ರಗಡ್ ಲುಕ್‌ನಲ್ಲೇ ಬರ್ತಿದೆ ಹೊಸ Redmi ಫೋನ್! ವಿಶೇಷತೆ ಏನಿದೆ ಅಂತೀರಾ!
ಮೊಬೈಲ್ ಪ್ರಿಯರಿಗೆ ಶೀಘ್ರದಲ್ಲೇ ಸಿಗಲಿದೆ ಸಿಹಿ ಸುದ್ದಿ! ಹೊಸ ರೆಡ್ಮಿ ಫೋನ್ ಗ್ರಾಹಕರ ಕೈ ಸೇರುವುದು ಖಚಿತ. ಹೌದು, ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಶಿಯೋಮಿ (Xiaomi) ಕಂಪನಿಯು ಶೀಘ್ರದಲ್ಲೇ ತನ್ನ ಪ್ರಮುಖ ಸರಣಿ Redmi Note 14 5G ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಸರಣಿಯಲ್ಲಿ Redmi Note 14, Redmi Note 14 Pro ಮತ್ತು Redmi Note 14 Pro+ ಫೋನನ್ನು ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ. ಈ ಫೋನ್‌ಗಳು ವಿಭಿನ್ನ ಪ್ರಮಾಣೀಕರಣ ಸೈಟ್‌ಗಳಲ್ಲಿ ಕಾಣಿಸಿಕೊಂಡಿವೆ.
ಹೌದು, ಆಗಸ್ಟ್ ತಿಂಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಭರಾಟೆ ಜೋರಾಗಿದೆ. ಇದೀಗ, ಶಿಯೋಮಿ ಸಹ ಅಖಾಡಕ್ಕೆ ಎಂಟ್ರಿ ಕೊಡಲು ಮುಂದಾಗಿದೆ. Redmi Note 14 5G ಅನ್ನು ಈ ಹಿಂದೆ BIS ಸೈಟ್‌ನಲ್ಲಿ ಮಾದರಿ ಸಂಖ್ಯೆ 24090RA29C ನೊಂದಿಗೆ ಗುರುತಿಸಲಾಗಿತ್ತು. ಅದಕ್ಕೂ ಮೊದಲು ಇದು IMEI ಡೇಟಾಬೇಸ್‌ನಲ್ಲಿಯೂ ಕಾಣಿಸಿಕೊಂಡಿತ್ತು. ಈಗ ಕಂಪನಿಯು ತನ್ನ ಗ್ರಾಹಕರಿಗೆ ಮತ್ತೊಂದು ದೊಡ್ಡ ಸುದ್ದಿ ನೀಡಿದೆ. ಇದರಲ್ಲಿ Redmi Note 14 Pro ಫೋನನ್ನು ಗುರುತಿಸಲಾಗಿದೆ.

ಹೊಸ ಫೋನ್ ಖರೀದಿಸುವವರು ಸ್ವಲ್ಪ ಕಾಯಿರಿ!
Redmi Note 14 Pro ಫೋನ್ ಅನ್ನು BISನಲ್ಲಿ ಗುರುತಿಸಲಾಗಿದೆ. ಈ Redmi Note 14 Pro ಮೊಬೈಲ್ ಮಾಡೆಲ್ ಸಂಖ್ಯೆ 24094RAD4I ನೊಂದಿಗೆ ಕಾಣಿಸಿಕೊಂಡಿದೆ. BIS ಪಟ್ಟಿಯ ನಂತರ, ಕಂಪನಿಯು ಶೀಘ್ರದಲ್ಲೇ ಇದನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ. ನೀವು ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ಇನ್ನೂ ಸ್ವಲ್ಪ ದಿನಗಳವರೆಗೆ ಕಾಯುವುದು ಉತ್ತಮ.
