ಜಸ್ಟ್ 6999 ರೂ.! 50MP ಕ್ಯಾಮೆರಾ.. 5000mAh ಬ್ಯಾಟರಿ.. ಅಗ್ಗದ ಬೆಲೆಗೆ Itel A80 ಲಾಂಚ್
ಐಕ್ಯೂ ಅಗ್ಗದ ಸ್ಮಾರ್ಟ್‌ಫೋನ್‌ಗಳಿಗೆ ಹೆಸರಾಗಿರುವ ಟೆಕ್ ಬ್ರಾಂಡ್ ಆಗಿದೆ. ಭಾರತೀಯ ಮಾರುಕಟ್ಟೆಗೆ ಮತ್ತೊಂದು ಹೊಸ ಫೋನನ್ನು ಪರಿಚಯಿಸಿದೆ. ಹೌದು, ಕಂಪನಿಯು ಐಟೆಲ್ A80 (Itel A80) ಅನ್ನು ಸದ್ದಿಲ್ಲದೆ ಭಾರತದಲ್ಲಿ ಬಿಡುಗಡೆ (itel A80 launched) ಮಾಡಿದೆ. ಇದು 7000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಈ ಫೋನಿನ ಸ್ಟೈಲಿಶ್ ಲುಕ್ ಮತ್ತು ಅತ್ಯಾಕರ್ಷಕ ವೈಶಿಷ್ಟ್ಯಗಳು ಮೊಬೈಲ್ ಪ್ರಿಯರನ್ನು ಆಕರ್ಷಿಸುತ್ತಿವೆ. ಬನ್ನಿ, ಹೊಸ ಐಟೆಲ್ A80 ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಐಟೆಲ್ A80 ಮೊಬೈಲ್ 6.67 ಡಿಸ್ಪ್ಲೇಯನ್ನು ಹೊಂದಿದೆ. ಇದು ಯುನಿಸೊಕ್ T603 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಪಿಕ್ಸೆಲ್ ಮುಖ್ಯ ಮತ್ತು 8 ಮೆಗಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 4GB RAM + 128GB ಸ್ಟೋರೇಜ್, IP54 ರೇಟಿಂಗ್, 5000mAh ಬ್ಯಾಟರಿ ಮತ್ತು 10W ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಸಂಪೂರ್ಣ ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ಡಿಸ್ಪ್ಲೇ ವಿವರ
ಐಟೆಲ್ A80 ಸ್ಮಾರ್ಟ್‌ಫೋನ್ 6.67 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಐಪಿಎಸ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 720 x 1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಹೊಸ ಐಟೆಲ್ A80 ಮೊಬೈಲ್ ಯುನಿಸೊಕ್ T603 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 12 ನ್ಯಾನೋಮೀಟರ್ ಆರ್ಕಿಟೆಕ್ಚರ್‌ನಲ್ಲಿ ನಿರ್ಮಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಗೋ ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 4GB RAM ಮತ್ತು 128GB ಸ್ಟೋರೇಜ್ ಲಭ್ಯವಿದೆ.
ಈ ಸುದ್ದಿ ಓದಿದ್ದೀರಾ?: ಇಲ್ಲಿ ಕೇಳಿ..! ಇನ್ಮುಂದೆ ಮಕ್ಕಳು ಫೇಸ್ಬುಕ್, ವಾಟ್ಸಾಪ್ ಬಳಸಂಗಿಲ್ಲ! ಇದು ಮೋದಿ ಸರ್ಕಾರದ ಹೊಸ ನಿಯಮ
ಕ್ಯಾಮೆರಾ ಸೆಟಪ್
ಐಟೆಲ್ A80 ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ HDR ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಜೊತೆಗೆ ಸೆಕೆಂಡರಿ ಎಐ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ನೂತನ ಐಟೆಲ್ A80 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 10W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಐಟೆಲ್ A80 ಮೊಬೈಲ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಇದು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹಾಗೂ ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಬ್ಲೂಟೂತ್, ವೈ-ಫೈ, ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.
ಐಟೆಲ್ A80 ಫೋನಿನ ಬೆಲೆ
ಐಟೆಲ್ A80 ಸ್ಮಾರ್ಟ್‌ಫೋನ್ 4GB RAM + 128GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ 6,999 ರೂ. ಆಗಿದೆ. ಇದು ವರ್ಚುವಲ್ RAM ತಂತ್ರಜ್ಞಾನ ಹೊಂದಿದೆ. ಈ ಅಗ್ಗದ ಐಟೆಲ್ ಫೋನನ್ನು ಸ್ಯಾಂಡ್‌ಸ್ಟೋನ್ ಬ್ಲಾಕ್, ಗ್ಲೇಸಿಯರ್ ವೈಟ್ ಮತ್ತು ವೇವ್ ಬ್ಲೂ ಬಣ್ಣಗಳಲ್ಲಿ ಖರೀದಿಸಬಹುದು. ಕಂಪನಿಯು ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಸಹ ನೀಡುತ್ತದೆ. ನೀವು, ಇದನ್ನು ಫೋನ್ ಖರೀದಿಸಿದ 100 ದಿನಗಳಲ್ಲಿ ಉಚಿತವಾಗಿ ಪಡೆಯಬಹುದು.


Click it and Unblock the Notifications








