Home
ಮೊಬೈಲ್

ಕೇವಲ 1799 ರೂ.ಗೆ Jio Bharat J1 4G ಫೋನ್‌ ಲಾಂಚ್: 123 ರೂ.ಗೆ ಅನ್​ಲಿಮಿಟೆಡ್ ಕರೆ, 14GB ಡೇಟಾ ಫ್ರೀ!

Jio Bharat J1 4G Launch: ರಿಲಯನ್ಸ್ ಜಿಯೋ ಗ್ರಾಹಕರಿಗೆ 2 ಸಾವಿರ ರೂ.ಗಿಂತ ಕಡಿಮೆ ಬೆಲೆಯಲ್ಲಿ ಮತ್ತೊಂದು ಕೈಗೆಟುಕುವ ಫೀಚರ್ ಫೋನ್ ಬಿಡುಗಡೆ ಮಾಡಿದೆ. ಇದು 4G ಕೀಪ್ಯಾಡ್ ಫೋನ್ ಆಗಿದ್ದು, ಹೊಸ ವಿನ್ಯಾಸ ಮತ್ತು ವೈಶಿಷ್ಟ್ಯಗಳೊಂದಿಗೆ ಜನರನ್ನು ತಲುಪಲಿದೆ. ಇದರಲ್ಲಿ, ಜಿಯೋ ಅಪ್ಲಿಕೇಶನ್‌ನ ಎಲ್ಲಾ ಸೇವೆಗಳು ಲಭ್ಯವಿದೆ. ಈ ಫೀಚರ್ ಫೋನ್‌ನ ಬೆಲೆ ನಿಸ್ಸಂದೇಹವಾಗಿ ಕಡಿಮೆ. ಆದರೆ, ಈ ಫೀಚರ್ ಫೋನ್‌ನಲ್ಲಿ ನೀವು ಹಲವು ವಿಶೇಷ ಫೀಚರ್ಸ್‌ಗಳನ್ನು ಪಡೆಯಬಹುದು. ರಿಲಯನ್ಸ್ ಜಿಯೋ ಕಂಪನಿಯ ಈ ಹೊಸ ಫೀಚರ್ ಫೋನಿನ ಬೆಲೆ ಎಷ್ಟು? ಯಾವೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ? ಎನ್ನುವುದನ್ನು ತಿಳಿಯೋಣ ಬನ್ನಿ.

ಹೌದು, ರಿಲಯನ್ಸ್ ಜಿಯೋ ಮತ್ತೊಂದು ಅಗ್ಗದ ಫೀಚರ್ ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಫೀಚರ್ ಫೋನನ್ನು Jio Bharat J1 4G ಹೆಸರಿನೊಂದಿಗೆ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ ಅಂದರೆ 2023ರಲ್ಲಿ, ಕಂಪನಿಯು ಜಿಯೋ ಭಾರತ್ ಸರಣಿಯನ್ನು ಪ್ರಾರಂಭಿಸಿತು. ಅಂದಿನಿಂದ ಇಲ್ಲಿಯವರೆಗೆ ಈ ಸರಣಿಯಲ್ಲಿ ಭಾರತ್ ವಿ2, ಭಾರತ್ ವಿ2 ಕಾರ್ಬನ್ ಮತ್ತು ಭಾರತ್ ಬಿ1 ಫೋನ್‌ಗಳನ್ನು ಲಾಂಚ್ ಮಾಡಿದೆ. ಇದೀಗ Jio Bharat J1 4G ಎಂಟ್ರಿ ಕೊಟ್ಟಿದೆ.

ಜಸ್ಟ್ 1799 ರೂ.ಗೆ Jio Bharat J1 4G ಫೋನ್‌ ಲಾಂಚ್: ರೂ.123ಗೆ 14GB ಡೇಟಾ ಫ್ರೀ

Jio Bharat J1 4G ಫೊನಿನ ಬೆಲೆ ಎಷ್ಟು?

ಈ ಫೋನ್‌ನ ಬೆಲೆ ಬಗ್ಗೆ ಹೇಳುವುದಾದರೆ, ಈ ಹಿಂದೆ ಬಿಡುಗಡೆ ಮಾಡಿದ ಫೋನ್‌ಗಳಿಗಿಂತ ಕೊಂಚ ಹೆಚ್ಚಿನ ಬೆಲೆಗೆ ಇದನ್ನು ಬಿಡುಗಡೆ ಮಾಡಲಾಗಿದೆ. Jio Bharat J1 4G ಬೆಲೆಯನ್ನು 1799 ರೂ.ಗೆ ನಿಗದಿಯಾಗಿದೆ. ಇದು ಕಪ್ಪು ಅಥವಾ ಬೂದು ಬಣ್ಣದ ಆಯ್ಕೆಯಲ್ಲಿ ಲಭ್ಯವಿರುತ್ತದೆ. ನೀವು ಈ ಫೋನ್ ಅನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಖರೀದಿಸಬಹುದು.

UPI, JioPay, JioCinema ಲಭ್ಯ

ಮೊದಲೇ ಹೇಳಿದಂತೆ, Jio Bharat J1 4G ಫೋನ್ 4G ಕೀಪ್ಯಾಡ್ ಆಗಿದ್ದು, ನೂತನ ವಿನ್ಯಾಸ ಮತ್ತು ಫೀಚರ್ಸ್‌ಗಳೊಂದಿಗೆ ಗ್ರಾಹಕರ ಕೈಗೆ ಸೇರಲಿದೆ. UPI ವಹಿವಾಟುಗಳಿಗಾಗಿ JioPay, ಕಂಟೆಂಟ್ ಸ್ಟ್ರೀಮಿಂಗ್‌ಗಾಗಿ JioCinema ಆಯ್ಕೆಯೂ ಇದೆ. ಇದಲ್ಲದೇ, ಜಿಯೋ ಅಪ್ಲಿಕೇಶನ್‌ನ ಎಲ್ಲಾ ಸೇವೆಗಳು ಈ ಫೊನಿನಲ್ಲಿ ಲಭ್ಯವಿದೆ. ಜಿಯೋದ ಈ ಫೋನ್ ಅತ್ಯಂತ ಕೈಗೆಟುಕುವ ಬೆಲೆ ಲಭ್ಯವಾಗಲಿದೆ. ಇದನ್ನು ಜನರು ಸುಲಭವಾಗಿ ಖರೀದಿಸಬಹುದು. ಫೋನಿನ ಔಟ್ ಡಿಸ್ಪ್ಲೇ ಕೂಡ ಉತ್ತಮವಾಗಿ ಕಾಣುತ್ತದೆ.

ಈ ಸುದ್ದಿ ಓದಿದ್ಧೀರಾ?: ವಾವ್! 108MP ಕ್ಯಾಮೆರಾ.. 5,000mAh ಬ್ಯಾಟರಿ.. ಶೀಘ್ರ ಹೊಸ Infinix ಫೋನ್ ಲಾಂಚ್: ಯಾವುದು?

Jio Bharat J1 4G ಫೊನಿನ ವಿಶೇಷತೆಗಳು

Jio Bharat J1 4G ಹೊಸ ವಿನ್ಯಾಸದೊಂದಿಗೆ ಬರುತ್ತದೆ. ಈ ಫೋನ್ 2.8 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 2,500mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. 4G ಫೀಚರ್ ಫೋನ್‌ಗಳು ಕಡಿಮೆ ಬಜೆಟ್ ಹೊಂದಿರುವ ಜನರಿಗೆ ಉತ್ತಮ ಫೋನ್ ಆಗಿರಬಹುದು. ಏಕೆಂದರೆ ಜಿಯೋ ಟಿವಿಯ ಸಹಾಯದಿಂದ ಜನರು ಆರಾಮವಾಗಿ ಟಿವಿ ವೀಕ್ಷಿಸಬಹುದು. ಇದು ಲಾಕ್ ಮಾಡಲಾದ ಸಾಧನವಾಗಿದೆ. ಅಂದರೆ ಇದರಲ್ಲಿ ಜಿಯೋ ಸಿಮ್ ಮಾತ್ರ ಬಳಸಬಹುದಾಗಿದೆ.

ಜಿಯೋ ಭಾರತ್ ಯೋಜನೆ

Jio Bharat J1 4G ಫೋನ್ ಕಂಪನಿಯ ಅತ್ಯಂತ ಕೈಗೆಟುಕುವ ಮೊಬೈಲ್‌ಗಳಲ್ಲಿ ಒಂದಾಗಿದೆ. ಬಳಕೆದಾರರ ಅನುಕೂಲಕ್ಕಾಗಿ, ಈ ಮೊಬೈಲ್‌ನೊಂದಿಗೆ ನೀವು ಕೇವಲ 123 ರೂ.ಗಳ ಅಗ್ಗದ ಯೋಜನೆಯನ್ನು ಸಹ ಪಡೆಯಬಹುದು. ಇದು 4G ರೀಚಾರ್ಜ್ ಯೋಜನೆಯಾಗಿದ್ದು, 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ . ಈ ಜಿಯೋ ಭಾರತ್ ಯೋಜನೆಯಲ್ಲಿ, ಯಾವುದೇ ದೈನಂದಿನ ಮಿತಿಯಿಲ್ಲದೆ ಬಳಸಬಹುದಾದ 14GB ಡೇಟಾ ಲಭ್ಯವಿದೆ. ಇದೇ ಸಮಯದಲ್ಲಿ, ಈ ರೀಚಾರ್ಜ್ ಇಡೀ ತಿಂಗಳಿಗೆ ಅನಿಯಮಿತ ಕರೆ ಸೌಲಭ್ಯವನ್ನು ನೀಡುತ್ತದೆ.

Best Mobiles in India

English summary
Jio Bharat J1 4G launched in India with at Rs 1799: check specs, offer and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+