ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ

By Ashwath
|

ಆಪಲ್‌ನ ಭಾರೀ ನಿರೀಕ್ಷೆಯ ಸ್ಮಾರ್ಟ್‌ಫೋನ್‌ ಐಫೋನ್‌ 5ಎಸ್‌ನ್ನು ಆಪಲ್‌ ಬಿಡುಗಡೆ ಮಾಡಿದೆ. ವಿಶ್ವದ ಪ್ರಥಮ ಎ7 ಚಿಪ್‌ 64 ಬಿಟ್‌ ಅರ್ಕಿಟೆಕ್ಚರ್‌ ಹೊಂದಿರುವ ಪ್ರೊಸೆಸರ್‌‌ ಎನ್ನುವ ಹೆಗ್ಗಳಿಕೆಯನ್ನು ಈ ಸ್ಮಾರ್ಟ್‌ಫೋನ್‌ ಪಡೆದುಕೊಂಡಿದೆ.

ಐಫೋನ್‌ 5 ಎ6 ಚಿಪ್‌ನಲ್ಲಿ ಬಿಡುಗಡೆಯಾಗಿತ್ತು. ಈಗ ಬಿಡುಗಡೆಯಾಗಿರುವ ಐಫೋನ್‌ ಎ7 ಚಿಪ್‌ನಲ್ಲಿ ಬಿಡುಗಡೆಯಾಗಿದ್ದು ಐಫೋನ್‌ 5ಕ್ಕಿಂತ ಎರಡು ಪಟ್ಟು ವೇಗದಲ್ಲಿ ಈ ಸ್ಮಾರ್ಟ್‌ಫೋನ್‌ ಪ್ರೊಸೆಸರ್‌‌ ಕಾರ್ಯ‌ನಿರ್ವ‌ಹಿಸಲಿದೆ.

ಪಾಸ್‌ವರ್ಡ್‌ನ್ನು ಟೈಪ್‌ ಮಾಡಿ ಫೋನ್‌ ಆನ್‌ಲಾಕ್‌ ಮಾಡುವ ಪದ್ದತಿ ಈ ಐಫೋನ್‌ 5ಎಸ್‌ನಲ್ಲಿ ಇಲ್ಲ. ಬದಲಿಗೆ ಹೋಮ್‌ ಬಟನ್‌ನಲ್ಲಿ ಫಿಂಗರ್‌ ಪ್ರಿಂಟ್‌ ಸೆನ್ಸರ್‌ ಇದ್ದು ಬಳಕೆದಾರ ಕೈಯನ್ನು ಹೋಮ್‌ ಬಟನ್‌ನಲ್ಲಿ ಇಟ್ಟರೆ ಸಾಕು ಫೋನ್‌ ಆನ್‌ಲಾಕ್‌ ಆಗುತ್ತದೆ. ಜೊತೆಗೆ ಬಳಕೆದಾರ ಫಿಂಗರ್‌ಪ್ರಿಂಟ್‌ ರೆಕಗ್ನಿಷನ್‌ ಮೂಲಕವೇ ಐ ಟ್ಯೂನ್‌ ಸ್ಟೋರ್‌, ಆಪ್‌ ಸ್ಟೋರ್‌,ಐಬುಕ್‌ ಸ್ಟೋರ್‌ನಲ್ಲೂ ಆಪ್‌ಗಳನ್ನು ಖರೀದಿಸಬಹುದಾಗಿದೆ.

ಗೈರೋಸ್ಕೋಪ್‌‌,ಎಕ್ಸಲರೋಮೀಟರ್‌,ಕಂಪಾಸ್‌ ಸೆನ್ಸರ್‌,ಫಿಟ್‌ನೆಸ್‌ ಆಪ್‌ಗಳಿಗಾಗಿ ಈ ಐಫೋನ್‌ನಲ್ಲಿ ಹೊಸ ಎಂ‌‌7 ಮೋಷನ್‌ ಪ್ರೊಸೆಸರ್ ನೀಡಿದ್ದಾರೆ.8 ಮೆಗಾಪಿಕ್ಸೆಲ್‌ ಕ್ಯಾಮೆರಾ, f/2.2 ಅಪಾರ್ಚರ್‌ ವೇಗ ಹೊಂದಿದೆ. ಬರ್ಸ್ಟ್ ಮೂಡ್‌ನಲ್ಲಿ ಒಂದು ಸೆಕೆಂಡ್‌‌ನಲ್ಲಿ 10 ಚಿತ್ರಗಳನ್ನು ತೆಗೆಯುವ ಸಾಮರ್ಥ್ಯ ಈ ಕ್ಯಾಮೆರಾಕ್ಕಿದೆ. ಜೊತೆಗೆ ವಿಡಿಯೋ ರೆಕಾರ್ಡ್‌ ಮಾಡುವಾಗಲೇ ವಿಡಿಯೋವನ್ನು3x ಝೂಮ್‌ ಮಾಡಿ ರೆಕಾರ್ಡ್‌ ಮಾಡಬಹುದಾಗಿದೆ.1.2 ಎಂಪಿ ಮುಂದುಗಡೆ ಫೇಸ್‌ ಟೈಮ್‌ ಕ್ಯಾಮೆರಾ ನೀಡಲಾಗಿದ್ದು, ಬಿಎಸ್‌ಐ(BSI ) ಸೆನ್ಸರ್‌ ಹೊಂದಿದ್ದು,720 ಪಿಕ್ಸೆಲ್‌ನಲ್ಲಿ ಎಚ್‌ಡಿ ವಿಡಿಯೋ ರೆಕಾರ್ಡ್‌ ಮಾಡಬಹುದಾಗಿದೆ.

ಹೊಸ ಐಫೋನ್‌ 5 ಎಸ್‌ ಬ್ಯಾಟರಿ ಈ ಹಿಂದೆ ಬಿಡುಗಡೆಯಾದ ಐಫೋನ್‌ 5ಕ್ಕಿಂತ ಶಕ್ತಿಶಾಲಿಯಾಗಿದೆ. ಹೊಸ ಐಫೋನ್‌ 10 ಗಂಟೆ‌ 3ಜಿ ಟಾಕ್‌ ಟೈಮ್‌ ಮತ್ತು 250 ಗಂಟೆ ಸ್ಟ್ಯಾಂಡ್‌ ಬೈ ಟೈಮ್‌ ಹೊಂದಿದ್ದರೆ. ಹಿಂದಿನ ಐಫೋನ್‌ 8 ಗಂಟೆ 3ಜಿ ಟಾಕ್‌ ಟೈಮ್‌ ಮತ್ತು 225 ಸ್ಟ್ಯಾಂಡ್‌ ಬೈ ಟೈಮ್‌ ಹೊಂದಿತ್ತು.

ಹೊಸ ಐಫೋನ್‌5ಎಸ್‌ ಮೂರು ಆಂತರಿಕ ಮೆಮೋರಿಯಲ್ಲಿ ಅಮೆರಿಕದಲ್ಲಿ ಬಿಡುಗಡೆಯಾಗಿದೆ.16 GBಗೆ 649 ಡಾಲರ್‌ (ಅಂದಾಜು 41 ಸಾವಿರ ರೂ), 32 GBಗೆ 749 ಡಾಲರ್‌(ಅಂದಾಜು 47 ಸಾವಿರ ರೂ) 64GBಗೆ 849 ಡಾಲರ್‌(ಅಂದಾಜು 54 ಸಾವಿರ ರೂ) ಬೆಲೆಯನ್ನು ಆಪಲ್‌ ನಿಗದಿ ಪಡಿಸಿದೆ.ಇದೇ 20ರಂದು ಅಮೆರಿಕ, ಕೆನಡಾ, ಚೀನಾ,ಫ್ರಾನ್ಸ್‌,ಜರ್ಮ‌ನಿ,ಜಪಾನ್‌,ಸಿಂಗಾಪುರ್‌‌,ಇಂಗ್ಲೆಂಡ್‌‌ನಲ್ಲಿ ಬಿಡುಗಡೆಯಾಗಲಿದೆ.ಡಿಸೆಂಬರ್‌ ಅಂತ್ಯದೊಳಗೆ ವಿಶ್ವದ ನೂರು ದೇಶಗಳಲ್ಲಿ ಐಫೋನ್‌ ಬಿಡುಗಡೆ ಮಾಡಲು ಆಪಲ್‌ ಉದ್ದೇಶಿಸಿದೆ.ಹಾಗಾಗಿ ಭಾರತಕ್ಕೂಈ ಐಫೋನ್‌5ಎಸ್‌ ಡಿಸೆಂಬರ್‌ ಒಳಗೆ ಬರುವ ಸಾಧ್ಯತೆ ಇದೆ.

