iQOO 15 Mini: ಹೊಸ ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್ ವಿವರಗಳು ಬಹಿರಂಗ!
iQOO ತನ್ನ ಹೊಸ ಪ್ರೀಮಿಯಂ ಫ್ಲ್ಯಾಗ್‌ಶಿಪ್ ಫೋನ್ iQOO 15 ಅನ್ನು ಭಾರತದಲ್ಲಿ ಇದೇ ನವೆಂಬರ್ 26 ರಂದು ಪರಿಚಯಿಸುತ್ತಿದೆ. ಈ ಸುದ್ದಿಯನ್ನು ನೀವು ಈಗಾಗಲೇ ತಿಳಿದಿರಬಹುದು. ಈ iQOO 15 ಫೋನ್ ಕಳೆದ ಅಕ್ಟೋಬರ್‌ನಲ್ಲಿ ಮೊದಲು ಚೀನಾದಲ್ಲಿ ಬಿಡುಗಡೆಯಾಗಿತ್ತು. ಇದೀಗ ಭಾರತದಲ್ಲಿ ಬಿಡುಗಡೆಯಾಗಲು ರೆಡಿಯಾಗಿದೆ. ಇದೇ ವೇಳೆಗೆ iQOO ಕಂಪೆನಿಯು ಈ ಸರಣಿಯನ್ನು ವಿಸ್ತರಿಸುವ ಮೂಲಕ iQOO 15 Mini ಎಂಬ ಹೊಸ ಕಾಂಪ್ಯಾಕ್ಟ್ ಮಾದರಿಯನ್ನು ತರಲು ಸಜ್ಜಾಗುತ್ತಿದೆ ಎಂದು ಹೇಳಲಾಗಿದೆ.! ಇದು ಬಹುನಿರೀಕ್ಷಿತ Oneplus 15R ಜೊತೆ ಪೈಪೋಟಿಗೆ ಇಳಿಯುವ ಸಾಧ್ಯತೆ ಇದೆ.
iQOO 15 Mini: ಲಾಂಚ್ ಟೈಮ್‌ಲೈನ್!
ಹೌದು, ಚೀನಾದ Weibo ಪ್ಲಾಟ್‌ಫಾರ್ಮ್‌ನಲ್ಲಿ ಜನಪ್ರಿಯ ಟಿಪ್‌ಸ್ಟರ್ ಸ್ಮಾರ್ಟ್ ಪಿಕಾಚು (Smart Pikachu) ಅವರು iQOO 15 Mini ಆಗಮನದ ಸೂಚನೆ ನೀಡಿದ್ದಾರೆ. iQOO 15 Mini ಮುಂದಿನ ವರ್ಷ ಏಪ್ರಿಲ್‌ನಲ್ಲಿ ಸಣ್ಣ ಪರದೆಯೊಂದಿಗೆ ಬಿಡುಗಡೆಯಾಗಲಿದೆ ಎಂದು ಸ್ಮಾರ್ಟ್ ಪಿಕಾಚು ಅವರು ಹೇಳಿದ್ದಾರೆ. ಇಷ್ಟೇ ಅಲ್ಲದೆ, ಇದು ಗಾತ್ರದಲ್ಲಿ ಸಣ್ಣದಾದರೂ, ಫ್ಲ್ಯಾಗ್‌ಶಿಪ್ ಕ್ಲಾಸ್‌ನ ಕೆಲವು ಪ್ರಮುಖ ಫೀಚರ್‌ಗಳನ್ನು ಹೊಂದಿರಲಿದೆ ಎಂದು ತಿಳಿಸಿದ್ದಾರೆ.
iQOO 15 Mini: ಸಣ್ಣದಾದರೂ, ಫ್ಲ್ಯಾಗ್‌ಶಿಪ್ ಕ್ಲಾಸ್ ಫೀಚರ್ಸ್?!
ಮುಂಬರುವ ಕಾಂಪ್ಯಾಕ್ಟ್ ಫೋನ್ iQOO 15 Mini ಫೋನ್ ಕೂಡ ಸ್ಟ್ಯಾಂಡರ್ಡ್ iQOO 15 ಮಾದರಿಯಂತೆಯೇ ಲೋಹದ ಫ್ರೇಮ್ ಮತ್ತು ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿರಲಿದೆ ಹೇಳಲಾಗಿದೆ. ಇನ್ನು ಸಾಮಾನ್ಯವಾಗಿ ಕಾಂಪ್ಯಾಕ್ಟ್ ಫೋನ್‌ಗಳಲ್ಲಿ ದೊಡ್ಡ ಬ್ಯಾಟರಿ ಸಿಗುವುದಿಲ್ಲ. ಆದರೆ, ಈ ಮಿನಿ ಫೋನ್ ಕೂಡ iQOO 15 ಮಾದರಿಯಂತೆಯೇ ದೊಡ್ಡ 7,000mAh ಬ್ಯಾಟರಿಯನ್ನು ಹೊಂದಿರಲಿದೆ ಎಂದು ಸೂಚಿಸಲಾಗಿದೆ.

