್ ‍X SE ಮಾರಾಟವಾಗುವ ಸಾಧ್ಯತೆ ಇದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಐಫೋನ್ ‍X SE 2GB RAM ನೊಂದಿಗೆ ಕಾಣಿಸಿಕೊಳ್ಳಲಿದ್ದು, 32GB ಮತ್ತು 128GB ಇಂಟರ್ನಲ್ ಮೆಮೊರಿಯೊಂದಿಗೆ ಲಭ್ಯವಿರಲಿದೆ. ಹಿಂಭಾಗದಲ್ಲಿ 12MP ಕ್ಯಾಮೆರಾವನ್ನು ಹಾಗೇ ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ ಈ ಐಫೋನಿನಲ್ಲಿ 1700mAh ಬ್ಯಾಟರಿಯನ್ನು ನೀಡಲಾಗಿದೆ.

English summary
iPhone SE 2 could Launch on March 27, to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot