Home
ಮೊಬೈಲ್

ಆಪಲ್‌ನ ಐಫೋನ್‌ 6ನಲ್ಲಿ ಏನೇನು ವಿಶೇಷತೆಗಳಿವೆ?

By Ashwath

ಆಪಲ್‌‌ ಕಳೆದ ತಿಂಗಳಿನಲ್ಲಿ ತನ್ನ ದುಬಾರಿ ಐಫೋನ್‌ 5 ಎಸ್‌ನ್ನು ವಿಶ್ವದ ಮಾರುಕಟ್ಟೆಗೆ ಪರಿಚಯಿಸಿದೆ. ಹೊಸ ಐಫೋನ್‌ ಬಿಡುಗಡೆ ಮಾಡುವಾಗ ಅದಕ್ಕೆ ಮತ್ತಷ್ಟು ಹೊಸ ವಿಶೇಷತೆಗಳನ್ನು ನೀಡಿ ಪರಿಚಯಿಸುವುದು ಆಪಲ್‌ ಸಂಪ್ರದಾಯ.ಈಗ ಹೊಸದಾಗಿ ಬಿಡುಗಡೆಯಾದ ಐಫೋನ್‌ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ.

ಹೀಗಾಗಿ ಆಪಲ್‌ನ ಮುಂದೆ ಬಿಡುಗಡೆಯಾಗಲಿರುವ ಐಫೋನ್‌ಲ್ಲಿ ಏನೇನು ಹೊಸ ತಂತ್ರಜ್ಞಾನ ಇರಲಿದೆ ಎನ್ನುವುದಕ್ಕೆ ಈಗ ಮಾಧ್ಯಮಗಳಲ್ಲಿ ವದಂತಿಗಳು ಆರಂಭವಾಗಿದೆ. ಆಪಲ್‌ ಐಫೋನ್‌ 6ಗೆ ಸಂಬಂಧಿಸಿದಂತೆ ಏನೇನು ಸುದ್ದಿಗಳು ಹರಿದಾಡುತ್ತಿದೆ ಎನ್ನುವುದಕ್ಕೆ ಇಲ್ಲಿ ಆ ವಿಶೇಷತೆಗಳಿಗೆ ಮಾಹಿತಿ ಇದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಆಪಲ್‌ ಐಫೋನ್‌5 ಎಸ್‌ನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ವದಂತಿ 1

ವದಂತಿ 1


ಆಪಲ್‌ನ ಐಫೋನ್‌ 6 ಸೋಲಾರ್‌ ಚಾರ್ಜಿಂಗ್‌‌ ಟಚ್‌ಸ್ಕ್ರೀನ್‌ ವಿಶೇಷತೆಯೊಂದಿಗೆ ಬರಲಿದೆಯಂತೆ. ಇದೇ ಫೆಬ್ರವರಿಯಲ್ಲಿ ಸೋಲಾರ್‌ ಚಾರ್ಜಿಂಗ್‌ ಟಚ್‌ಸ್ಕ್ರೀನ್‌ಗೆ ಸಂಬಂಧಿಸಿದಂತೆ ಪೆಟೆಂಟ್‌(ಹಕ್ಕು ಸ್ವಾಮ್ಯ)‌ ಪಡೆಯಲು ಆಪಲ್‌ ಅರ್ಜಿ ದಾಖಲಿಸಿದೆ. ಹೀಗಾಗಿ ಆಪಲ್‌ನ ಸೋಲಾರ್‌ ಟಚ್‌ಸ್ಕ್ರೀನ್‌ ಈ ವದಂತಿಗೆ ಈ ಸುದ್ದಿ ಮತ್ತಷ್ಟು ಪುಷ್ಠಿ ನೀಡಿದ್ದು ಆಪಲ್‌ ಈ ಟಚ್‌ಸ್ಕ್ರೀನ್‌ ತಯಾರಿಸಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

ವದಂತಿ 2

ವದಂತಿ 2


ಐಫೋನ್‌6ನ್ನು ಉನ್ನತ ಗುಣಮಟ್ಟದ ತಂತ್ರಜ್ಞಾನದಿಂದ ತಯಾರಿಸಲು ಆಪಲ್‌ ಮುಂದಾಗುತ್ತಿದ್ದು ಅದಕ್ಕಾಗಿ ಐಫೋನ್‌ಗೆ ಸಪ್‌ಹೈರ್‌(Sapphire) ಗ್ಲಾಸ್‌ ಅಳವಡಿಸಲು ಮುಂದಾಗಲಿದೆ. ಈಗ ಸ್ಮಾರ್ಟ್‌ಫೋನಲ್ಲಿ ಬಳಕೆಯಾಗಲಿರುವ ಕಾರ್ನಿಂಗ್ ಗೊರಿಲ್ಲ ಗ್ಲಾಸ್‌‌ಗಿಂತಲೂ ಮೂರು ಪಟ್ಟು ಗಟ್ಟಿ ಮತ್ತು ಗೀರು(ಸ್ಕ್ರಾಚ್) ನಿರೋಧಕ ಶಕ್ತಿ ಈ ಗ್ಲಾಸ್‌‌ನಲ್ಲಿ ಹೆಚ್ಚು ಇರುತ್ತದೆ. ಉದಾ:ಒಂದು ಗೊರಿಲ್ಲ ಗ್ಲಾಸ್‌ಗೆ 150 ರೂಪಾಯಿ ಆದರೆ, ಆದೇ ಗಾತ್ರದ ಸಪ್‌ಹೈರ್‌ ಗ್ಲಾಸ್‌ 1500 ರೂಪಾಯಿ ಆಗಲಿದೆ. ಹೀಗಾಗಿ ಐಫೋನ್‌6 ಬೆಲೆ ಮತ್ತಷ್ಟು ದುಬಾರಿಯಾಗಲಿದೆ.

ವದಂತಿ 3

ವದಂತಿ 3


ಐಫೋನ್‌ 5ಎಸ್‌ನ್ನು ಮೂರು ಆಂತರಿಕ ಮೆಮೋರಿಯಲ್ಲಿ(16/32/64GB) ಬಿಡುಗಡೆ ಮಾಡಿತ್ತು. ಆದರೆ ಹೊಸದಾಗಿ ಬರಲಿರುವ ಐಫೋನ್‌‌ 6ನ್ನು 128GBಯಲ್ಲಿ ಆಪಲ್‌ ಬಿಡುಗಡೆ ಮಾಡಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

ವದಂತಿ 4

ವದಂತಿ 4

ಈಗಾಗಲೇ ಐಫೋನ್‌ 5 ಎಸ್‌ನಲ್ಲಿ8 ಎಂಪಿ ಕ್ಯಾಮೆರಾ ನೀಡಲಾಗಿದೆ. ಮುಂದಿನ ಐಫೋನ್‌‌ 6ನಲ್ಲಿ 13 ಎಂಪಿ ಕ್ಯಾಮೆರಾದ ಜೊತೆಗೆ ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋ ಕ್ಲಿಕ್ಕಿಸಲು ಮತ್ತಷ್ಟು ಸೆನ್ಸರ್‌ಗಳನ್ನು ಸೇರಿಸಲು ಆಪಲ್‌ ಮುಂದಾಗುತ್ತಿದೆ.

ವದಂತಿ 5

ವದಂತಿ 5


ಐಫೋನ್‌ ಕೆಲಸ ಗಳನ್ನು ಮತ್ತಷ್ಟು ವೇಗವಾಗಿ ಮಾಡಲು ಅಕ್ಟಾ ಕೋರ್‍ ಪ್ರೊಸೆಸರ್‌ನ್ನು ಈ ಐಫೋನ್‌ಗೆ ಆಪಲ್‌ ನೀಡುವ ಸಾಧ್ಯತೆ ಇದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+