ಐಟೆಲ್ P55T ವಿಮರ್ಶೆ: ಬಿಗ್ ಬ್ಯಾಟರಿ ಜೊತೆಗೆ ಪ್ರೀಮಿಯಂ ಲುಕ್ ಫೋನ್!
ಐಟೆಲ್ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಐಟೆಲ್ P55 ಪವರ್ ಸರಣಿಯ ಸ್ಮಾರ್ಟ್‌ಫೋನ್ ಗಳು ಅಗ್ಗದ ದರದಲ್ಲಿ ಗ್ರಾಹಕರ ಗಮನ ಸೆಳೆದಿವೆ. ಸಂಸ್ಥೆಯ ಮೂರು ಫೋನ್‌ಗಳ ಪೈಕಿ ಐಟೆಲ್ P55T ಸ್ಮಾರ್ಟ್‌ಫೋನ್ ಡಿಸೈನ್ ಹಾಗೂ ಫೀಚರ್ಸ್‌ನಿಂದ ಆಕರ್ಷಕ ಎನಿಸಿದೆ. ಅದಾಗ್ಯೂ ಈ ಫೋನಿನ ಕಾರ್ಯ ವೈಖರಿ ಹೇಗಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಐಟೆಲ್ ಕಂಪನಿಯ ನೂತನ ಐಟೆಲ್ P55T ಪ್ರೀಮಿಯಂ ಲುಕ್ ಪಡೆದುಕೊಂಡಿದೆ ಎಂದು ಹೇಳಬಹುದಾಗಿದೆ. ಮುಖ್ಯವಾಗಿ ಬಿಗ್ ಬ್ಯಾಟರಿ ಸೌಲಭ್ಯ, ಆಸ್ಟ್ರಲ್ ಬ್ಲಾಕ್, ಆಸ್ಟ್ರಲ್ ಗೋಲ್ಡ್ ಮತ್ತು ಆಸ್ಟ್ರಲ್ ಪರ್ಪಲ್ ಬಣ್ಣದ ಆಯ್ಕೆ, ಡಿಸ್‌ಪ್ಲೇ ವಿನ್ಯಾಸ ಹಾಗೂ ರಚನೆ ಅಲ್ಲದೇ ಅಧಿಕ RAM ಆಯ್ಕೆ ಹಾಗೂ ಸ್ಟೋರೇಜ್ ಸೌಲಭ್ಯ ಸೇರಿದಂತೆ ಇತರೆ ಕೆಲವು ಫೀಚರ್ಸ್‌ಗಳು ಮೊಬೈಲ್ ಪ್ರಿಯರ ಕಣ್ಮನ ಸೆಳೆಯುಂತಿ ಇವೆ. ಹಾಗಾದರೆ ಐಟೆಲ್ P55T ಫೋನಿನ ಫೀಚರ್ಸ್ ಹೇಗಿವೆ? ಈ ಮೊಬೈಲ್‌ನ ಕಾರ್ಯವೈಖರಿ ಹೇಗಿದೆ? ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಐಟೆಲ್ P55T ಕಾರ್ಯ ವೈಖರಿಯ ಮಾಹಿತಿ
ಐಟೆಲ್ P55T ಫೋನ್ 720 x 1612 ಪಿಕ್ಸೆಲ್‌ಗಳ ರೆಸಲ್ಯೂಶನ್ ಸೌಲಭ್ಯ ಪಡೆದಿರುವ 6.6 ಇಂಚಿನ HD+ IPS ಡಿಸ್‌ಪ್ಲೇಯನ್ನು ಒಳಗೊಂಡಿದೆ. ಅಲ್ಲದೇ ಈ ಫೋನ್ 90Hz ರಿಫ್ರೆಶ್ ರೇಟ್ ಅನ್ನು ಪಡೆದುಕೊಂಡಿದೆ. ಇದರ ಪಂಚ್-ಹೋಲ್ ವಿನ್ಯಾಸವು ಫೋನಿನ ಅಂದ ಹೆಚ್ಚಿಸುವಂತಿದೆ. ಈ ಡಿಸ್‌ಪ್ಲೇಯು ರೋಮಾಂಚಕ ಮತ್ತು ನಿಖರವಾದ ಕಲರ್ ಅನ್ನು ಒದಗಿಸುತ್ತದೆ. ನೇರ ಸೂರ್ಯನ ಬೆಳಕಿನಲ್ಲಿಯೂ ಸಹ ಓದುವಿಕೆಯನ್ನು ನಿರ್ವಹಿಸುತ್ತದೆ.
