ಗೇಮಿಂಗ್ ಫೋನ್! ನಾಳೆ iQOO Neo 10R ಲಾಂಚ್; 6400mAh ಬ್ಯಾಟರಿ.. ಶಕ್ತಿಶಾಲಿ ಪ್ರೊಸೆಸರ್.. ಬೆಲೆ ಲೀಕ್!
ಗೇಮಿಂಗ್ ಪ್ರಿಯರಿಗೆ ಖುಷಿ ಸುದ್ದಿ ಇದೆ. ನಾಳೆ ಭಾರತದಲ್ಲಿ ಹೊಸ ಗೇಮಿಂಗ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ. ಹೌದು, ನಾವು ಐಕ್ಯೂ ನಿಯೋ 10R (iQOO Neo 10R) ಫೋನಿನ ಬಗ್ಗೆ ಹೇಳುತ್ತಿದ್ದೇವೆ. ಈ 5G ಫೋನ್ ನಾಳೆ (ಮಾರ್ಚ್ 11) ದೇಶೀಯ ಮಾರುಕಟ್ಟೆಗೆ ಅದ್ದೂರಿಯಾಗಿ ಎಂಟ್ರಿ ಕೊಡಲಿದೆ. ಈ ಮೊಬೈಲ್ 30,000 ರೂ.ಗಿಂತ ಕಡಿಮೆ ಬೆಲೆಗೆ ಲಾಂಚ್ ಆಗಲಿದೆ. ಬನ್ನಿ, ಈ ಫೋನಿನ ಬಿಡುಗಡೆ ಸಮಾರಂಭದ ನೇರಪ್ರಸಾರ ವೀಕ್ಷಣೆ, ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಐಕ್ಯೂ ನಿಯೋ 10R ಮೊಬೈಲ್ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದು 6000mm2 ವೇಪರ್ ಕೂಲಿಂಗ್ ಸಿಸ್ಟಮ್, 12GB RAM + 256GB ಸ್ಟೋರೇಜ್ ಹೊಂದಿದೆ. ಈ ಫೋನಿನಲ್ಲಿ 1.5K ಐ ಕೇರ್ ಅಮೋಲೆಡ್ ಡಿಸ್ಪ್ಲೇ ಲಭ್ಯವಿದೆ. ಹಾಗೆಯೇ 6,400mAh ಸಾಮರ್ಥ್ಯದ ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಐಕ್ಯೂ ನಿಯೋ 10R ಬಿಡುಗಡೆ ವಿವರ
ಐಕ್ಯೂ ನಿಯೋ 10R 5G ಫೋನ್ ಭಾರತದಲ್ಲಿ ನಾಳೆ (ಮಾರ್ಚ್ 11) ಅಧಿಕೃತವಾಗಿ ಬಿಡುಗಡೆಯಾಗಲಿದೆ. ಕಂಪನಿಯು ನಾಳೆ ಸಂಜೆ 4 ಗಂಟೆಗೆ ಐಕ್ಯೂ ನಿಯೋ 10R ಬೆಲೆ ಮತ್ತು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಿದೆ. ಇದರೊಂದಿಗೆ, ಐಕ್ಯೂ ನಿಯೋ 10R ಮಾರಾಟ ದಿನಾಂಕ ಮತ್ತು ಆಫರ್ ಬಗ್ಗೆ ಮಾಹಿತಿಯನ್ನು ಬಿಡುಗಡೆ ಕಾರ್ಯಕ್ರಮದ ಮೂಲಕ ಘೊಷಿಸಲಿದೆ. ಲಾಂಚ್ ಈವೆಂಟ್ ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಗೂ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಈಗಾಗಲೇ ಐಕ್ಯೂ ನಿಯೋ 10R ಮೈಕ್ರೋ ಸೈಟ್ ಲೈವ್ ಆಗಿದೆ. ಇಲ್ಲಿಯೂ ಸಹ ಬಿಡುಗಡೆ ಸಮಾರಂಭವನ್ನು ವೀಕ್ಷಿಸಬಹುದು.
