ಬರಲಿದೆ 'ಐಫೋನ್ 11' ಆವೃತ್ತಿ.! ಇರಲಿದೆ 'ತ್ರಿವಳಿ ಕ್ಯಾಮೆರಾ' ಮತ್ತು '5G' ಸ್ಪೆಷಾಲಿಟಿ !

|

ಆಪಲ್ ಕಂಪನಿ ಹೊಸ ಐಫೋನ್ ಬಿಡುಗಡೆ ಮಾಡಲಿದೆ ಎಂದರೇ ಖಂಡಿತಾ ಏನೋ ಹೊಸತನ ಇರಲಿದೆ ಎನ್ನುವುದು ಗ್ರಾಹಕರಿಗೆ ಗೊತ್ತಿರುವ ಸಂಗತಿ. ಆದರೆ ಇತ್ತೀಚಿಗೆ ಆಪಲ್‌ ಸಂಸ್ಥೆಯ ಯಾವುದೇ ಐಫೋನ್ ಲಾಂಚ್‌ ಆಗಿಲ್ಲ ಹೀಗಾಗಿ ಗ್ರಾಹಕರು ಹೊಸ ಐಪೋನ್ ಬಗ್ಗೆ ನಿರೀಕ್ಷಿಸುತ್ತಿದ್ದು, ಅಂಥಹ ಗ್ರಾಹಕರಿಗೆ ಕಂಪನಿಯು ಖುಷಿ ಸುದ್ದಿಯೊಂದನ್ನು ನೀಡಿದೆ. ಅದೆನೆಂದರೇ ಸಂಸ್ಥೆಯ ನೂತನ 'ಐಫೋನ್ 11' ಸರಣಿ ರಿಲೀಸ್ ಆಗಲಿದೆ.

ಬರಲಿದೆ 'ಐಫೋನ್ 11' ಆವೃತ್ತಿ.!  'ತ್ರಿವಳಿ ಕ್ಯಾಮೆರಾ' ಮತ್ತು '5G' ಸ್ಪೆಷಾಲಿಟಿ!

ಆಪಲ್ ಕಂಪನಿಯು 'ಐಪೋನ್ 11 ಆವೃತ್ತಿಯ ಸರಣಿಯನ್ನು ಇದೇ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದು, ಸಂಸ್ಥೆಯ ಹೊಸ ಐಫೋನ್ 11 ಸರಣಿಯ ಐಫೋನ್‌ಗಳ ಮೂಲಕ ಮೊದಲ ಬಾರಿಗೆ ತ್ರಿವಳಿ ಕ್ಯಾಮೆರಾವನ್ನು ಪರಿಚಯಿಸಲಿದ್ದು, ಇದರೊಂದಿಗೆ ವೈಯರ್‌ ಲೆಸ್‌ ಚಾರ್ಜರ್, ಫೇಸ್‌ ಐಡಿ ಮತ್ತು ಗ್ಲಾಸಿ ಲುಕ್ ನಂತಹ ಅತ್ಯುನ್ನತ ಫೀಚರ್ಸ್‌ಗಳನ್ನು 'ಹನ್ನೊಂದನೇ ಆವೃತ್ತಿಯು' ಒಳಗೊಂಡಿರಲಿದೆ ಎಂದು ತಿಳಿಸಿದೆ.

ಬರಲಿದೆ 'ಐಫೋನ್ 11' ಆವೃತ್ತಿ.!  'ತ್ರಿವಳಿ ಕ್ಯಾಮೆರಾ' ಮತ್ತು '5G' ಸ್ಪೆಷಾಲಿಟಿ!

ಆಪಲ್ ತನ್ನ ಹೊಸ ಐಫೋನ್ 11 ಆವೃತ್ತಿಯಲ್ಲಿ ವೈಯರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ನೀಡಲಿದ್ದು, ಇದರೊಟ್ಟಿಗೆ 'ಐಪೋನ್ 11'ನ ಇನ್ನೊಂದು ವಿಶೇಷ ಏನೆಂದರೇ ಡಿಸ್‌ಪ್ಲೇಯ ಗಾತ್ರವನ್ನು ಹೆಚ್ಚಿಸಿರುವುದು ಮತ್ತು C-TYPE ಚಾರ್ಜರ್ ಅನ್ನು ಗ್ರಾಹಕರು ನಿರೀಕ್ಷಿಸಬಹುದಾಗಿದೆ. ಇದರೊಂದಿಗೆ ಆಪಲ್ ಐಫೋನ್ 11 ಏನೆಲ್ಲಾ ಫೀಚರ್ಸ್‌ಗಳನ್ನು ಹೊತ್ತು ಬರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ತ್ರಿವಳಿ ಕ್ಯಾಮೆರಾ ಸ್ಪೆಷಲ್!

ತ್ರಿವಳಿ ಕ್ಯಾಮೆರಾ ಸ್ಪೆಷಲ್!

ತ್ರಿವಳಿ ಕ್ಯಾಮೆರಾ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದು, ಈಗಾಗಲೇ ಪ್ರಮುಖ ಸ್ಮಾರ್ಟ್‌ಫೋನ್‌ ಕಂಪನಿಗಳು ತ್ರಿವಳಿ ಕ್ಯಾಮೆರಾ ಪರಿಚಯಿಸಿವೆ. ಇದೀಗ ಜನಪ್ರಿಯ ಆಪಲ್ ಸಂಸ್ಥೆಯು ಸಹ ಇದೇ ಮೊದಲ ಬಾರಿಗೆ ತನ್ನ ಹೊಸ ಐಫೋನ್ 11 ಆವೃತ್ತಿಯ ಮೂಲಕ ತ್ರಿವಳಿ ಕ್ಯಾಮೆರಾವನ್ನು ಪರಿಚಯಿಸಲಿದೆ ಎನ್ನುವ ಸುದ್ದಿ ಆಪಲ್ ಅಭಿಮಾನಿಗಳ ಕೂತುಹಲ ಅಧಿಕಗೊಳಿಸಿದೆ.

ಐಫೋನ್ ಹನ್ನೊಂದನೇ ಆವೃತ್ತಿ

ಐಫೋನ್ ಹನ್ನೊಂದನೇ ಆವೃತ್ತಿ

ಆಪಲ್ ಕಂಪನಿಯ ಹನ್ನೊಂದನೇ ಆವೃತ್ತಿಯ ಸರಣಿಯು ಒಟ್ಟು ಮೂರು ಐಫೋನ್ ಮಾದರಿಗಳನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದ್ದು, ಇದರಲ್ಲಿ ಎರಡು ಐಫೋನ್ ಮಾದರಿಗಳು OLED ಡಿಸ್‌ಪ್ಲೇಯನ್ನ ಹೊಂದಿರಲಿವೆ ಮತ್ತು ಒಂದು ಐಫೋನ್ ಮಾದರಿ LCD ಡಿಸ್‌ಪ್ಲೇಯನ್ನು ಹೊಂದಿರಲಿದೆ ಮತ್ತು ಈ ಐಫೋನ್ XR ಮಾದರಿ ಡ್ಯುಯಲ್ ಕ್ಯಾಮೆರಾವನ್ನು ಒಳಗೊಂಡಿರಲಿದೆ ಎಂದು ತಿಳಿದು ಬಂದಿದೆ.

3D ಫೇಸ್ ಐಡಿ

3D ಫೇಸ್ ಐಡಿ

ಆಪಲ್ ಸಂಸ್ಥೆ ಮುಂಬದಿಯ ಕ್ಯಾಮೆರಾಗಳಲ್ಲಿ ಫೇಸ್‌ ಐಡಿ ತಂತ್ರಜ್ಞಾನ್‌ದಲ್ಲಿ ಹೊಸತನ ತರುವ ಪ್ರಯನ್ನಗಳು ನಡೆಯುತ್ತಲೇ ಇದ್ದು, ಸುಧಾರಿತ ಫೇಸ್‌ ಐಡಿ ತಂತ್ರಾಜ್ಞಾನ್‌ವನ್ನು ಹೊಸ ಐಫೋನ್ ಆವೃತ್ತಿಯಲ್ಲಿ ಪರಿವಯಿಸಲಿದೆ. ಗ್ರಾಹಕರು ಫೇಸ್‌ ಐಡಿ ಬಳಸುವಾಗ ಅವರ ಫೇಸ್‌ ಹೊರತುಪಡೆಸಿ ಅನಗತ್ಯ ಬ್ಯಾಕ್‌ಗ್ರೌಂಡ್ ಭಾಗವನ್ನು ಸೆರೆಹಿಡಿಯದಂತೆ ರೂಪಿಸಲಾಗಿದ್ದು, 3D ಫೇಸ್‌ ಐಡಿ ಸಹ ನಿರೀಕ್ಷಿಸಬಹುದಾಗಿದೆ.

