itel: ಬಜೆಟ್ ಬೆಲೆಯಲ್ಲಿ ಈ ಫೋನ್ ಅತ್ಯುತ್ತಮ! 64GB ಸ್ಟೋರೇಜ್.. 5,999ರೂ.ಗಳಿಗೆ ಲಭ್ಯ
ಬಜೆಟ್ ಬೆಲೆಯ ಫೋನ್‌ಗಳಿಗೆ (budget priced smartphone) ಭಾರತದಲ್ಲಿ ಸಾಕಷ್ಟು ಬೇಡಿಕೆ ಇದೆ. ಈ ಕಾರಣಕ್ಕೆ ಪ್ರಮುಖ ಕಂಪೆನಿಗಳು ತಮ್ಮ ಮಿಡ್ ರೇಂಜ್ ಹಾಗೂ ಹೈ ಎಂಡ್ ಫೋನ್‌ಗಳ ಜೊತೆಗೆ ಬಜೆಟ್ ಬೆಲೆಯ ಫೋನ್‌ಗಳನ್ನೂ ಸಹ ಅನಾವರಣ ಮಾಡಿಕೊಂಡು ಬರುತ್ತಿವೆ. ಅದರಂತೆ ಈಗ ಪ್ರಮುಖ ಇ-ಕಾಮರ್ಸ್ ಸೈಟ್‌ಗಳಲ್ಲೂ ಸಹ ಬಜೆಟ್ ಬೆಲೆಯ ಫೋನ್‌ಗಳಿಗೆ ಇನ್ನೂ ಅಗ್ಗದ ಬೆಲೆಯನ್ನು ಪಟ್ಟಿ ಮಾಡಿವೆ.
ಹೌದು, ಭಾರತದ ಗ್ರಾಮೀಣ ಭಾಗದ ಜನರು ಅಥವಾ ದೈನಂದಿನ ಸಾಮಾನ್ಯ ಬಳಕೆಗೆ ಬಜೆಟ್ ಬೆಲೆಯ ಫೋನ್‌ಗಳಿಗೆ ಮಾರು ಹೋಗುತ್ತಾರೆ. ಅದರಂತೆ ಈಗ ಐಟೆಲ್ A60s (itel A60s) ಫೋನ್‌ಗೆ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ದೊಡ್ಡ ಮಟ್ಟದ ಆಫರ್ ನೀಡಲಾಗಿದ್ದು, ಈ ಮೂಲಕ ಹಣ ಉಳಿಸುವ ಜೊತೆಗೆ ಕಡಿಮೆ ದರದಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಅನುಭವ ಪಡೆಯಬಹುದಾಗಿದೆ. ಈ ಫೋನ್ 64GB ಇಂಟರ್ ಸ್ಟೋರೇಜ್ ಆಯ್ಕೆಯೊಂದಿಗೆ ಆಕರ್ಷಕ ಫೀಚರ್ಸ್ ಪಡೆದಿದೆ. ಹಾಗಿದ್ರೆ, ಈ ಫೋನ್ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರ ಎಷ್ಟು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ

ಐಟೆಲ್ A60s : ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ದರ 8,499 ರೂ.ಗಳಾಗಿದ್ದು, ನೀವೀಗ ಇದನ್ನು 5,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಅಮೆಜಾನ್ (Amazon) ಈ ಫೋನ್‌ಗೆ 29% ರಿಯಾಯಿತಿ ಘೋಷಣೆ ಮಾಡಿದೆ. ಇದರ ಜೊತೆಗೆ ಸ್ವಲ್ಪ ಮಟ್ಟದ ಕ್ಯಾಶ್ ಬ್ಯಾಕ್ ಹಾಗೂ ಇತರೆ ಕೊಡುಗೆಯನ್ನೂ ಸಹ ಪಡೆದುಕೊಳ್ಳುವ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.
ಬ್ಯಾಂಕ್ ವಿಚಾರಕ್ಕೆ ಬಂದರೆ ಸಿಟಿಬ್ಯಾಂಕ್ ಕಾರ್ಡ್ ಇಎಮ್‌ಐ ಅಲ್ಲದ ವ್ಯವಹಾರದ ಮೇಲೆ 750ರೂ. ವರೆಗೆ ರಿಯಾಯಿತಿ, ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದಲ್ಲಿ 1000ರೂ. ವರೆಗೆ ರಿಯಾಯಿತಿ, ಫೆಡರಲ್ ಬ್ಯಾಂಕ್ ಮಾಸ್ಟರ್ ಕಾರ್ಡ್ ಡೆಬಿಟ್ ಕಾರ್ಡ್ ಇಎಮ್‌ಐ ಅಲ್ಲದ ವ್ಯವಹಾರಕ್ಕೆ 500ರೂ. ವರೆಗೆ ರಿಯಾಯಿತಿ, ಕೆನರಾ ಬ್ಯಾಂಕ್ ಮಾಸ್ಟರ್ ಕಾರ್ಡ್ ಡೆಬಿಟ್ ಕಾರ್ಡ್ ಇಎಮ್‌ಐ ಅಲ್ಲದ ವ್ಯವಹಾರದ ಮೇಲೆ 300ರೂ. ವರೆಗೆ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.

