ಜಿಯೋ ಹೈಎಂಡ್ ಸ್ಮಾರ್ಟ್‌ಫೋನ್‌ LYF ವಿಂಡ್ 7ಎಸ್" ಬಿಡುಗಡೆ!! ಬೆಲೆ ಎಷ್ಟು?

|

ರಿಲಾಯನ್ಸ್ ಜಿಯೋ ಒಡೆತನದ LYF ಕಂಪೆನಿಯ ನೂತನ ಸ್ಮಾರ್ಟ್‌ಫೋನ್‌ ಒಂದು ಮಾರುಕಟ್ಟೆಗೆ ಬಿಡುಗಡೆಯಾಗಿದೆ. LYF ವಿಂಡ್ ಸೀರಿಸ್ ಸ್ಮಾರ್ಟ್‌ಫೋನ್ "LYF ವಿಂಡ್ 7ಎಸ್" ಇದೀಗ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಅತ್ಯಾಧುನಿಕ ಫೀಚರ್‌ ಹೊಂದಿರುವ ಸ್ಮಾರ್ಟ್‌ಫೋನ್ ಇದಾಗಿದೆ.

ಕ್ವಾಲ್ಕಮ್ ಸ್ನಾಪ್‌ಗಾರ್ಡನ್ 210 ಪ್ರೊಸೆಸರ್ ಹೊಂದಿರುವ LYF ವಿಂಡ್ 7ಎಸ್ ಆಂಡ್ರಾಯ್ಡ್ 6 ಮಾರ್ಷಮಲ್ಲೊ ಮೂಲಕ ರನ್ ಆಗಲಿರುವ LYF ವಿಂಡ್ 7ಎಸ್ ಸ್ಮಾರ್ಟ್‌ಫೋನ್ ಜಿಯೋ ನ್ಯೂ ಇಯರ್ ಆಫರ್ 2 ಒಳಗೊಂಡಿದೆ. 5 ಇಂಚ್‌ ಡಿಸ್‌ಪ್ಲೇ ಹೊಂದಿರುವ LYF ವಿಂಡ್ 7ಎಸ್ ಬೆಲೆ 5,699 ರೂಪಾಯಿಗಳಾಗಿದ್ದು ಬೆಲೆಗೆ ತಕ್ಕಂತ ಫೀಚರ್‌ ಅನ್ನು ಹೊಂದಿದೆ.

ಡೌನ್‌ ಪೇಮೆಂಟ್‌ ಸ್ಕೀಮ್‌...! ಐಫೋನ್ 7 ಖರೀದಿಸಿ ಕೇವಲ 1700 ರೂ.ಗೆ!!

ಹಾಗಾದರೆ ನೂತನ ಸ್ಮಾರ್ಟ್‌ಫೋನ್ LYF ವಿಂಡ್ 7ಎಸ್ ಯಾವ ಯಾವ ಫೀಚರ್‌ಗಳನ್ನು ಹೊಂದಿದೆ ಅವುಗಳ ವಿಶೇಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿಯಿರಿ.

 LYF ವಿಂಡ್ 7ಎಸ್ ಪ್ರೊಸೆಸರ್

LYF ವಿಂಡ್ 7ಎಸ್ ಪ್ರೊಸೆಸರ್

LYF ನ ನೂತನ ಸ್ಮಾರ್ಟ್‌ಫೋನ್ LYF ವಿಂಡ್ 7ಎಸ್ ಅತ್ಯಾಧುನಿಕ ಕ್ವಾಲ್ಕಮ್ ಸ್ನಾಪ್‌ಗಾರ್ಡನ್ 210 ಪ್ರೊಸೆಸರ್ ಹೊಂದಿದೆ. ಈ ಮೂಲಕ ಸ್ಮಾರ್ಟ್‌ಫೋನ್ ಬಳಕೆಯ ಅತ್ಯುತ್ತಮ ಅನುಭವವನ್ನು ನೀಡಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಷ್ಟು ಮೆಗಾಪಿಕ್ಸೆಲ್ ಕ್ಯಾಮೆರಾ?

ಎಷ್ಟು ಮೆಗಾಪಿಕ್ಸೆಲ್ ಕ್ಯಾಮೆರಾ?

LYF ವಿಂಡ್ 7ಎಸ್ ಸ್ಮಾರ್ಟ್‌ಫೋನ್‌ ಸಾಮಾನ್ಯ ಎನ್ನುವಂತಹ 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

RAM ಮತ್ತು ROM

RAM ಮತ್ತು ROM

LYF ವಿಂಡ್ 7ಎಸ್ 2GB RAM ಮತ್ತು 16GB ಆಂತರಿಕ ಮೆಮೊರಿಯನ್ನು ಹೊಂದಿದೆ. ಆಂತರಿಕ ಸಂಗ್ರಹಣಾ ಸಾಮರ್ಥ್ಯವನ್ನು 128GB ವರೆಗೂ ಹೆಚ್ಚಿಸಬಹುದಾಗಿದೆ. ಜೊತೆಗೆ ಅಡ್ರೆನೊ 304 GPU ಗ್ರಾಫಿಕ್ ಫೀಚರ್‌ ಹೊಂದಿದೆ.

ಬ್ಯಾಟರಿ ಬಾಳಿಕೆ ಹೇಗಿದೆ.?

ಬ್ಯಾಟರಿ ಬಾಳಿಕೆ ಹೇಗಿದೆ.?

LYF ಸ್ಮಾರ್ಟ್‌ಫೋನ್‌ಗಳ ಬಹುದೊಡ್ಡ ಸಮಸ್ಯೆ ಎಂದರೆ ಅದು ಕಡಿಮೆ ಬ್ಯಾಟರಿ ಸಾಮರ್ಥ್ಯ. ಇನ್ನು ವಿಂಡ್ 7ಎಸ್ ಕೂಡ ಸಾಮಾನ್ಯ ಎನ್ನುವಂತಹ 2,250MAh ಶಕ್ತಿ ಬ್ಯಾಟರಿಯನ್ನು ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Reliance jio Retail has launched a new smartphone Wind series of smartphones called Reliance LYF Wind 7S.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X