Home
ಮೊಬೈಲ್

ಐಟೆಲ್‌ P55+ ಫಸ್ಟ್‌ ಲುಕ್‌: ಬಜೆಟ್‌ ಬೆಲೆಯಲ್ಲಿ ಸೂಪರ್‌ ಫಾಸ್ಟ್‌ ಚಾರ್ಜಿಂಗ್‌ ಫೋನ್‌!

ಐಟೆಲ್‌ ಸಂಸ್ಥೆಯು ತನ್ನ ಐಟೆಲ್‌ P55 ಪವರ್‌ ಸರಣಿಯಲ್ಲಿ ನೂತನವಾಗಿ ಮಾಡಿರುವ ಐಟೆಲ್‌ P55+ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಗ್ರಾಹಕರ ಕುತೂಹಲ ಹೆಚ್ಚಿಸಿದೆ. ಗ್ರಾಹಕ ಸ್ನೇಹಿ ಬೆಲೆಯನ್ನು ಒಳಗೊಂಡಿರುವ ಐಟೆಲ್‌ P55+ ಫೋನ್‌ ಕೆಲವೊಂದು ಸ್ಪರ್ಧಾತ್ಮಕ ಫೀಚರ್ಸ್‌ಗಳ ಮೂಲಕ ಗ್ರಾಹಕರನ್ನು ತಿರುಗಿ ನೋಡುವಂತೆ ಮಾಡಿದೆ.

ಐಟೆಲ್‌ ಕಂಪನಿಯ ನೂತನ ಐಟೆಲ್‌ P55+ ಸ್ಮಾರ್ಟ್‌ಫೋನ್ ಕೆಲವು ಅಪ್‌ಡೇಟ್‌ ಆಯ್ಕೆಗಳನ್ನು ಒಳಗೊಂಡಿದೆ. ಮುಖ್ಯವಾಗಿ ಸೂಪರ್‌ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ, ಲೆದರ್‌ ಮಾದರಿಯ ಬ್ಯಾಕ್‌ ಪ್ಯಾನೆಲ್‌ ಲುಕ್‌, ಡಿಸ್‌ಪ್ಲೇ ವಿನ್ಯಾಸ ಹಾಗೂ ರಚನೆ ಜೊತೆಗೆ ಅಧಿಕ RAM ಆಯ್ಕೆ ಹಾಗೂ ಸ್ಟೋರೇಜ್‌ ಸೌಲಭ್ಯ ಸೇರಿದಂತೆ ಇತರೆ ಕೆಲವು ಅಂಶಗಳು ಪ್ರಸ್ತುತ ಅಗತ್ಯತೆಗಳನ್ನು ಪೂರೈಸುವಂತಿವೆ. ಹಾಗಾದರೆ ಐಟೆಲ್‌ P55+ ಫೋನಿನ ಫೀಚರ್ಸ್‌ ಹೇಗಿವೆ? ಈ ಮೊಬೈಲ್‌ನ ಕಾರ್ಯವೈಖರಿ ಹೇಗಿದೆ? ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಐಟೆಲ್‌ P55+ ಫಸ್ಟ್‌ ಲುಕ್‌: ಬಜೆಟ್‌ ಬೆಲೆಯಲ್ಲಿ ಫಾಸ್ಟ್‌ ಚಾರ್ಜಿಂಗ್‌ ಫೋನ್‌!

ಐಟೆಲ್‌ P55+ ಫೋನ್‌ 6.56 ಇಂಚಿನ IPS LCD ಮಾದರಿಯ ಡಿಸ್‌ಪ್ಲೇ ಅನ್ನು ಹೊಂದಿದ್ದು ಅದು HD+ 720 x 1612 ಪಿಕ್ಸೆಲ್‌ಗಳು ರೆಸಲ್ಯೂಶನ್ ಪಡೆದಿದೆ. ಹಾಗೆಯೇ ಇದು 90Hz ರಿಫ್ರೆಶ್ ರೇಟ್‌ ಪಡೆದಿದ್ದು, ಸುಗಮವಾದ ಅನಿಮೇಷನ್‌ಗಳು ಮತ್ತು ಹೆಚ್ಚು ಸ್ಪಂದಿಸುವ ಸ್ಪರ್ಶ ಅನುಭವವನ್ನು ಖಾತ್ರಿಪಡಿಸುತ್ತದೆ. ಇದರೊಂದಿಗೆ ಆಪಲ್‌ನ ಡೈನಾಮಿಕ್ ಐಲ್ಯಾಂಡ್‌ನಂತೆಯೇ ಕಾರ್ಯ ನಿರ್ವಹಿಸುವ ನೋಟಿಫಿಕೇಶನ್‌ ವೈಶಿಷ್ಟ್ಯವಾದ ಡೈನಾಮಿಕ್ ಬಾರ್‌ ಸಪೋರ್ಟ್‌ ಪ್ಲಸ್‌ ಪಾಯಿಂಟ್‌ ಆಗಿ ಕಾಣಿಸುತ್ತದೆ.

ಐಟೆಲ್‌ P55+ ಫೋನ್‌ ಈ ಸ್ಮಾರ್ಟ್‌ಫೋನ್ ಯುನಿಸಾಕ್ T606 ಚಿಪ್‌ಸೆಟ್‌ ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ 16GB RAM + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದ್ದು, ಇತ್ತೀಚಿನ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಜೊತೆಗೆ ಕೆಲವ ಮಾಡಲಿದೆ. ಇದರ ಜೊತೆಗೆ ಮೈಕ್ರೊ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ನೀಡಲಾಗಿದೆ. ಆದರೆ ಸ್ನ್ಯಾಪ್‌ಡ್ರಾಗನ್‌ ಅಥವಾ ಮೀಡಿಯಾ ಟೆಕ್‌ ಪ್ರೊಸೆಸರ್‌ ಸೌಲಭ್ಯ ನೀಡಿದ್ದರೆ, ಫೋನಿಗೆ ಮತ್ತಷ್ಟು ಪವರ್‌ ನೀಡಿದಂತೆ ಆಗುತ್ತಿತ್ತು ಎಂದು ಅನಿಸುತ್ತದೆ.

