ಇಲ್ಲಿ ಕೇಳಿ..! ಇನ್ಮುಂದೆ ಮಕ್ಕಳು ಫೇಸ್‌ಬುಕ್, ವಾಟ್ಸಾಪ್ ಬಳಸಂಗಿಲ್ಲ! ಇದು ಮೋದಿ ಸರ್ಕಾರದ ಹೊಸ ನಿಯಮ
ಇಲ್ಲಿ ಕೇಳಿ..! ಇನ್ಮುಂದೆ ಅಪ್ರಾಪ್ತ ಮಕ್ಕಳು ಸೋಶಿಯಲ್ ಮೀಡಿಯಾ (Social Media) ಬಳಸುವಂತಿಲ್ಲ. ಇದು ಪ್ರಧಾನಿ ಮೋದಿ (PM Modi) ಸರ್ಕಾರದ ಹೊಸ ನಿಯಮ! ಹೌದು, ನಿಮ್ಮ ಪೋಷಕರ ಒಪ್ಪಿಗೆ ಇಲ್ಲದೇ ವಾಟ್ಸಾಪ್, ಫೇಸ್‌ಬುಕ್ ಅನ್ನು ಬಳಸುವಂತಿಲ್ಲ. ಕೇಂದ್ರ ಸರ್ಕಾರ ಬಹುನಿರೀಕ್ಷಿತ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ 2025 (Digital Personal Data Protection Rules 2025) ಕರಡನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅಪ್ರಾಪ್ತ ಮಕ್ಕಳು ಮತ್ತು ವಿಶೇಷಚೇತನರ ವೈಯಕ್ತಿಕ ಡೇಟಾದ ರಕ್ಷಣೆಗೆ ಒತ್ತು ನೀಡಲಾಗಿದೆ. ಈ ಮೂಲಕ ಮಕ್ಕಳಿಂದ ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣಗಳ ದುರ್ಬಳಕೆ ನಿಯಂತ್ರಿಸಲು ಮುಂದಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣಗಳ ದುರ್ಬಳಕೆ ನಿಯಂತ್ರಿಸಲು ಹೊಸ ಕಾನೂನು ಜಾರಿಗೊಳಿಸಲು ಸಜ್ಜಾಗಿದೆ. ಇದರ ಅಡಿಯಲ್ಲಿ, ಅಪ್ರಾಪ್ತ ಮಕ್ಕಳು ವಾಟ್ಸಾಪ್, ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಇನ್ನಿತರ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವ ಮೊದಲು ತಮ್ಮ ಪೋಷಕರ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ. ಸಂಸತ್ತು 14 ತಿಂಗಳ ಹಿಂದೆ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಆಕ್ಟ್ - 2023 ಅನುಮೋದಿಸಿತ್ತು. ಇದಾದ ಬಳಿಕ ಕರಡು ನಿಯಮಗಳನ್ನು ಸಾರ್ವಜನಿಕ ಸಮಾಲೋಚನೆಗಾಗಿ ಬಿಡುಗಡೆ ಮಾಡಲಾಗಿದೆ.

ಡ್ರಾಫ್ಟ್ ಪ್ರಕಾರ, ಅಪ್ರಾಪ್ತ ಮಕ್ಕಳ ಡೇಟಾದ ಯಾವುದೇ ಬಳಕೆಗೆ ಪೋಷಕರ ಒಪ್ಪಿಗೆ ಕಡ್ಡಾಯವಾಗಿರುತ್ತದೆ. ಅಂದರೆ, ಪೋಷಕರ ಒಪ್ಪಿಗೆಯಿಲ್ಲದೆ ಯಾವುದೇ ಡೇಟಾ ವಿಶ್ವಾಸಾರ್ಹರು, ಮಕ್ಕಳ ಡೇಟಾವನ್ನು ಬಳಸಲು ಸಾಧ್ಯವಿಲ್ಲ. ಈ ಕರಡು ಪ್ರಕಾರ, ಮಕ್ಕಳು ಸೊಶಿಯಲ್ ಮೀಡಿಯಾ ಖಾತೆ ತೆರೆಯಲು ಪೋಷಕರ ಒಪ್ಪಿಗೆ ಪಡೆಯುವುದು ಅಗತ್ಯವಾಗಿದೆ. ಈ ಕರಡುಗಳು MyGov.in ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಡಿಜಿಟಲ್ ವೈಯಕ್ತಿಕ ಡೇಟಾದ ರಕ್ಷಣೆಗಾಗಿ ಕಾನೂನು ಚೌಕಟ್ಟನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ.
ಫೆಬ್ರವರಿ 18ರ ಬಳಿಕ ಅಂತಿಮ ರೂಪ
ಈ ಕರಡು ನಿಯಮಗಳಿಗೆ ಫೆಬ್ರವರಿ 18ರ ಬಳಿಕ ಅಂತಿಮ ರೂಪ ಕೊಡಲಿದ್ದೇವೆ ಎಂದು ಡ್ರಾಫ್ಟ್ ಕಮಿಟಿ ಹೇಳಿದೆ. ಈ ನಿಯಮಗಳು ಡಿಜಿಟಲ್ ಡೇಟಾ ಪ್ರೊಟೆಕ್ಷನ್ ಆಕ್ಟ್, 2023ರ ಅಡಿಯಲ್ಲಿ ವ್ಯಕ್ತಿಗಳ ಒಪ್ಪಿಗೆ, ಡೇಟಾ ಸಂಸ್ಕರಣಾ ಸಂಸ್ಥೆಗಳು ಮತ್ತು ಪ್ರಾಧಿಕಾರಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ನಿಬಂಧನೆಗಳನ್ನು ರೂಪಿಸುತ್ತವೆ. ನಿಯಮಗಳು ವ್ಯಕ್ತಿಗಳಿಂದ ಸ್ಪಷ್ಟ ಒಪ್ಪಿಗೆಯನ್ನು ಪಡೆಯಲು ಯಾಂತ್ರಿಕ ವ್ಯವಸ್ಥೆಗೆ ಕರೆ ನೀಡುತ್ತವೆ.