ಕನ್ನಡ ಇಲ್ಲ
ಐಫೋನ್‌ 5 ಎಸ್‌ನಲ್ಲಿ ಕನ್ನಡ ಕೀಬೋರ್ಡ್ ಮತ್ತು ಡಿಕ್ಷನರಿ ಇಲ್ಲ. ಹಿಂದಿ ಮತ್ತು ತಮಿಳು ಕಿಬೋರ್ಡ್‌,ಡಿಕ್ಷನರಿಗೆ ಈ ಹೊಸ ಐಫೋನ್‌ ಸಪೋರ್ಟ್‌ ಮಾಡುತ್ತದೆ.

ಐಫೋನ್‌ 5 ಎಸ್‌
ವಿಶೇಷತೆ:
4 ಇಂಚಿನ ರೆಟಿನಾ ಮಲ್ಟಿಟಚ್‌ ಸ್ಕ್ರೀನ್‌‌(1136*640 ಪಿಕ್ಸೆಲ್,326 ppi)
ಐಓಎಸ್‌ 7
112 ಗ್ರಾಂ ತೂಕ
A7 ಚಿಪ್‌‌ 64 ಬಿಟ್‌ ಅರ್ಕಿಟೆಕ್ಚರ್‌
M7 ಮೋಷನ್‌ ಪ್ರೊಸೆಸರ್
16/32/64GB ಆಂತರಿಕ ಮೆಮೋರಿ
ಜಿಪಿಎಸ್‌,ಗ್ಲೋನಾಸ್‌‌,ಡಿಜಿಟಲ್‌ ಕಂಪಾಸ್‌,
ವೈಫೈ,ಸೆಲ್ಯೂಲರ್‌,ಬ್ಲೂಟೂತ್‌,ಸಿರಿ
8 ಎಂಪಿ ಐಸೈಟ್‌ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ

ಆಪಲ್‌ ಐಫೋನಿನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ

ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ

ಆಪಲ್‌ ಐಫೋನ್‌ 5 ಎಸ್‌

 ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ

ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ


ಐಫೋನ್‌ 5 ಎಸ್‌

  ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ

ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ


ಐಫೋನ್‌ 5 ಎಸ್‌

 ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ

ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ


ಐಫೋನ್‌ 5 ಎಸ್‌

 ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ

ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ


ಐಫೋನ್‌ 5 ಎಸ್‌

  ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ

ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ


ಐಫೋನ್‌ 5 ಎಸ್‌

  ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ

ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ


ಐಫೋನ್‌ 5 ಎಸ್‌

 ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ

ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ


ಐಫೋನ್‌ 5 ಎಸ್‌

 ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ

ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ


ಐಫೋನ್‌ 5 ಎಸ್‌

 ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ

ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ


ಐಫೋನ್‌ 5 ಎಸ್‌

  ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ

ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ


ಐಫೋನ್‌ 5 ಎಸ್‌

 ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ

ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ


ಐಫೋನ್‌ 5 ಎಸ್‌

  ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ

ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ


ಐಫೋನ್‌ 5 ಎಸ್‌

ಆಪಲ್‌ ಐಫೋನ್‌ 5 ಎಸ್‌ ಬಿಡುಗಡೆ

ಆಪಲ್‌ ಐಫೋನ್‌ 5 ಎಸ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X