ನವರಾತ್ರಿ ಹಬ್ಬಕ್ಕೆ ಜಿಯೋ ಫೋನ್!..ಜೊತೆಗೆ ಮತ್ತೊಂದು ಸಿಹಿಸುದ್ದಿ!!
ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಕಡಿಮೆ ದರದ 4ಜಿ ಜಿಯೊ ಫೋನ್‌ನಲ್ಲಿ ಇಂಟರ್ನೆಟ ಬಳಕೆಗೆ ಹೆಚ್ಚು ಸಹಕಾರವಾಗಿದೆ.!!
ನವರಾತ್ರಿ ಹಬ್ಬದಿಂದಲೇ ಜಿಯೋ ಫೋನ್ ಗ್ರಾಹಕರನ್ನು ತಲುಪುತ್ತವೆ ಎನ್ನುವ ಸುದ್ದಿಯ ಜೊತೆಗೆ, ಜಿಯೋ ಫೋನ್ ಬುಕ್ ಮಾಡಿದ್ದವರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ.!! ಈಗಾಗಲೇ, ಜಿಯೋ ಫೋನ್ ಬಳಕೆ ಮಾಡುತ್ತಿದ್ದವರು ಜಿಯೋ ಫೋನ್ ಅತ್ಯದ್ಬುತವಾಗಿ ಎಂದು ಹೇಳಿದ್ದಾರೆ.!!
ಜಿಯೊ ಫೋನ್ ಹೊಂದಿರುವ ಫೀಚರ್ಸ್ ಕುರಿತು ಆರಂಭವಾಗಿ ಸಾಕಷ್ಟು ಚರ್ಚೆಗೆ ಉತ್ತರ ಸಿಕ್ಕಿದ್ದು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಕಡಿಮೆ ದರದ 4ಜಿ ಜಿಯೊ ಫೋನ್‌ನಲ್ಲಿ ಇಂಟರ್ನೆಟ್ ಬಳಕೆಗೆ ಹೆಚ್ಚು ಸಹಕಾರವಾಗಿದೆ ಎಂದು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ ಎಂದು ಇಂಗ್ಲೀಷ್ ಪತ್ರಿಕೆಗಳ ವರದಿ ಮಾಡಿವೆ.!!

ಬೇಸಿಕ್ ಹ್ಯಾಂಡ್‌ಸೆಟ್‌ಗಿಂತಲೂ ಉತ್ತಮ 2.4 ಇಂಚ್ ಡಿಸ್‌ಪ್ಲೇ, ಡ್ಯುಯಲ್-ಕೋರ್ ಚಿಪ್‌ನೊಂದಿಗೆ 512 ಎಂಬಿ ರ್ಯಾಮ್ ಮೂಲಕ ಮೊಬೈಲ್ ಹೊರಬಂದಿದ್ದು, ಅಂತರ್ಜಾಲ ಮಾಹಿತಿ ಪಡೆಯುವುದು ಹಾಗೂ ವೀಕ್ಷಣಾ ಪ್ರಕ್ರಿಯೆ ತ್ವರಿತವಾಗಿದೆ ಮತ್ತು ಫೋನ್‌ನಿಂದ ವಿಡಿಯೋ ಕಾಲ್ ಹಾಗೂ ವೈಫೈ ಸಂಪರ್ಕ ಸಹ ಸಾಧ್ಯ ಎಂದು ಹೇಳಲಾಗಿದೆ.!!

ಬ್ಲುಟ್ಯೂತ್, ಎಫ್‌ಎಂ ರೇಡಿಯೊ, ಟಾರ್ಚ್ ಹಾಗೂ 4 ಜಿಬಿ ಇಂಟರ್ನಲ್ ಮೆಮೊರಿಯಂತಹ ಹೆಚ್ಚು ಫೀಚರ್ಸ್ ಮೂಲಕ ಜಿಯೋ ಫೋನ್ ಹೊರಬಂದಿದ್ದು, 2 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಹಾಗೂ 0.3 ಎಂಪಿ ಸೆಲ್ಫಿ ಕ್ಯಾಮೆರಾ 2000 ಎಂಎಎಚ್ ಬ್ಯಾಟರಿ ಫೋನ್ ಗುಣಮಟ್ಟವನ್ನು ಹೆಚ್ಚಿಸಿವೆ.!!
ಓದಿರಿ: ವಿವೊ ಕಂಪೆನಿಯ ಮಹಾಮೋಸ!?..ದಾಖಲೆ ಸಮೇತ ಬಿಚ್ಚಿಟ್ಟ ಬೆಂಗಳೂರು ಹುಡುಗ!!


Click it and Unblock the Notifications








