iQOO 3 ವೇಗದ ಕಾರ್ಯವೈಖರಿಯ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್!
ಬಹುನಿರೀಕ್ಷಿತ iQOO 3 ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಫೋನ್ ಹಲವು ಹೊಸತನಗಳೊಂದಿಗೆ ಎಂಟ್ರಿ ಕೊಟ್ಟಿದ್ದು, ವೇಗದ ಕಾರ್ಯವೈಖರಿಯ ತಂತ್ರಜ್ಞಾನ ಪಡೆದಿದೆ. 5G ಬೆಂಬಲವನ್ನು ಒಳಗೊಂಡಿರತುವ ಈ ಫೋನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಬದಲಾವಣೆ ಮಾಡಲಿದೆ. ಇನ್ನು ಈ ಫೋನ್ ಆರಂಭಿಕ ವೇರಿಯಂಟ್ ಬೆಲೆಯು 36,990ರೂ.ಗಳು ಆಗಿದೆ.

ಮೊದಲ 5G ಫೋನ್
iQOO 3 ಸ್ಮಾರ್ಟ್‌ಫೋನ್ ಭಾರತದ ಮೊದಲ ವಾಣಿಜ್ಯ 5G ಸ್ಮಾರ್ಟ್‌ಫೋನ್ ಆಗಿದ್ದು, ವೇಗದ ನೆಟವರ್ಕ್ ಸೌಲಭ್ಯ ಪಡೆದಿದೆ. ಯಾವುದೇ ಅಪ್‌ಲೋಡ್ ಇರಲಿ ಅಥವಾ ಡೌನ್‌ಲೋಡ್ ಇರಲಿ ಎರಡು ಕೆಲಸಗಳು ವೇಗವಾಗಿ ನಡೆಯಲು ವೇಗದ ನೆಟವರ್ಕ ಸಪೋರ್ಟ್ ಮಾಡಲಿದೆ. ವಿಡಿಯೊ ವೀಕ್ಷಣೆಯಲ್ಲಿ ಬಫರಿಂಗ್ ಕಾಣಿಸುವುದಿಲ್ಲ ಜೊತೆಗೆ ಗೇಮ್ ಆಟವಾಡಲು ಪೂರಕ ಅನುಕೂಲ ಲಭ್ಯವಾಗಲಿದೆ. ಇಂಟರ್ನೆಟ್ ಆಧಾರಿತ ಯಾವುದೇ ಕೆಲಸಗಳು ಸಹ ವೇಗವಾಗಿ ಆಗುತ್ತವೆ. ಈ ಫೋನಿನಲ್ಲಿ ಸಂವಹನ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ.

ಸ್ನ್ಯಾಪ್‌ಡ್ರಾಗನ್ 865 ಕಾರ್ಯವೈಖರಿ
iQOO 3 ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 865 ಪ್ರೊಸೆಸರ್ ಅನ್ನು ಒಳಗೊಂಡ ಭಾರತದ ಮೊದಲ ಸ್ಮಾರ್ಟ್‌ಫೋನ್ ಎಂದು ಗುರುತಿಸಿಕೊಂಡಿದೆ. 7nm ಚಿಪ್‌ಸೆಟ್ ಸಾಮರ್ಥ್ಯವನ್ನು ಹೊಂದಿರುವ ಈ ಪ್ರೊಸೆಸರ್ ವೇಗದ ಇಂಟರ್ನೆಟ ಬಳಕೆ ಹಾಗೂ ಡೆಸ್ಕ್ ಟಾಪ್ ಮಾದರಿಯ ಗೇಮಿಂಗ್ ಅನುಭವ ಒದಗಿಸಲಿದೆ. ಹಾಗೆಯೇ AI, ಮಲ್ಟೀ ಗಿಗಾಬೈಟ್ 5G ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿದೆ. ಈ ಪ್ರೊಸೆಸರ್ ಶೇ.25% ವೇಗವನ್ನು ಬೂಸ್ಟ್ ಮಾಡುತ್ತದೆ ಹಾಗೂ ಶೇ,30% ಎನರ್ಜಿ ಕಬಳಿಕೆ ಉಳಿಸುತ್ತದೆ.

