7 ಸಾವಿರಕ್ಕಿಂತ ಕಡಿಮೆ! ಬರ್ತಿದೆ ಹೊಸ Itel ಫೋನ್.. ಖರೀದಿಗೆ ಕ್ಯೂ ಖಚಿತ!
ನೀವು ಬಜೆಟ್ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಫೋನ್ ಹುಡುಕುತ್ತಿದ್ದೀರಾ? ಹಾಗಿದ್ರೆ, ಸಿಹಿ ಸುದ್ದಿಯೊಂದು ನಿಮಗಿದೆ. ಹೌದು, ಐಟೆಲ್ (Itel) ಕಂಪನಿಯು ತನ್ನ ಭಾರತೀಯ ಗ್ರಾಹಕರಿಗೆ ಹೊಸ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ Itel A50 ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಇದನ್ನು 6.56 ಇಂಚಿನ ಡಿಸ್ಪ್ಲೇಯೊಂದಿಗೆ ಪರಿಚಯಿಸಬಹುದು. ಇದು HD+ ರೆಸಲ್ಯೂಶನ್ ಹೊಂದಿರುತ್ತದೆ. ಕಂಪನಿಯು ಇತ್ತೀಚೆಗೆ Itel A70 ಸರಣಿಯನ್ನು ಪ್ರಾರಂಭಿಸಿದೆ. ಇದರ ನಂತರ ಕಂಪನಿಯು ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಸಜ್ಜಾಗುತ್ತಿದೆ.
ಈ ಸ್ಮಾರ್ಟ್‌ಫೋನ್ ಮುಂದಿನ ವಾರ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಫೋನ್ ಬಜೆಟ್ ಸ್ನೇಹಿ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ. ಸ್ಮಾರ್ಟ್‌ಫೋನ್ ಖರೀದಿಸಿದ 100 ದಿನಗಳಲ್ಲಿ ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಆಫರ್‌ನೊಂದಿಗೆ ಬರುತ್ತದೆ. ಬೆಲೆಯ ಬಗ್ಗೆ ಹೇಳುವುದಾದರೆ, Itel A50 ಸರಣಿಯನ್ನು 7 ಸಾವಿರಕ್ಕಿಂತ ಕಡಿಮೆ ಬೆಲೆಗೆ ಪರಿಚಯಿಸುವ ನಿರೀಕ್ಷೆಯಿದೆ. ಹಾಗಿದ್ರೆ, ಈ ಹೊಸ ಸರಣಿಯ ನಿರೀಕ್ಷಿತ ಫೀಚರ್ಸ್ ಮತ್ತು ಇನ್ನಿತರ ವಿವರಗಳನ್ನು ತಿಳಿಯೋಣ ಬನ್ನಿ.

Itel A50 ಸರಣಿಯ ವಿಶೇಷತೆಗಳು
Itel A50 ಸರಣಿಯು HD+ ರೆಸಲ್ಯೂಶನ್‌ನೊಂದಿಗೆ 6.56 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ. ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಫೋನಿನ ನಯವಾದ ವಿನ್ಯಾಸವು Itel A70 ಅನ್ನು ಹೋಲುತ್ತದೆ. ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ ಫ್ಲ್ಯಾಷ್‌ನೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದು.
ಪೋಸ್ಟರ್ ಪ್ರಕಾರ, ಈ ಸ್ಮಾರ್ಟ್‌ಫೋನ್ ಹಲವು ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದು ಕಪ್ಪು, ಚಿನ್ನ, ನೀಲಿ ಮತ್ತು ಹಸಿರು ಬಣ್ಣಗಳನ್ನು ಒಳಗೊಂಡಿದೆ. Itel A50 A70 ಫೋನಿಗೆ ಸಮಾನವಾದ ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಕಂಪನಿಯು ಈ ಸರಣಿಯ ವಿಶೇಷತೆಗಳನ್ನು ಬಹಿರಂಗಪಡಿಸಲಿದೆ.
ಈ ಸುದ್ದಿ ಓದಿದ್ದೀರಾ?: ರಗಡ್ ಲುಕ್‌ನಲ್ಲೇ ಬರ್ತಿದೆ ಹೊಸ Redmi ಫೋನ್! ವಿಶೇಷತೆ ಏನಿದೆ ಅಂತೀರಾ!
Itel A70 ಫೋನಿನ ಫೀಚರ್ಸ್‌ಗಳು
ಡಿಸ್‌ಪ್ಲೇ: Itel A70 ಫೋನ್ 6.6 ಇಂಚಿನ HD + ಡಿಸ್‌ಪ್ಲೇಯನ್ನು ಹೊಂದಿದೆ. ಇದು 720 x 1612 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 500 nits ಬ್ರೈಟ್‌ನೆಸ್ ಅನ್ನು ಹೊಂದಿದೆ.
ಪ್ರೊಸೆಸರ್: ಈ ಸ್ಮಾರ್ಟ್‌ಫೋನ್ 1.8GHz ಆಕ್ಟಾ ಕೋರ್ ಯುನಿಸಾಕ್ T603 ಪ್ರೊಸೆಸರ್ ಅನ್ನು ಹೊಂದಿದೆ. ಇದು Mali G57 MP1 GPU ಅನ್ನು ಒಳಗೊಂಡಿದೆ. ಇದು 4GB + 8GB ವಿಸ್ತರಣೆ RAM ಜೊತೆಗೆ 64GB, 128GB ಮತ್ತು 256GB ಸ್ಟೋರೇಜ್ ಹೊಂದಿದೆ. ಆದಾಗ್ಯೂ, ನೀವು ಮೈಕ್ರೊ SD ಕಾರ್ಡ್ ಸಹಾಯದಿಂದ ಇದರ ಸ್ಟೋರೇಜ್ ಅನ್ನು 2TB ವರೆಗೆ ಹೆಚ್ಚಿಸಬಹುದು.

ಕ್ಯಾಮೆರಾ: Itel A70 ಕ್ಯಾಮೆರಾ ಸೆಟಪ್ ಮೊಬೈಲ್ ಪ್ರಿಯರನ್ನು ಆಕರ್ಷಿಸಿದೆ. ಇದು 13 ಮೆಗಾಪಿಕ್ಸೆಲ್ HDR ಕ್ಯಾಮೆರಾ ಮತ್ತು AI ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ: ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಈ ಸ್ಮಾರ್ಟ್‌ಫೋನ್ Android Go ಆವೃತ್ತಿಯನ್ನು ಆಧರಿಸಿದ itel OS 13 ನಲ್ಲಿ ಕೆಲಸ ನಿರ್ವಹಿಸುತ್ತದೆ.
ಇತರೆ ಫೀಚರ್ಸ್: ಭದ್ರತೆಗಾಗಿ, ಈ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಒಳಗೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 4G VoLTE, GPS + GLONASS, ಡ್ಯುಯಲ್ 4G VoLTE, ಬ್ಲೂಟೂತ್ 5.0, ಮತ್ತು USB ಟೈಪ್-ಸಿ ಪೋರ್ಟ್, Wi-Fi 802.11 b/g/n ನಂತಹ ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








