Home
ಮೊಬೈಲ್

IQOO: ಐಕ್ಯೂ ಫೋನ್‌ಗೆ ಬರೋಬ್ಬರಿ 44% ರಿಯಾಯಿತಿ: 256GB ಸ್ಟೋರೇಜ್‌... 50MP ಕ್ಯಾಮೆರಾ!

ಐಕ್ಯೂ ಸ್ಮಾರ್ಟ್‌ಫೋನ್‌ಗಳಿಗೆ (IQOO smartphone) ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಈ ನಡುವೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಸಹ ಲಾಂಚ್‌ ಆಗುತ್ತಿದ್ದು, ಈ ಮೂಲಕ ಬಳಕೆದಾರರಿಗೆ ಭಿನ್ನ ಅನುಭವ ನೀಡುತ್ತಿವೆ. ಈ ಎಲ್ಲಾ ಬೆಳವಣಿಗೆ ನಡುವೆ ಐಕ್ಯೂನ ಈ ಫೋನ್‌ಗೆ ದೊಡ್ಡ ಮಟ್ಟದ ಆಫರ್ ನೀಡಲಾಗಿದೆ.

ಹೌದು, ಐಕ್ಯೂ ನಿಯೋ 9 ಸ್ಮಾರ್ಟ್‌ಫೋನ್‌ (IQOO Neo 9 smartphone) ಸರಣಿಯು ಇನ್ನೇನು ಕೆಲವೇ ದಿನಗಳಲ್ಲಿ ಲಾಂಚ್‌ ಆಗಲಿದೆ. ಈ ಸಂತಸದ ಜೊತೆಗೆ ಐಕ್ಯೂ 9 ಪ್ರೊ 5G (IQOO 9 Pro 5G) ಫೋನ್‌ಗೆ ಭರ್ಜರಿ ಆಫರ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್‌ ಪ್ರೀಮಿಯಂ ಫೀಚರ್ಸ್ ಪಡೆಯುವ ಮೂಲಕ ಬಹಳ ಸದ್ದು ಮಾಡಿತ್ತು. ಅಂದರೆ 12GB RAM ಆಯ್ಕೆ ಹಾಗೂ 50 ಮೆಗಾಪಿಕ್ಸೆಲ್‌ ಕ್ಯಾಮೆರಾ ಸೆನ್ಸರ್‌ ಈ ಫೋನ್‌ ಅನ್ನು ಉತ್ತಮ ಎನಿಸಿದೆ. ಹಾಗಿದ್ರೆ, ಈ ಫೋನ್‌ಗೆ ಇರುವ ಆಫರ್ ಏನು?, ಏನೆಲ್ಲಾ ಫೀಚರ್ಸ್‌ ಪಡೆದಿದೆ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಕ್ಯೂ ಫೋನ್‌ಗೆ ಬರೋಬ್ಬರಿ 44% ರಿಯಾಯಿತಿ: 256GB ಸ್ಟೋರೇಜ್‌... 50MP ಕ್ಯಾಮೆರಾ

ಐಕ್ಯೂ 9 ಪ್ರೊ 5G ಸ್ಮಾರ್ಟ್‌ಫೋನ್‌ ಆಫರ್ ವಿವರ: ಈ ಫೋನ್ 79,990 ರೂ.ಗಳ ಆಫರ್ ಬೆಲೆ ಹೊಂದಿದ್ದು, ನೀವು ಈಗ ಈ ಫೋನ್‌ ಅನ್ನು 44,990ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಅಮೆಜಾನ್‌ (Amazon) ಈ ಫೋನ್‌ಗೆ 44% ರಷ್ಟು ರಿಯಾಯಿತಿ ನೀಡಿದೆ. ಅದಾಗ್ಯೂ ನೀವು ವಿನಿಮಯ ಆಫರ್ ನಲ್ಲಿ ಬರೋಬ್ಬರಿ 32,050 ರೂ.ವರೆಗೆ ಉಳಿತಾಯ ಮಾಡಬಹುದಾಗಿದೆ.