ಅಧಿಕ ಸ್ಟೋರೇಜ್ ಸಾಮರ್ಥ್ಯ
iQOO 3 ಸ್ಮಾರ್ಟ್‌ಫೋನ್ ಸಿಪಿಯು ಇತ್ತೀಚಿನ LPDDR5 RAM ಮತ್ತು UFS 3.1 ಫ್ಲ್ಯಾಶ್‌ನ ಹೊಂದಾಣಿಕೆಯನ್ನು ಒಳಗೊಂಡಿದೆ. ಸ್ನ್ಯಾಪ್‌ಡ್ರಾಗನ್ 865 ಪ್ರೊಸೆಸರ್ ಮತ್ತು 12GB RAM + 256GB ಸ್ಟೋರೇಜ್ ಸಾಮರ್ಥ್ಯಗಳು iQOO 3 ಫೋನಿಗೆ ಹೆಚ್ಚಿನ ಬಲ ನೀಡಿದ್ದು, ಕಾರ್ಯಗಳು ವೇಗವಾಗಿ ನಡೆಯುತ್ತವೆ. ಅಧಿಕ ಡೇಟಾ ಸಾಮರ್ಥ್ಯದ ಗೇಮ್‌ಗಳನ್ನು ಹಾಗೂ ಹೆಚ್ಚು ಗ್ರಾಫಿಕ್ಸ್ ಇರುವ ಗೇಮ್‌ಗಳನ್ನು ಆಡಲು ಪೂರಕ ವೇದಿಕೆ ಒದಗಿಸಲಿವೆ. ಇದರೊಂದಿಗೆ ಮಲ್ಟಿಟಾಸ್ಕ್ ಕೆಲಸಗಳಿಗೂ ಬೆಂಬಲ ದೊರೆಯುತ್ತದೆ.

AMOLED ಡಿಸ್‌ಪ್ಲೇ
iQOO 3 ಸ್ಮಾರ್ಟ್‌ಫೋನ್ 6.4 ಇಂಚಿನ ಪೊಲಾರ್ ವ್ಯೂವ್ ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಈ AMOLED ಡಿಸ್‌ಪ್ಲೇಯು 180Hz ಸಾಮರ್ಥ್ಯದ ಡಿಸ್‌ಪ್ಲೇ ರಿಫ್ರೇಶ್ ರೇಟ್ ಹೊಂದಿರುವ ಮೊದಲ ಫೋನ್ ಇದಾಗಿದ್ದು, ಆಪರೇಟಿಂಗ್ ಉತ್ತಮ ಮತ್ತು ವೇಗದಲ್ಲಿ ಇದೆ. ಡಿಸ್‌ಪ್ಲೇಯು 1200nits ಸಾಮರ್ಥ್ಯ ಬೆಳಕಿನ ಪ್ರಖರತೆಯನ್ನು ಪಡೆದಿದೆ. ಹಾಗಂತ ಅಧಿಕ ಬೆಳಕಿನ ಪ್ರಖರತೆಯಿಂದ ಕಣ್ಣುಗಳಿಗೆ ಹಾನಿಯಾಗದಂತ ರಚನೆ ಪಡೆದಿದೆ.

ಗೇಮರ್ಸ್‌ಗೆ ಹಬ್ಬ
iQOO 3 ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 865 ಪ್ರೊಸೆಸರ್ ಹೊಂದಿದ್ದು, ಗೇಮಿಂಗ್‌ಗೆ ಅತ್ಯುತ್ತಮ ವೇದಿಕೆ ಇದಾಗಿದೆ. ಹಾಗೆಯೇ 180Hz ಸಾಮರ್ಥ್ಯದ ರಿಫ್ರೇಶ್ ರೇಟ್ ಹೊಂದಿದ್ದು, ಸ್ಕ್ರೀನ್ ಆಪರೇಟಿಂಗ್ ವೇಗ ಉತ್ತಮವಾಗಿದೆ. ಫೋನಿನ ಸೈಡ್‌ನಲ್ಲಿ ಮಾನ್‌ಸ್ಟರ್ ಟಚ್ ಬಟನ್ ನೀಡಲಾಗಿದ್ದು, ಇದು ಗೇಮ್ ಆಡಲು ಮತ್ತಷ್ಟು ಪೂರಕ ಅನುಕೂಲಗಳನ್ನು ನೀಡಲಿದೆ. ಗೇಮ್ ಆಡುವವರು ವೇಗವಾಗಿ ಮಲ್ಟಿ ಫಿಂಗರ್ ಆಪರೇಟಿಂಗ್ ಮಾಡಬಹುದಾಗಿದೆ.
ಈ ಫೋನ್ ಅಧಿಕ ಡೇಟಾದ ಪಬ್‌ಜಿ, ಕಾಲ್ ಆಫ್ ಡ್ಯುಟಿ, Asphalt 9 ನಂತಹ ಗೇಮ್‌ಗಳನ್ನು ಆಡಲು ಕಂಫರ್ಟ್ ಆಗಿದ್ದು, ಹಾಗೂ ವೇಗದ ಅನುಭವ ಒದಗಿಸುತ್ತದೆ. ಗೇಮ್‌ನಲ್ಲಿ ಬುಲೆಟ್ ಶೂಟ್ ಮಾಡುವಾಗ 4D ವೈಬ್ರೆಟ್ ಎಫೆಕ್ಟ್ ಲಭ್ಯವಾಗುತ್ತದೆ. ಅಲ್ಟ್ರಾ ಗೇಮಿಂಗ್ ಮೋಡ್ ಆಯ್ಕೆ ನೀಡಲಾಗಿದ್ದು, ಗೇಮ್ ಸೆಟ್ಟಿಂಗ್‌ಗಳನ್ನು ಕಸ್ಟಮೈಸ್ ಮಾಡಿಕೊಳ್ಳುವ ಅನುಕೂಲ ಸಿಗಲಿದೆ. ಗೇಮ್ ಆಡುವುದರಿಂದ ಫೋನ್ ಹೆಚ್ಚು ಬಿಸಿ ಆಗಬಾರದೆಂದು ಕಾರ್ಬನ್ ಫೈಬರ್ ವಪೂರ್ ಕೂಲಿಂಗ್ ಸಿಸ್ಟಮ್ ವ್ಯವಸ್ಥೆಯನ್ನು ಪಡೆದಿದೆ. ಇದರಿಂದ ಕಾರ್ಯವೈಖರಿ ಸುಗಮವಾಗಿರಲಿದೆ.