ಐಟೆಲ್ P55T ಫೋನ್ ಈ ಸ್ಮಾರ್ಟ್‌ಫೋನ್ Unisoc T606 ಆಕ್ಟಾ-ಕೋರ್ ಚಿಪ್‌ಸೆಟ್ ಪ್ರೊಸೆಸರ್‌ನೊಂದಿಗೆ Mali-G57 GPU ಸಪೋರ್ಟ್ ಕೂಡಾ ಪಡೆದುಕೊಂಡಿದೆ. ಆಂಡ್ರಾಯ್ಡ್ 14 ಗೋ ಓಎಸ್ ಸಪೋರ್ಟ್‌ನಲ್ಲಿ ಕೆಲಸ ಮಾಡಲಿದ್ದು, ಎಂಟ್ರಿ ಲೆವೆಲ್ ಫೋನ್‌ಗಳ ಮಾದರಿ ಎನಿಸಿದರೂ ಕಾರ್ಯದಲ್ಲಿ ಚುರುಕುತನ ಕಾಣಬಹುದಾಗಿದೆ. ಸಾಮಾಜಿಕ ಮಾಧ್ಯಮ ಬಳಕೆ, ಸ್ಟ್ರೀಮಿಂಗ್ ಮತ್ತು ಇಮೇಲ್ ನಿರ್ವಹಣೆ ಸೇರಿದಂತೆ ಕೆಲವು ಗೇಮ್‌ಗಳು ಅಲ್ಲದೇ ದೈನಂದಿನ ಕಾರ್ಯಗಳು ತಡೆರಹಿತವಾಗಿವೆ.
ಅದೇ ರೀತಿ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ AI ಸಾಮರ್ಥ್ಯದಲ್ಲಿ ಇದೆ. ಇದು ತನ್ನ ವರ್ಗದಲ್ಲೇ ಬೆಟರ್ ಕ್ಯಾಮೆರಾ ಸೌಲಭ್ಯ ಎನಿಸದ್ದು, ಹಿಂಭಾಗದಲ್ಲಿರುವ ರಿಂಗ್ ಎಲ್ಇಡಿ ಲೈಟ್ ಸ್ಮಾರ್ಟ್ ನೋಟಿಫಿಕೇಶನ್ ಸಿಸ್ಟಮ್ ಆಗಿ ಕೆಲಸ ನಿರ್ವಹಿಸುತ್ತದೆ, ಕಡಿಮೆ-ಬೆಳಕಿನ ಛಾಯಾಗ್ರಹಣವನ್ನು ಹೆಚ್ಚಿಸುತ್ತದೆ ಹಾಗೂ ಟಾರ್ಚ್ ಆಗಿ ಕಾರ್ಯನಿರ್ವಹಿಸುತ್ತದೆ.
ಅದೇ ರೀತಿ ಇದರ ಸೆಕೆಂಡರಿ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ರಚನೆ ಪಡೆದಿದ್ದು, ಮುಂಭಾಗವು ಪಂಚ್-ಹೋಲ್ ಕಟೌಟ್‌ನಲ್ಲಿ 8 ಮೆಗಾ ಪಿಕ್ಸಲ್ ಕ್ಯಾಮೆರಾವನ್ನು ಹೊಂದಿದೆ. ಇದು ಹೆಚ್‌ಆರ್‌ಡಿ ಹಾಗೂ ಪೋರ್ಟ್ರೇಟ್ ನಂತಹ ಆಯ್ಕೆಗಳನ್ನು ಇದು ಫೋನಿನ ಮತ್ತೊಂದು ಹೈಲೈಟ್ಸ್‌ಗಳಲ್ಲಿ ಒಂದಾಗಿದೆ.
ಇನ್ನು ಈ ಫೋನುನ ಪ್ರಮುಖ ಹೈಲೈಟ್ ಅಂದ್ರೆ, ಇದು 6000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ 18W ಬಲದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದ್ದು, ಸುಮಾರು ಹತ್ತು ಸಾವಿರದೊಳಗಿನ ಫೋನ್‌ಗಳಲ್ಲಿ ಇದು ಹೈಲೈಟ್ ಎನಿಸುತ್ತದೆ. ಈ ಮೊಬೈಲ್ ತನ್ನ ವಿಭಾಗದಲ್ಲಿ ಸ್ಪರ್ಧಾತ್ಮಕ ಬ್ಯಾಟರಿ ಸೌಲಭ್ಯ ಪಡೆದಿದೆ ಎಂದು ಹೇಳಬಹುದು.
ಕೊನೆಯ ಮಾತು
ಐಟೆಲ್ P55T ಮೊಬೈಲ್ ಅಗ್ಗದ ಪ್ರೈಸ್‌ಟ್ಯಾಗ್ ಪಡೆದಿದ್ದರೂ, ಇದು ಪ್ರೀಮಿಯಂ ಲುಕ್‌ನಲ್ಲಿ ಕಾಣಿಸಿಕೊಂಡಿದೆ ಎನ್ನಬಹುದಾಗಿದೆ. 6000 mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಈ ಫೋನಿನ ಹೈಲೈಟ್ ಅಂಶವಾಗಿ ಕಾಣಿಸಿಕೊಂಡಿದೆ. ಈ ಫೋನ್ ಸ್ನ್ಯಾಪ್‌ಡ್ರಾಗನ್ ಚಿಪ್‌ಸೆಟ್ ಒದಗಿಸಿದ್ದರೆ ಹಾಗೂ ಕ್ಯಾಮೆರಾ ರಚನೆ ಬಹಳ ದೊಡ್ಡದಾಗಿ ಕಾಣಿಸುತ್ತದೆ ಎನ್ನವ ಅಂಶಗಳು ಹೊರತು ಪಡಿಸಿದರೆ, ಅಗ್ಗದ ಬೆಲೆಗೆ ಇದು ಅತ್ಯುತ್ತಮ ಫೋನ್ ಎನ್ನಬಹುದು.


Click it and Unblock the Notifications