ಕರಡು ನಿಯಮಗಳ ಪ್ರಮುಖ ಅಂಶಗಳು
- ಬಳಕೆದಾರರು ತಮ್ಮ ಡೇಟಾದ ಮೇಲೆ ಹೆಚ್ಚಿನ ನಿಯಂತ್ರಣ ಪಡೆಯಬಹುದು
- ಗ್ರಾಹಕರು ತಮ್ಮ ಡೇಟಾ ಡಿಲಿಟ್ ಮಾಡುವಂತೆ ಕೇಳಲು ಅವಕಾಶವಿದೆ
- ಸಂಸ್ಥೆಗಳು ತನ್ನ ವೈಯಕ್ತಿಕ ಡೇಟಾದ ಬಗ್ಗೆ ಹೆಚ್ಚು ಪಾರದರ್ಶಕವಾಗಿರಬೇಕು
- ಗ್ರಾಹಕರು ತಮ್ಮ ಡೇಟಾ ಏಕೆ ಸಂಗ್ರಹಿಸಲಾಗುತ್ತಿದೆ ಎಂದು ಕೇಳುವ ಹಕ್ಕನ್ನು ಹೊಂದಿರುತ್ತಾರೆ
- ಡೇಟಾ ಉಲ್ಲಂಘನೆಗಾಗಿ 250 ಕೋಟಿ ರೂ. ವರೆಗೆ ದಂಡ ವಿಧಿಸಬಹುದಾಗಿದೆ.
250 ಕೋಟಿ ರೂ. ದಂಡ ಯಾರಿಗೆ?
ಫೆಬ್ರವರಿ 18ರ (2025) ಬಳಿಕ ಈ ಕರಡು ನಿಯಮಗಳನ್ನು ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ. ಈ ಕರಡು ನಿಯಮಗಳು ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಆಕ್ಟ್ 2023ರ ಅಡಿಯಲ್ಲಿ ಮಂಜೂರಾದ ಪೆನಾಲ್ಟಿಗಳನ್ನು ಉಲ್ಲೇಖಿಸುವುದಿಲ್ಲ. ಡೇಟಾ ಘಟಕಗಳು ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸುವ ಉದ್ದೇಶಗಳು ಮತ್ತು ವಿಧಾನಗಳನ್ನು ನಿರ್ಧರಿಸಲು ಜವಾಬ್ದಾರರಾಗಿವೆ. ಈ ಕಾಯ್ದೆಯು, ಈ ಡೇಟಾ ಘಟಕಗಳಿಗೆ 250 ಕೋಟಿ ರೂ.ಗಳ ವರೆಗೆ ದಂಡ ವಿಧಿಸುವ ಅವಕಾಶವನ್ನು ಹೊಂದಿದೆ.
18 ವರ್ಷದೊಳಗಿನ ಮಕ್ಕಳಿಗೆ ನಿರ್ಬಂಧ!
ಒಟ್ಟಾರೆ, ಕರಡು ಪ್ರತಿಯ ಪ್ರಕಾರ ಇನ್ಮುಂದೆ ಡೇಟಾ ವಿಶ್ವಾಸಾರ್ಹರು, ಮಗುವಿನ ಪೋಷಕರು ಮತ್ತು ವಯಸ್ಕರು ಭಾರತದಲ್ಲಿ ಜಾರಿಯಲ್ಲಿರುವ ಕಾನೂನಿಗೆ ಬದ್ಧರಾಗಿದ್ದಾರೆ ಎಂದು ಪರಿಶೀಲಿಸಬೇಕು. ಮಕ್ಕಳ ಡೇಟಾವನ್ನು ಒಪ್ಪಿಗೆ ನೀಡಿದ ಅವಧಿಗೆ ಮಾತ್ರ ಇರಿಸಿಕೊಳ್ಳಲು ಸಾಧ್ಯ. ಬಳಿಕ ಅದನ್ನು ಡಿಲೀಟ್ ಮಾಡಬೇಕಾಗುತ್ತದೆ. 18 ವರ್ಷದೊಳಗಿನ ಮಕ್ಕಳು ಸೊಶಿಯಲ್ ಮೀಡಿಯಾ ಬಳಕೆಗೆ ನಿರ್ಬಂಧ ಹೇರಲು ಈ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತರಲು ಹೊರಟಿದೆ. ಇದಕ್ಕಾಗಿ ದೇಶದ ಜನರ ಅಭಿಪ್ರಾಯವನ್ನು ಸಂಗ್ರಹಿಸಲಿದೆ


Click it and Unblock the Notifications