48ಎಂಪಿ AI ಕ್ಯಾಮೆರಾ
ಈ ದೈತ್ಯ ಗೇಮಿಂಗ್ ಫೋನ್ ಒಟ್ಟು ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾ ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಹಾಗೆಯೇ ಈ ಕ್ಯಾಮೆರಾ AI ತಂತ್ರಜ್ಞಾನ ಹೊಂದಿದೆ. ಇನ್ನು ದ್ವಿತೀಯ ಕ್ಯಾಮೆರಾ 13ಎಂಪಿಯ ಟೆಲಿಫೋಟೊ ಲೆನ್ಸ್ ಹಾಗೂ 20X ಜೂಮ್ ವ್ಯವಸ್ಥೆಯನ್ನು ಒಳಗೊಂಡಿದೆ. ತೃತೀಯ ಕ್ಯಾಮೆರಾವು ಸಹ 13ಎಂಪಿಯ ವೈಲ್ಡ್ ಆಂಗಲ್ ಲೆನ್ಸ್ ಸಾಮರ್ಥ್ಯದಲ್ಲಿದ್ದು, ನಾಲ್ಕನೇ ಕ್ಯಾಮೆರಾವು 2ಎಂಪಿಯ ಡೆಪ್ತ್ ಸೆನ್ಸಾರ್ ಪಡೆದಿದೆ.
ಹಾಗೆಯೇ 13ಎಂಪಿಯ ಸೆಲ್ಫಿ ಕ್ಯಾಮೆರಾ ಹೊಂದಿದ್ದು, ವಿಡಿಯೊಗಾಗಿ ಸೂಪರ್ ಆಯಂಟಿ ಶೇಕ್ ಆಯ್ಕೆ ನೀಡಲಾಗದಿದೆ. ಈ ಆಯ್ಕೆಯಿಂದಾಗಿ ಸ್ಥಿರವಾಗಿ ವಿಡಿಯೊ ಚಿತ್ರಿಕರಣ ಮಾಡಲು ಪೂರಕವಾಗಿದೆ.

ಬ್ಯಾಟರಿ-ಫ್ಲ್ಯಾಶ್‌ಚಾರ್ಜ್ ತಂತ್ರಜ್ಞಾನ
iQOO 3 ಸ್ಮಾರ್ಟ್‌ಫೋನ್ 4,400mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದಿದ್ದು, ಇದರೊಂದಿಗೆ 55W ಸಾಮರ್ಥ್ಯ ಸೂಪರ್ ಫ್ಲ್ಯಾಶ್‌ಚಾರ್ಜ್ ಸೌಲಭ್ಯವನ್ನು ಪಡೆದಿದೆ. ಒಂದು ದಿನದವರೆಗೂ ಬ್ಯಾಟರಿ ಬ್ಯಾಕ್ಅಪ್ ಬರಲಿದೆ. ಕೇವಲ 15 ನಿಮಿಷದ ಚಾರ್ಜ್ ಸುಮಾರು 50% ಬ್ಯಾಟರಿ ಭರ್ತಿ ಆಗಲು ಸಹಕರಿಸುತ್ತದೆ. ಇನ್ನು ಬ್ಯಾಟರಿ ಪೂರ್ಣ ಚಾರ್ಜ್ ಪಡೆದುಕೊಳ್ಳಲು 35 ನಿಮಿಷ ಬೇಕಾಗುತ್ತದೆ.