ಹಾಗೆಯೇ ಈ ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ AI ಸಾಮರ್ಥ್ಯದಲ್ಲಿ ಇದೆ. ಇದು ತನ್ನ ವರ್ಗದಲ್ಲೇ ಉತ್ತಮ ಸೌಲಭ್ಯ ಎನಿಸದ್ದು, ಸೂಪರ್‌ ನೈಟ್‌ ಮೋಡ್‌, ಅಲ್ಟ್ರಾ ಹೆಚ್‌ಡಿ, ಎಆರ್‌ ಶೂಟ್‌, ಟೈಮ್‌ ಲ್ಯಾಪ್ಸ್‌ ಹಾಗೂ ಶಾರ್ಟ್‌ ವಿಡಿಯೋ ಗಳಂತಹ ಆಯ್ಕೆ ಗಳನ್ನು ಪಡೆದುಕೊಂಡಿದೆ.

ಅದೇ ರೀತಿ ಇದರ ಸೆಕೆಂಡರಿ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ರಚನೆ ಪಡೆದಿದ್ದು, ಮುಂಭಾಗದ ಸೆಲ್ಫಿ ಕ್ಯಾಮೆರಾವು, ಹೆಚ್‌ಆರ್‌ಡಿ ಹಾಗೂ ಪೋರ್ಟ್ರೇಟ್‌ ನಂತಹ ಆಯ್ಕೆಗಳನ್ನು ಇದು ಫೋನಿನ ಮತ್ತೊಂದು ಹೈಲೈಟ್ಸ್‌ಗಳಲ್ಲಿ ಒಂದಾಗಿದೆ.

ಇನ್ನು ಈ ಫೋನ್‌ ಟಾಪ್‌ ಹೈಲೈಟ್‌ ಅಂಶಗಳಲ್ಲಿ ಬ್ಯಾಟರಿ ಸಹ ಸೇರಿದ್ದು, ಈ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ 45W ಬಲದ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಪಡೆದುಕೊಂಡಿದ್ದು, ಸುಮಾರು ಹತ್ತು ಸಾವಿರದೊಳಗಿನ ಫೋನ್‌ಗಳಲ್ಲಿ ಇದು ಹೈಲೈಟ್‌ ಎನಿಸುತ್ತದೆ. ಈ ಮೊಬೈಲ್‌ ತನ್ನ ವಿಭಾಗದಲ್ಲಿ ಸ್ಪರ್ಧಾತ್ಮಕ ಬ್ಯಾಟರಿ ಸೌಲಭ್ಯ ಪಡೆದಿದೆ ಎಂದು ಹೇಳಬಹುದು.

ಕೊನೆಯ ಮಾತು
ಮಾರುಕಟ್ಟೆಗೆ ನೂತನವಾಗಿ ಲಗ್ಗೆ ಇಟ್ಟಿರುವ ಐಟೆಲ್‌ P55+ ಮೊಬೈಲ್‌ ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಆಗಿ ಗುರುತಿಸಿಕೊಂಡಿದೆ ಎಂದು ಹೇಳಬಹುದು. ಈ ಫೋನಿನ 45W ಫಾಸ್ಟ್‌ ಚಾರ್ಜಿಂಗ್‌, ಎಐ ಕ್ಯಾಮೆರಾ, ಲೆದರ್‌ ಟಚ್‌ ಬ್ಯಾಕ್‌ ಪ್ಯಾನೆಲ್‌ ವಿನ್ಯಾಸಗಳಂತಹ ಫೀಚರ್ಸ್‌ ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಿವೆ. ಅದಾಗ್ಯೂ, ಪ್ರೊಸೆಸರ್‌ ಸೌಲಭ್ಯದಲ್ಲಿ ಸ್ನ್ಯಾಪ್‌ಡ್ರಾಗನ್‌ ಚಿಪ್‌ಸೆಟ್‌ ಒದಗಿಸಿದ್ದರೆ, ಇನ್ನಷ್ಟು ಪ್ಲಸ್‌ ಪಾಯಿಂಟ್‌ ಆಗುತ್ತಿತ್ತು. ಉಳಿದಂತೆ ಅಗ್ಗದ ದರದಕ್ಕೆ ಇದು ಉತ್ತಮ ಫೋನ್‌.

ಬೆಲೆ ಮಾಹಿತಿ
ಐಟೆಲ್‌ P55+ ಮೊಬೈಲ್‌ 8*+8GB RAM + 256GB ವೇರಿಯಂಟ್‌ ಬೆಲೆಯು 9,499ರೂ. ಆಗಿದೆ. ಆದರೆ ಪರಿಚಯಾತ್ಮಕ ಕೊಡುಗೆಯಾಗಿ ಬ್ಯಾಂಕ್ ಆಫರ್‌ನೊಂದಿಗೆ 500ರೂ. ರಿಯಾಯಿತಿ ಪಡೆದುಕೊಂಡಿದೆ.

Best Mobiles in India

English summary
Itel P55+ Review: A Super Fast Charging Smartphone at a affordable Price. all other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+