ಭಾರತದಲ್ಲೇ ಮೊದಲು ಬಿಡುಗಡೆ ಸಾಧ್ಯತೆ
BIS ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮಾಡೆಲ್ ಸಂಖ್ಯೆಯನ್ನು ಕೊನೆಯಲ್ಲಿ ಬರೆಯಲಾಗಿದೆ. ಇದು ಭಾರತೀಯ ಮಾದರಿ ಎಂಬುದನ್ನು ತೋರಿಸುತ್ತದೆ. ಕಂಪನಿಯು ಇದನ್ನು ಮೊದಲು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡುತ್ತದೆ. ನಂತರ ಈ ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ, ಈಗ ಇದನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಬಹುದು ಎಂದು BIS ಪಟ್ಟಿಯು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಖುಷಿ ಸುದ್ದಿ! ಈ Samsung ಫೋನ್ ಬೆಲೆ 12,000 ಇಳಿಕೆ! ಎಷ್ಟಿತ್ತು? ಎಷ್ಟಾಗಿದೆ?
Redmi Note 14 5G ಸರಣಿಯ ನಿರೀಕ್ಷಿತ ಫೀಚರ್ಸ್
ಡಿಸ್ಲ್ಪೇ: ಲಭ್ಯವಾಗಿರುವ ಮಾಹಿತಿಯ ಪ್ರಕಾರ, Redmi Note 14 ಸರಣಿಯ ಫೋನ್‌ಗಳು 6.7 ಇಂಚಿನ AMOLED ಡಿಸ್ಲ್ಪೇಯನ್ನು ಹೊಂದಿರುವ ಸಾಧ್ಯತೆಯಿದೆ. ಜೊತೆಗೆ ಸುಲಭ ಕಾರ್ಯಕ್ಷಮತೆಗಾಗಿ, ಈ ಸರಣಿಯಲ್ಲಿನ ಎಲ್ಲಾ ಫೋನ್‌ಗಳು 120Hz ರಿಫ್ರೆಶ್ ದರದೊಂದಿಗೆ ಬರುವ ನಿರೀಕ್ಷೆಯಿದೆ.
ಪ್ರೊಸೆಸರ್: ಮುಂಬರುವ Redmi Note 14 5G ಸರಣಿಯ ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 7S Gen 3 ಪ್ರೊಸೆಸರ್‌ನೊಂದಿಗೆ ಬರುವ ಸಾಧ್ಯತೆಯಿದೆ. ಜೊತೆಗೆ, OLED ಪ್ಯಾನೆಲ್‌ನೊಂದಿಗೆ ಬಾಗಿದ ಡಿಸ್ಪ್ಲೇಯನ್ನು ಹೊಂದಿರಲಿದೆ. MediaTek Dimension 7350 Pro ಚಿಪ್‌ಸೆಟ್ ಅನ್ನು ಇದರಲ್ಲಿ ಕಾಣಬಹುದು.
ಕ್ಯಾಮೆರಾ ಮತ್ತು ಬ್ಯಾಟರಿ: ಇನ್ನೂ, Redmi Note 14 Pro ಮತ್ತು Redmi Note 14 Pro+ ಎರಡೂ ಫೋನ್‌ಗಳು 50MP ಪ್ರಾಥಮಿಕ ಕ್ಯಾಮೆರಾವನ್ನು ಪಡೆಯುವ ನಿರೀಕ್ಷೆಯಿದೆ. ಬ್ಯಾಟರಿ ಬ್ಯಾಕಪ್ ಬಗ್ಗೆ ಹೇಳುವುದಾದರೆ, Redmi Note 14 5G ಸರಣಿಯು 5000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿರಲಿದೆ. ಇದು 45W ವೇಗದ ಚಾರ್ಜಿಂಗ್ ಸಪೋರ್ಟ್ ಒಳಗೊಂಡಿರಲಿದೆ.
ಗಿಜ್‌ಬಾಟ್ ಕನ್ನಡ ವೆಬ್‌ಸೈಟ್ ತಂತ್ರಜ್ಞಾನ ಸಂಬಂಧಿಸಿದ ಸುದ್ದಿಗಳನ್ನು ತ್ವರಿತವಾಗಿ ನೀಡುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಪೋನ್, ಕಂಪ್ಯೂಟರ್, ಗ್ಯಾಡ್ಜೆಟ್‌ಗಳ ಮತ್ತು ಆನ್‌ಲೈನ್ ಜಗತ್ತಿನ ಕ್ಷಣ-ಕ್ಷಣದ ಸುದ್ದಿ, ವಿಡಿಯೋಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಎಕ್ಸ್ ಖಾತೆ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ತಪ್ಪದೇ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