ಸರಿಸಾಟಿ ಇಲ್ಲದ ಫ್ಲ್ಯಾಗ್‌ಶಿಪ್ ಫೋನ್
ಪ್ರೊಸೆಸರ್ ಕಾರ್ಯವೈಖರಿ, ಮಲ್ಟಿಟಾಸ್ಕ್ ಆಪರೇಟಿಂಗ್, ಕ್ಯಾಮೆರಾ, ಬ್ಯಾಟರಿ ಬ್ಯಾಕ್‌ಅಪ್ ಹಾಗೂ ಗೇಮಿಂಗ್ ಯಾವುದೇ ಆಂಗಲ್‌ನಲ್ಲಿಯೂ ನೋಡಿದರು iQOO 3 ಸ್ಮಾರ್ಟ್‌ಫೋನ್ ಒಂದು ಸರಿಸಾಟಿ ಇಲ್ಲದ ಫ್ಲ್ಯಾಗ್‌ಶಿಪ್ ಫೋನ್ ಆಗಿದೆ. ಇದರೊಂದಿಗೆ 5G ಬೆಂಬಲ ಪಡೆದಿರುವ ಈ ಫೋನ್ ಗೇಮಿಂಗ್ 4G ವೇರಿಯಂಟ್ ಆಯ್ಕೆಗಳಲ್ಲಿಯೂ ಲಭ್ಯ ಇದೆ. ಮೊದಲ ನೋಟದಲ್ಲಿಯೇ ಸ್ಮಾರ್ಟ್‌ಫೋನ್ ಪ್ರಿಯರನ್ನ ಆಕರ್ಷಿಸುವ ಡಿಸೈನ್ ಮತ್ತು ಫೀಚರ್ಸ್‌ಗಳನ್ನು ಈ ಫೋನ್ ತುಂಬಿಕೊಂಡಿದೆ.
4G ವೇರಿಯಂಟ್‌ನ iQOO 3 ಸ್ಮಾರ್ಟ್‌ಫೋನ್ 8GB RAM + 128GB ವೇರಿಯಂಟ್ ಬೆಲೆಯು 36,990ರೂ.ಗಳು ಆಗಿದೆ. 8GB RAM + 256GB ಸ್ಟೋರೇಜ್‌ನ 4G ವೇರಿಯಂಟ್ ಬೆಲೆಯು 39,990ರೂ. ಪ್ರೈಸ್ ಹೊಂದಿದೆ. ಇನ್ನು 12GB RAM and 256GB ಸ್ಟೋರೇಜ್‌ನ ಟಾಪ್ ಎಂಡ್ 5G ವೇರಿಯಂಟ್ ಫೋನ್ ಬೆಲೆಯು 44,990ರೂ.ಗಳು ಆಗಿದೆ. iQOO 3 ಫೋನಿನ ಯಾವುದೇ ರಿಪೇರಿ ಬಂದರೇ ಉಚಿತ ಪಿಕ್ ಆಂಡ್ ಡ್ರಾಪ್ ಸರ್ವೀಸ್ ಸೌಲಭ್ಯ ನೀಡಿದೆ. ಇನ್ನು ಈ ಸೌಲಭ್ಯವು ದೇಶದ ಸುಮಾರು 15000ಕ್ಕೂ ಅಧಿಕ ಪಿನ್‌ಕೋಡ್ ಸ್ಥಳಗಳಲ್ಲಿ ಈ ಸೇವೆಯು ಲಭ್ಯವಾಗುತ್ತದೆ. ಹಾಗೆಯೇ ಉಚಿಯ 24*7 ಕಸ್ಟಮರ್ ಕೇರ್ ಸೌಲಭ್ಯ ಇದೆ. (1800-572-4700). ಹೆಚ್ಚಿನ ಮಾಹಿತಿಗೆ ಕಂಪನಿಯ ಅಧಿಕೃತ https://www.iqoo.com ವೆಬ್‌ಸೈಟ್‌ಗೆ ಭೇಟಿ ನೀಡಿರಿ.


Click it and Unblock the Notifications