ಐಕ್ಯೂ ನಿಯೋ 10R ಬೆಲೆ (ಸೋರಿಕೆ)
ಐಕ್ಯೂ ನಿಯೋ 10R ಫೋನನ್ನು ಮಧ್ಯಮ ಬಜೆಟ್‌ನಲ್ಲಿ ಬಿಡುಗಡೆ ಮಾಡಲಾಗುವುದು. ವರದಿಯ ಪ್ರಕಾರ, ಈ ಮೊಬೈಲ್ 12GB RAM + 256GB ಸ್ಟೋರೇಜ್ ಆಯ್ಕೆ ಹೊಂದಿರುತ್ತದೆ. ಈ ಫೋನನ್ನು 30 ಸಾವಿರ ರೂ.ಗಳ ವ್ಯಾಪ್ತಿಯಲ್ಲಿ ಮಾರಾಟ ಮಾಡಲಾಗುವುದು. ನೀವು ಬ್ಯಾಂಕ್ ಆಫರ್ ಮತ್ತು ರಿಯಾಯಿತಿಗಳೊಂದಿಗೆ ಇದನ್ನು 30,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.
ಐಕ್ಯೂ ನಿಯೋ 10R ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಐಕ್ಯೂ ನಿಯೋ 10R 5G ಫೋನ್ 6.78 ಇಂಚಿನ 1.5K ಅಮೋಲೆಡ್ ಡಿಸ್ಪ್ಲೇ ಹೊಂದಿರಲಿದೆ. ಇದು ಪಂಚ್ ಹೋಲ್ ಶೈಲಿಯ ಡಿಸ್ಪ್ಲೇ ಆಗಿದೆ. ಕಂಪನಿಯು ಈ ಸ್ಕ್ರೀನ್ ಅನ್ನು 'ಐ ಕೇರ್ ಡಿಸ್ಪ್ಲೇ' ಎಂದು ಕರೆದಿದೆ. ಈ ಸ್ಮಾರ್ಟ್‌ಫೋನ್ 3840Hz PWM ಡಿಮ್ಮಿಂಗ್, 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 144Hz ರಿಫ್ರೆಶ್ ದರದ ಬೆಂಬಲ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ಐಕ್ಯೂ ನಿಯೋ 10R 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8S ಜೆನ್ 3 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿರಲಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಈ ಮೊಬೈಲ್ 12GB RAM ನೊಂದಿಗೆ ಬರುತ್ತದೆ. ಗೇಮಿಂಗ್‌ಗಾಗಿ, ಈ ಐಕ್ಯೂ ಫೋನ್ 2000Hz ಇನ್‌ಸ್ಟಂಟ್ ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ ಇನ್ ಬಿಲ್ಟ್ FPS ಮೀಟರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ 6000mm2 ವೇಪರ್ ಕೂಲಿಂಗ್ ಚೇಂಬರ್ ಸಹ ಹೊಂದಿದೆ. ಇದು ಭಾರೀ ಗೇಮಿಂಗ್ ಸಮಯದಲ್ಲಿ ಫೋನ್ ಬಿಸಿಯಾಗುವುದನ್ನು ತಡೆಯುತ್ತದೆ.

ಕ್ಯಾಮೆರಾ ಸೆಟಪ್
ಐಕ್ಯೂ ನಿಯೋ 10R ಮೊಬೈಲ್ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಹೊಂದಿರುತ್ತದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರಲಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಐಕ್ಯೂ ನಿಯೋ 10R 5G ಫೋನ್ 6400mAh ಸಾಮರ್ಥ್ಯದ ಶಕ್ತಿಶಾಲಿ ಬ್ಯಾಟರಿಯನ್ನು ಹೊಂದಿರಲಿದೆ. ಕಂಪನಿಯು ಇದನ್ನು ಭಾರತದ ಅತ್ಯಂತ ತೆಳ್ಳಗಿನ ಮೊಬೈಲ್ ಎಂದು ಕರೆದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.


Click it and Unblock the Notifications