ಬ್ಯಾಂಕ್‌ ವಿಚಾರಕ್ಕೆ ಬಂದರೆ ಈ ಫೋನ್ ಖರೀದಿ ಮಾಡುವಾಗ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ವ್ಯವಹಾರದ ಮೇಲೆ 2000 ತ್ವರಿತ ರಿಯಾಯಿತಿ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವ್ಯವಹಾರದ ಮೇಲೆ 2000 ರೂ. ತ್ವರಿತ ರಿಯಾಯಿತಿ, ಐಸಿಐಸಿಐ ಬ್ಯಾಂಕ್ ಡೆಬಿಟ್ ಕಾರ್ಡ್ ಇಎಂಐ ಅಲ್ಲದ ವ್ಯವಹಾರದ ಮೇಲೆ ಫ್ಲಾಟ್ 2000 ತ್ವರಿತ ರಿಯಾಯಿತಿ, ಒನ್‌ಕಾರ್ಡ್‌ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ ಫ್ಲಾಟ್ 1200 ರೂ.ಗಳ ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇಷ್ಟೇ ಅಲ್ಲದೆ ಇನ್ನೂ ಹಲವಾರು ರೀತಿಯ ಬ್ಯಾಂಕ್‌ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಐಕ್ಯೂ ಫೋನ್‌ಗೆ ಬರೋಬ್ಬರಿ 44% ರಿಯಾಯಿತಿ: 256GB ಸ್ಟೋರೇಜ್‌... 50MP ಕ್ಯಾಮೆರಾ

ಐಕ್ಯೂ 9 ಪ್ರೊ 5G ಡಿಸ್‌ಪ್ಲೇ ವಿವರ: ಇನ್ನು ಈ ಫೋನ್‌ 6.78 ಇಂಚಿನ ಬೆಜೆಲ್ ಲೆಸ್ ಅಮೋಲೆಡ್‌ ಡಿಸ್ಪ್ಲೇ ಆಯ್ಕೆ ಪಡೆದಿದ್ದು, 1440 x 3200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಪಡೆದುಕೊಂಡಿದೆ. ಇದರೊಂದಿಗೆ 518ppi ಪಿಕ್ಸೆಲ್ ಸಾಂದ್ರತೆ ಮತ್ತು ಅತ್ಯುತ್ತಮ ದೃಶ್ಯಗಳನ್ನು ನೀಡಲು 20:9 ಆಕಾರ ಅನುಪಾತವನ್ನು ಹೊಂದಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕೆ ಪಂಚ್-ಹೋಲ್‌ ಶೈಲಿ ಪಡೆದಿದೆ.

ಐಕ್ಯೂ 9 ಪ್ರೊ 5G ಪ್ರೊಸೆಸರ್‌ ಮಾಹಿತಿ: ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 1 (4nm) ಪ್ರೊಸೆಸರ್‌ ಬಲ ಪಡೆದಿದ್ದು, ಇದು ಕಾರ್ಟೆಕ್ಸ್ X2, ಕಾರ್ಟೆಕ್ಸ್ A710 ಮತ್ತು ಕಾರ್ಟೆಕ್ಸ್ A510 ವಿನ್ಯಾಸಗಳೊಂದಿಗೆ ಆಕ್ಟಾ-ಕೋರ್ ಮೂಲಕ ಕೆಲಸ ಮಾಡಲಿದೆ. ಇದು ಗರಿಷ್ಠ ವೇಗ 3GHz ಹೊಂದಿದೆ. ಹಾಗೆಯೆ ಅಡ್ರಿನೋ 730 ಜಿಪಿಯು ಗ್ರಾಫಿಕ್ಸ್‌ ಬೆಂಬಲ ಪಡೆದಿದ್ದು, 12GB RAM ಆಯ್ಕೆ ಮೂಲಕ ಉತ್ತಮ ಎನಿಸಿದೆ.

ಐಕ್ಯೂ ಫೋನ್‌ಗೆ ಬರೋಬ್ಬರಿ 44% ರಿಯಾಯಿತಿ: 256GB ಸ್ಟೋರೇಜ್‌... 50MP ಕ್ಯಾಮೆರಾ

ಐಕ್ಯೂ 9 ಪ್ರೊ 5G ಕ್ಯಾಮೆರಾ ರಚನೆ: ಇನ್ನು 50 ಮೆಗಾಪಿಕ್ಸೆಲ್ ಗಿಂಬಲ್ ವೈಡ್ ಆಂಗಲ್ ಮೇನ್ ಲೆನ್ಸ್, 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 16 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮರಾ ಜೊತೆಗೆ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್‌ ಆಯ್ಕೆ ಪಡೆದಿಕೊಂಡಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ವೈಡ್ ಆಂಗಲ್ ಪ್ರೈಮರಿ ಸೆನ್ಸರ್‌ ಆಯ್ಕೆ ಪಡೆದುಕೊಂಡಿದೆ. ಉಳಿದಂತೆ ಈ ಸ್ಮಾರ್ಟ್‌ಫೋನ್ 4700mAh ಸಾಮರ್ದಥ್ಯದ ಬ್ಯಾಟರಿ ಆಯ್ಕೆ ಹೊಂದಿದೆ.

Best Mobiles in India

English summary
IQOO 9 Pro 5G phone has been given a great offer. This smartphone made a lot of noise by getting premium features. That means 12GB RAM option and 50 megapixel camera sensor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+