ಐಟೆಲ್ A60s ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.6 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜತೆಗೆ 20:9 ಆಕಾರ ಅನುಪಾತದೊಂದಿಗೆ 267 ppi ಸಾಂದ್ರತೆ ಪಡೆದಿದೆ. ಈ ಮೂಲಕ ವಿಡಿಯೋ ವೀಕ್ಷಣೆಗೆ ಹಾಗೂ ಇನ್ನಿತರೆ ಚಟುವಟಿಕೆಗೆ ಅತ್ಯುತ್ತಮವಾದ ಫೋನ್ ಆಗಿದೆ.
ಐಟೆಲ್ A60s ಪ್ರೊಸೆಸರ್ ಮಾಹಿತಿ: ಈ ಫೋನ್ ಯುನಿಸಾಕ್ SC9863A1 (28nm) ಪ್ರೊಸೆಸರ್ ಬಲ ಹೊಂದಿದ್ದು, ಈ ಸಿಪಿಯು ಆಕ್ಟಾ-ಕೋರ್ (4x1.6 GHz ಕಾರ್ಟೆಕ್ಸ್-A55 & 4x1.2 GHz ಕಾರ್ಟೆಕ್ಸ್-A55) ನೊಂದಿಗೆ ಕಾಣಿಸಿಕೊಂಡಿದೆ. ಹಾಗೆಯೇ ಆಂಡ್ರಾಯ್ಡ್ 12 ಓಎಸ್ ಅನ್ನು ಈ ಫೋನ್ ರನ್ ಮಾಡಲಿದೆ. ಉಳಿದಂತೆ ಆಫರ್ ಬೆಲೆಗೆ ಲಭ್ಯ ಇರುವ ಫೋನ್ 64GB ಇಂಟರ್ ಸ್ಟೋರೇಜ್ ಹಾಗೂ 4GB RAM ಆಯ್ಕೆ ಪಡೆದಿದ್ದು, ಅದಾಗ್ಯೂ ಇನ್ನೂ ಹೆಚ್ಚಿನ ಸ್ಟೋರೇಜ್ ಬೇಕು ಎಂದರೆ ಮೈಕ್ರೋ ಸ್ಟೋರೇಜ್ ಕಾರ್ಡ್ ಬಳಕೆ ಮಾಡಬಹುದು.
ಐಟೆಲ್ A60s ಕ್ಯಾಮೆರಾ ರಚನೆ: ಈ ಬಜೆಟ್ ಬೆಲೆಯ ಫೋನ್ ಬೆಲೆಗೆ ತಕ್ಕಂತೆ ಕ್ಯಾಮೆರಾ ಹೊಂದಿದೆ. ಅಂದರೆ 8 ಮೆಗಾಪಿಕ್ಸೆಲ್ ಎಐ ಮುಖ್ಯ ರಿಯರ್ ಕ್ಯಾಮರಾ ಆಯ್ಕೆ ಪಡೆದಿದ್ದು, ಇದರೊಂದಿಗೆ 0.08 ಮೆಗಾಪಿಕ್ಸೆಲ್ ಆಕ್ಸಿಲಿಯರಿ ಲೆನ್ಸ್ ಅನ್ನು ಹೊಂದಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆ ಉದ್ದೇಶಕ್ಕೆ 5 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಈ ಸೆನ್ಸರ್‌ಗಳು ಎಲ್ಇಡಿ ಫ್ಲ್ಯಾಶ್ ಸೌಲಭ್ಯ ಪಡೆದಿವೆ.

ಐಟೆಲ್ A60s ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5000 mAh ಸಾಮರ್ಥದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಇದಕ್ಕೆ 10W ವೈರ್ಡ್ ಚಾರ್ಜಿಂಗ್ ಬೆಂಬಲ ನೀಡಲಾಗಿದೆ. ಉಳಿದಂತೆ ಈ ಫೋನ್ ನಿಮಗೆ ಸ್ಯಾಡೋ ಬ್ಲಾಕ್, ಗ್ಲೇಸಿಯರ್ ಗ್ರೀನ್, ಮೂನ್ಲೈಟ್ ವೈಲೆಟ್ ಬಣ್ಣದಲ್ಲಿ ಲಭ್ಯ ಇದೆ. ಜೊತೆಗೆ ಈ ಫೋನ್ ಫಿಂಗರ್‌ಪ್ರಿಂಟ್ ಸೆನ್ಸರ್, ಜಿಪಿಎಸ್ ಸೌಲಭ್ಯ ಪಡೆದಿದೆ.


Click it and Unblock the Notifications