ವಿನ್ಯಾಸ ಮತ್ತು ಡಿಸ್‌ಪ್ಲೇ

ವಿನ್ಯಾಸ ಮತ್ತು ಡಿಸ್‌ಪ್ಲೇ

ಆಪಲ್‌ನ ಬಹುನಿರೀಕ್ಷಿತ ಹನ್ನೊಂದನೇ ಆವೃತ್ತಿಯಲ್ಲಿ ಮೂರು ಐಫೋನ್ ಮಾದರಿಗಳ ಇರಲಿದ್ದು, ಕಡಿಮೆ ಅಂಚು ಹೊಂದಿರುವ ಡಿಸೈನ್‌ ಜೊತೆಗೆ ಗ್ಲಾಸಿ ಲುಕ್ ಅನ್ನು ಹೊಂದಿರಲಿವೆ ಎನ್ನಲಾಗುತ್ತಿದೆ. ಇವುಗಳಲ್ಲಿ ಎರಡು ಹೈ ಎಂಡ್‌ ಮಾದರಿಯ ಐಫೋನ್‌ಗಳಿದ್ದು, ಅವು ಕ್ರಮವಾಗಿ 6.5 ಮತ್ತು 5.8 ಇಂಚಿನ OLED ಡಿಸ್‌ಪ್ಲೇ ಹೊಂದಿರಲಿದ್ದು, ಇನ್ನೊಂದು ಮಾದರಿಯ ಐಫೋನ್ 6.1 ಇಂಚಿನ LCD ಡಿಸ್‌ಪ್ಲೇ ಹೊಂದಿರಲಿದೆ.

5G ನೆಟವರ್ಕ್ ?

5G ನೆಟವರ್ಕ್ ?

ಭಾರತೀಯ ಮೊವೈಲ್ ಮಾರುಕಟ್ಟೆಯಲ್ಲಿ ಪ್ರಸತ್ತ 4G ನೆಟವರ್ಕ್‌ಬಳಕೆ ಇದ್ದು, ಗ್ರಾಹಕರು ಸ್ಮಾರ್ಟ್‌ಫೋನ್‌ಗಳಲ್ಲಿ 5G ನೆಟವರ್ಕ್ ನಿರೀಕ್ಷಿಸುತ್ತಿದ್ದಾರೆ. ಈಗಾಗಲೇ ಕೆಲವು ಪ್ರಮುಖ ಸ್ಮಾರ್ಟ್‌ಫೋನ್‌ ಕಂಪನಿಗಳು 5G ನೆಟವರ್ಕ್ ಅನ್ನು ಪರಿಚಯಿಸುವುದಾಗಿ ಘೋಷಿಸಿದ್ದು, ಹೀಗಾಗಿ ಆಪಲ್ ಸಂಸ್ಥೆಯು ತನ್ನ ಹೊಸ ಹನ್ನೊಂದನೇ ಆವೃತ್ತಿಯ ಐಫೋನ್ ಮಾದರಿಗಳಲ್ಲಿ 5G ನೆಟವರ್ಕ್ ಪರಿಚಯಿಸುವ ಸಾಧ್ಯತೆಗಳು ಅಧಿಕವಾಗಿವೆ.

Best Mobiles in India

English summary
Apple will be launching the iPhones 2019 lineup in the latter half of the year and the iPhone 11 might become the first smartphone from Apple to get triple-camera setup, wireless charging technology and more.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X