ಕಾರ್ಯಕ್ಷಮತೆಗಾಗಿ, ಈ iQOO 15 Mini ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9500 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ .ಹಿಂದಿನ ವರದಿಗಳು Dimensity 9500+ ಬಗ್ಗೆ ತಿಳಿಸಿದ್ದರೂ, ಈಗ ಹೊಸ ಲೀಕ್ Dimensity 9500 ಅನ್ನು ಸೂಚಿಸಿದೆ. ಗಮನಿಸುವುದಾದರೆ, ಫ್ಲ್ಯಾಗ್‌ಶಿಪ್ iQOO 15 ಸ್ನಾಪ್‌ಡ್ರಾಗನ್ 8 ಎಲೈಟ್ ಜೆನ್ 5 ಅನ್ನು ಹೊಂದಿದೆ. ಇದು ಪ್ರಸ್ತುತ ಕ್ವಾಲ್ಕಾಮ್‌ನ ಅತ್ಯಂತ ಶಕ್ತಿಶಾಲಿ ಪ್ರೊಸೆಸರ್ ಆಗಿದೆ.
ಇನ್ನು iQOO 15 Mini ಫೋನಿನ ಇತರ ಫೀಚರ್ಸ್ ಕುರಿತು ಯಾವುದೇ ಮಾಹಿತಿ ಇಲ್ಲ. ಆದರೆ, ಇದು OnePlus 15R ಮತ್ತು Oppo Find X9s ನಂತಹ ಮುಂಬರುವ ಮಿಡ್‌ರೇಂಡ್ ಫ್ಲ್ಯಾಗ್‌ಶಿಪ್‌ಗಳೊಂದಿಗೆ ನೇರವಾಗಿ ಸ್ಪರ್ಧಿಸುವ ನಿರೀಕ್ಷೆಯಿದೆ.
ಫ್ಲಾಗ್‌ಶಿಪ್ iQOO 15
ಭಾರತೀಯ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತುರಯವ ಫ್ಲಾಗ್‌ಶಿಪ್ iQOO 15 ಸ್ಮಾರ್ಟ್‌ಫೋನ್, ಇದೇ ನವೆಂಬರ್ 26 ರಂದು ಅಧಿಕೃತವಾಗಿ ಪರಿಚಯಗೊಳ್ಳುತ್ತಿದೆ. ಈಗಾಗಲೇ ಪ್ರೀ-ಬುಕ್ಕಿಂಗ್ ಪ್ರಾರಂಭವಾಗಿದ್ದು, ಕಂಪನಿಯ ಪ್ರಕಾರ ಪ್ರೀ-ಬುಕ್ಕಿಂಗ್ ಆರಂಭವಾದ ಮೊದಲ 24 ಗಂಟೆಗಳಲ್ಲೇ iQOO ಬ್ರ್ಯಾಂಡ್‌ನ ಭಾರತದಲ್ಲಿನ ಇತಿಹಾಸದಲ್ಲೇ ಅತಿ ಹೆಚ್ಚು ಪ್ರಿ-ಲಾಂಚ್ ಬುಕ್ಕಿಂಗ್‌ಗಳು ದಾಖಲಾಗಿವೆ ಎಂದು iQOO ತಿಳಿಸಿದೆ.
ಇತ್ತೀಚಿಗಷ್ಟೇ iQOO 15 ಫೋನ್ ಬೆಲೆ ಸೋರಿಕೆಯಾಗಿದೆ. ಟೆಕ್ ಟಿಪ್ಸ್ಟರ್ ಅಭಿಷೇಕ್ ಯಾದವ್ ಅವರ ಪ್ರಕಾರ, iQOO 15 ಗೆ ಸಂಬಂಧಿಸಿದ ಲಿಸ್ಟಿಂಗ್ Amazon India ವೆಬ್‌ಸೈಟ್‌ನಲ್ಲಿ ಕಂಡುಬಂದಿದ್ದು, ಇದು ಎರಡು ಸ್ಟೋರೇಜ್ ಮಾದರಿಗಳಲ್ಲಿ ಲಭ್ಯವಿರುವಂತೆ ತೋರುತ್ತದೆ. ಇವುಗಳಲ್ಲಿ 12GB RAM + 256GB ಸ್ಟೋರೇಜ್ ಫೋನ್ ಬೆಲೆ ₹72,999 ಆಗಿದ್ದರೆ, 16GB RAM + 512GB ಸ್ಟೋರೇಜ್ ಮಾದರಿಯ ಫೋನ್ ಬೆಲೆ ₹79,999 ಆಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications








