Home
ಮೊಬೈಲ್

iQOO 15 Mini: ಬರುತ್ತಿದೆ ಚಿಕ್ಕ ಗಾತ್ರದ ಪವರ್‌ಹೌಸ್ ಫ್ಲ್ಯಾಗ್‌ಶಿಪ್ ಫೋನ್!

iQOO ಇತ್ತೀಚೆಗಷ್ಟೇ ಚೀನಾದಲ್ಲಿ ತನ್ನ ಫ್ಲ್ಯಾಗ್‌ಶಿಪ್ iQOO 15 ಬಿಡುಗಡೆ ಮಾಡಿತ್ತು. ಈ ಫೋನ್ ಭಾರತದಲ್ಲಿ ಇದೇ ನವೆಂಬರ್‌ 26 ರಂದು ಬಿಡುಗಡೆಯಾಗುತ್ತಿದೆ. ಈ ಸುದ್ದಿಯ ಜೊತೆಗೆ ಕಂಪೆನಿಯಿಂದ ಮತ್ತೊಂದು ಭರ್ಜರಿ ಸಿಹಿಸುದ್ದಿ ಹೊರಬಿದ್ದಿದೆ. ಅದೇನೆಂದರೆ, iQOO ಕಂಪನಿಯು ಅದರ ಸಣ್ಣ ಆವೃತ್ತಿಯ iQOO 15 Mini ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂಬ ಮಾಹಿತಿಯು ಖ್ಯಾತ ಟೆಕ್ ಲೀಕರ್ Digital Chat Station (DCS) ನಿಂದ ಲೀಕ್ ಆಗಿದೆ. ಈ ಸ್ಮಾರ್ಟ್‌ಫೋನ್ ಈಗ ಆಂತರಿಕ ಪರೀಕ್ಷಾ ಹಂತದಲ್ಲಿದ್ದು, ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್‌ ಫೋನ್‌ಗಳ ಸಾಲಿಗೆ ಹೊಸ ಸೇರ್ಪಡೆಯಾಗುವ ನಿರೀಕ್ಚೆ ಇದೆ.

ಈ iQOO 15 Mini ಕುರಿತು ಕಂಪೆನಿಯಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ, ಸೋರಿಕೆಗಳ ಪ್ರಕಾರ, iQOO 15 Mini ಫೋನ್‌ನಲ್ಲಿ 6.31 ಇಂಚಿನ AMOLED ಡಿಸ್‌ಪ್ಲೇ ಇರಲಿದೆ. ಇಂದಿನ ಆಂಡ್ರಾಯ್ಡ್ ಫೋನ್‌ಗಳು ಸಾಮಾನ್ಯವಾಗಿ 6.7 ಇಂಚುಗಳಿಗಿಂತ ದೊಡ್ಡ ಪರದೆಯನ್ನು ಹೊಂದಿರುವುದರಿಂದ, ಇದು ಹಗುರ ಹಾಗೂ ಹಿಡಿಯಲು ಅನುಕೂಲವಾದ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಬಹುದು. ಈ ಫೋನ್‌ನ ವಿನ್ಯಾಸವು iQOO 15 ಮಾದರಿಯಂತೆಯೇ ಇರಲಿದೆ. ಆದರೆ, ಹಿಂಭಾಗದಲ್ಲಿ ಸರಳ ಕ್ಯಾಮೆರಾ ವಿನ್ಯಾಸ ಮತ್ತು ಚಿಕ್ಕ ಪರದೆ ವಿನ್ಯಾಸದೊಂದಿಗೆ ಬರಬಹುದು.

iQOO 15 Mini: ಬರುತ್ತಿದೆ ಚಿಕ್ಕ ಗಾತ್ರದ ಪವರ್‌ಹೌಸ್ ಫ್ಲ್ಯಾಗ್‌ಶಿಪ್ ಫೋನ್!

ಕಾರ್ಯಕ್ಷಮತೆಗಾಗಿ, ಈ ಹೊಸ ಫೋನ್‌ನಲ್ಲಿ MediaTek Dimensity 9500 Plus ಪ್ರೊಸೆಸರ್ ಇರಬಹುದು. ಇದನ್ನೂ ಸಹ ಇನ್ನೂ ಅಧಿಕೃತವಾಗಿ ಘೋಷಿಸಲ್ಪಟ್ಟಿಲ್ಲ, ಆದರೆ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ Dimensity 9500 ಚಿಪ್‌ನ ಸುಧಾರಿತ ಆವೃತ್ತಿಯಾಗಿರುತ್ತದೆ. ಈ ಹೊಸ ಚಿಪ್ ಉನ್ನತ ಮಟ್ಟದ ಗೇಮಿಂಗ್ ಪ್ರದರ್ಶನ ನೀಡಲಿದೆ ಎಂದು ನಿರೀಕ್ಷೆ ಇದೆ. ಈ ಮೀಡಿಯಾಟೆಕ್‌ನ ಬಿಡುಗಡೆ ಸಮಯದ ಆಧಾರದ ಮೇಲೆ, ಈ ಚಿಪ್ ಮುಂದಿನ ಏಪ್ರಿಲ್ 2026ರಲ್ಲಿ ಅಧಿಕೃತವಾಗಿ ಬಿಡುಗಡೆಯಾಗಬಹುದು. ಅದೇ ಸಮಯದಲ್ಲಿ ಈ iQOO 15 Mini ಫೋನ್ ಸಹ ಚೀನಾದಲ್ಲಿ ಲಾಂಚ್ ಆಗುವ ಸಾಧ್ಯತೆ ಹೆಚ್ಚು.

ಈ ವದಂತಿಯ ಸ್ಮಾರ್ಟ್‌ಫೋನ್ ಕುರಿತು ಮತ್ತೊಂದು ವದಂತಿಯ ಸುದ್ದಿ ಕೂಡ ಆಶ್ಚರ್ಯಕರವಾಗಿದೆ. ಸಾಮಾನ್ಯವಾಗಿ ಕಾಂಪ್ಯಾಕ್ಟ್ ಫೋನ್‌ಗಳಲ್ಲಿ ಬ್ಯಾಟರಿ ಸಾಮರ್ಥ್ಯ ಕಡಿಮೆಯಿರುತ್ತದೆ. ಆದರೆ iQOO 15 Mini ಈ ನಿಯಮವನ್ನು ಬದಲಾಯಿಸಬಹುದು. ಏಕೆಂದರೆ, ಸೋರಿಕೆಗಳ ಪ್ರಕಾರ, ಈ ಫೋನ್‌ನಲ್ಲಿ 7,000mAh ಬ್ಯಾಟರಿ ಇರಬಹುದು.! ಮುಂಬರಬಹುದಾದ iQOO 15 Mini ಫೋನ್ ಕುರಿತು ಸದ್ಯಕ್ಕೆ ಇಷ್ಟು ಸೋರಕೆಯ ಮಾಹಿತಿಯು ಹೊರಬಿದ್ದಿದೆ. ಈ ಮಾಹಿತಿ ಅಧಿಕೃತವಾದರೆ, ಈ ಫೋನ್ ಮುಂದಿನ ಪೀಳಿಗೆಯ ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್ ಮಾರುಕಟ್ಟೆಯನ್ನು ಸಂಪೂರ್ಣ ಬದಲಾಯಿಸಬಹುದು. ಏನಂತಿರಾ?

ಭಾರತದಲ್ಲಿ ನವೆಂಬರ್‌ 26 ರಂದು ಬಿಡುಗಡೆಯಾಗುತ್ತಿದೆ iQOO 15!
iQOO ಕಂಪೆನಿಯ ಸಿಇಒ ನಿಪುಣ್ ಮಾರ್ಯ ಅವರು X (ಹಳೆಯ Twitter) ನಲ್ಲಿ ಶೇರ್ ಮಾಡಿರುವ ಇತ್ತೀಚಿನ ಪೋಸ್ಟ್‌ನಲ್ಲಿ, ಭಾರತದಲ್ಲಿ ಬಹುನಿರೀಕ್ಷಿತ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ iQOO 15 ಬಿಡುಗಡೆ ಮಾಡುವ ಅಧಿಕೃತ ದಿನಾಂಕವನ್ನು ಪ್ರಕಟಿಸಿದ್ದಾರೆ. ಈಗಾಗಲೇ Amazon ಪೇಜ್‌ನಲ್ಲಿ ಈ iQOO 15 ಸ್ಮಾರ್ಟ್‌ಫೋನ್ ಕುರಿತ ಟೀಸರ್ ಕೂಡ ಲೈವ್ ಆಗಿದೆ. ಹಾಗಾದರೆ, ಭಾರತದಲ್ಲಿ ಮುಂಬರಲಿರುವ iQOO 15 ಸ್ಮಾರ್ಟ್‌ಫೋನ್ ಬೆಲೆ ಎಷ್ಟಿರಬಹುದು ಹಾಗೂ ಫೀಚರ್ಸ್ ಹೇಗಿವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Best Mobiles in India

English summary
According to leaks, the iQOO 15 Mini will feature a 6.31-inch AMOLED display. Since today's Android phones usually have screens larger than 6.7 inches, this could be a premium smartphone that is lightweight and comfortable to hold.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+