ವಿವೊ ಕಂಪೆನಿಯ ಮಹಾಮೋಸ!?..ದಾಖಲೆ ಸಮೇತ ಬಿಚ್ಚಿಟ್ಟ ಬೆಂಗಳೂರು ಹುಡುಗ!!

ವಿವೊ ಹೇಳುತ್ತಿರುವುದು ಸುಳ್ಳು. ವಿವೊ ಫೋನಿನಲ್ಲಿ 24 ಮೆಗಾಪಿಕ್ಸೆಲ್ ರೆಸೊಲ್ಯೂಶನ್‌ನ ಸೆಲ್ಫೀ ಕ್ಯಾಮೆರಾ ಬಳಕೆ ಮಾಡಲು ಹೇಗೆ ಸಾಧ್ಯ ಎಂದು ವಿನಯ ಗೌಡ ಪ್ರಶ್ನಿಸಿದ್ದಾರೆ.!!

|

ವಿಶ್ವದಲ್ಲಿಯೇ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್ ಬಿಡುಗಡೆ ನೀಡುತ್ತಿರುವುದಾಗಿ ಹೇಳಿಕೊಳ್ಳುವ ವಿವೊ ಸುಳ್ಳುಹೇಳಿ ಸಿಕ್ಕಿಹಾಕಿಕೊಂಡಿದೆ ಎನ್ನಲಾಗಿದೆ.!! ವಿವೊ ಕಂಪೆನಿ ಜನರನ್ನು ದಾರಿತಪ್ಪಿಸುತ್ತಿದೆ ಎಂದು ಬೆಂಗಳೂರಿನ ಬ್ಲಾಗರ್ ವಿನಯ ಗೌಡ ಎಂಬುವವರು ದಾಖಲೆ ಸಮೇತ ಸಾಕ್ಷಿ ಒದಗಿಸಿದ್ದಾರೆ.!!

ವಿವೊ ಕಂಪೆನಿ ಇತ್ತೀಚೆಗೆ ಬಿಡುಗಡೆ ಮಾಡಿದ್ದ ವಿವೊ7+ ಫೋನಿನಲ್ಲಿ 24 ಮೆಗಾಪಿಕ್ಸೆಲ್ ರೆಸೊಲ್ಯೂಶನ್‌ನ ಸೆಲ್ಫೀ ಕ್ಯಾಮೆರಾ ಇದೆ ಎಂದು ಹೇಳಿಕೊಂಡಿತ್ತು. ಆದರೆ, ವಿವೊ ಹೇಳುತ್ತಿರುವುದು ಸುಳ್ಳು. ವಿವೊ ಫೋನಿನಲ್ಲಿ 24 ಮೆಗಾಪಿಕ್ಸೆಲ್ ರೆಸೊಲ್ಯೂಶನ್‌ನ ಸೆಲ್ಫೀ ಕ್ಯಾಮೆರಾ ಬಳಕೆ ಮಾಡಲು ಹೇಗೆ ಸಾಧ್ಯ ಎಂದು ವಿನಯ ಗೌಡ ಪ್ರಶ್ನಿಸಿದ್ದಾರೆ.!!

ವಿವೊ ಕಂಪೆನಿಯ ಮಹಾಮೋಸ!?..ದಾಖಲೆ ಸಮೇತ ಬಿಚ್ಚಿಟ್ಟ ಬೆಂಗಳೂರು ಹುಡುಗ!!

ವಿವೊ7+ ಫೋನ್‌ನಲ್ಲಿ ಕ್ವಾಲ್ಕಂ ಕಂಪೆನಿ ತಯಾರಿಸಿದ ಕಡಿಮೆ ಬೆಲೆಯ ಸ್ನಾಪ್‌ಡ್ರಾಗನ್ 450 ಪ್ರೊಸೆಸರ್ ಅಳವಡಿಸಲಾಗಿದ್ದು, ಈ ಪ್ರೊಸೆಸರ್ 21 ಮೆಗಾಪಿಕ್ಸೆಲ್ ತನಕ ಮಾತ್ರ ಬೆಂಬಲಿಸಬಲ್ಲುದು ಎಂದು ಕ್ವಾಲ್ಕಂ ಕಂಪೆನಿ ತನ್ನ ಜಾಲತಾಣದಲ್ಲಿ ಬರೆದಿದೆ.! ಹಾಗಾದರೆ, ವಿವೊ7+ ನಲ್ಲಿ 24 ಮೆಗಾಪಿಕ್ಸೆಲ್ ಕ್ಯಾಮೆರಾ ಇರಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.!!

ವಿವೊ ಕಂಪೆನಿಯ ಮಹಾಮೋಸ!?..ದಾಖಲೆ ಸಮೇತ ಬಿಚ್ಚಿಟ್ಟ ಬೆಂಗಳೂರು ಹುಡುಗ!!

ಅಲ್ಲದೇ, ಈ ವ್ಯತ್ಯಾಸವನ್ನು ಪತ್ತೆ ಹಚ್ಚಿದ ಬ್ಲಾಗರ್ ವಿನಯ ಗೌಡ ಅವರು ತಮ್ಮ ಬ್ಲಾಗಿನಲ್ಲಿ ವಿವೊ ಮೋಸ ಮಾಡುತ್ತಿದೆಯೇ ಎಂದು ಬರೆದಿದ್ದು ದೊಡ್ಡ ಸುದ್ದಿಯಾಗಿತ್ತು.!! ಆದರೆ, ಕೊನೆಗೆ ವಿವೊ ಒಂದು ಸ್ಪಷ್ಟೀಕರಣ ನೀಡಿ ಕ್ವಾಲ್ಕಂ ತನ್ನ ಜಾಲತಾಣದಲ್ಲಿ ಸ್ನಾಪ್‌ಡ್ರಾಗನ್ 450ರ ಗುಣವೈಶಿಷ್ಟ್ಯವನ್ನು ನವೀಕರಿಸಿದೆ ಎಂದು ಹೇಳಿದೆ.! ನಂತರ ಕ್ವಾಲ್ಕಮ್ ತನ್ನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಅಪ್‌ಡೇಟ್ ಮಾಡಿದ್ದು, ಸ್ನಾಪ್‌ಡ್ರಾಗನ್ 450 ಪ್ರೊಸೆಸರ್ 24MP @ 24fps ಕ್ಯಾಮೆರಾಗೆ ಸಪೋರ್ಟ್ ಮಾಡುತ್ತದೆ ಎಂದು ತಿಳಿಸಿದೆ.!!

ವಿವೊ ಕಂಪೆನಿಯ ಮಹಾಮೋಸ!?..ದಾಖಲೆ ಸಮೇತ ಬಿಚ್ಚಿಟ್ಟ ಬೆಂಗಳೂರು ಹುಡುಗ!!

ಇನ್ನು ಕ್ವಾಲ್ಕಮ್ ಜಾಲತಾಣದಲ್ಲಿ 'Dual camera up to 13 MP, Single Camera up to 21MP @ 30fps, 24MP @ 24fps' ಎಂದು ಬರೆದಿದೆ. ಇಲ್ಲಿ fps ಏನು ಮಾಡುತ್ತಿದೆ ಅರ್ಥವಾಗುತ್ತಿಲ್ಲ. FPS ಎಂದರೆ frames per second. ಇದು ಸಾಮಾನ್ಯವಾಗಿ ವಿಡಿಯೊ ಅಥವಾ burst click ಅಂದರೆ ಅತಿ ವೇಗವಾಗಿ ಕ್ಲಿಕ್ ಮಾಡುವುದಕ್ಕೆ ಅನ್ವಯವಾಗುತ್ತದೆ. ಅಂದರೆ ಕಡಿಮೆ ವೇಗದಲ್ಲಿ ಫೋಟೊ ತೆಗೆದರೆ ಹೆಚ್ಚಿನ ರೆಸೊಲ್ಯೂಶನ್‌ನಲ್ಲಿ ಫೋಟೊ ತೆಗೆಯಬಹುದು ಎಂದೇ? ಒಂದೇ ಫೋಟೊ ತೆಗೆದರೆ ಎಷ್ಟು ರೆಸೊಲ್ಯೂಶನ್? ವಿವೋ ಮತ್ತು ಕ್ವಾಲ್ಕಂ ವಿವರ ನೀಡಬಹುದೇ?

Best Mobiles in India

English summary
We have started seeing a new trend in India market where the big guys are getting belted badly by the Chinese manufacturer. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X