ಲಾಂಚ್‌ಗೂ ಮುನ್ನವೇ ಜಿಯೋದೊಂದಿಗೆ ಐಫೋನ್ 8 ಮತ್ತು 8 ಪ್ಲಸ್: ಬೆಲೆಯಲ್ಲಿ ಭಾರೀ ಕಡಿತ
ಇದೇ ಸೆಪ್ಟೆಂಬರ್ 29 ರಿಂದ ಐಫೋನ್ 8 ಮತ್ತು 8+ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಜಿಯೋ ದೊಂದಿಗೆ ಐಫೋನ್ ಕೊಳ್ಳುವವರಿಗೆ ಕ್ಯಾಷ್ ಬ್ಯಾಕ್, ಬೈ ಬ್ಯಾಕ್ ಗ್ಯಾರೆಂಟಿ, ಎಕ್ಸ್‌ಕ್ಲೂಸಿವ್ ಪ್ಲಾನ್ ಅನ್ನು ನೀಡಲಿದೆ ಜಿಯೋ
ಮೊನ್ನೆ ತಾನೆ ಲಾಂಚ್ ಆದ ಆಪಲ್ ಐಫೋನ್ 8 ಮತ್ತು 8 ಪ್ಲಸ್ ಶೀಘ್ರವೇ ಭಾರತದಲ್ಲಿ ಕಾಣಿಸಿಕೊಳ್ಳಲಿದ್ದು, ಜಿಯೋ ಲಾಂಚಿಂಗ್ ಆಫರ್ ಆಗಿ ಐಫೋನ್ 8 ಮತ್ತು 8 ಪ್ಲಸ್ ಪ್ರೀ ಬುಕ್ ಮಾಡಿದವರಿಗೆ ಬೆಲೆಯಲ್ಲಿ ರೂ.10,000 ಕಡಿತ ಕಾಣಬಹುದಾಗಿದೆ.

ಓದಿರಿ: ಆನ್‌ಲೈನಿನಲ್ಲಿ ಆಧಾರ್-ಡ್ರೈವಿಂಗ್ ಲೈಸನ್ಸ್ ಲಿಂಕ್ ಮಾಡುವುದು ಹೇಗೆ?
ಇದೇ ಸೆಪ್ಟೆಂಬರ್ 29 ರಿಂದ ಐಫೋನ್ 8 ಮತ್ತು 8+ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಜಿಯೋ ದೊಂದಿಗೆ ಐಫೋನ್ ಕೊಳ್ಳುವವರಿಗೆ ಕ್ಯಾಷ್ ಬ್ಯಾಕ್, ಬೈ ಬ್ಯಾಕ್ ಗ್ಯಾರೆಂಟಿ, ಎಕ್ಸ್‌ಕ್ಲೂಸಿವ್ ಪ್ಲಾನ್ ಅನ್ನು ನೀಡಲು ಜಿಯೋ ತಯಾರಿಯನ್ನು ನಡೆಸಿದೆ ಎನ್ನಲಾಗಿದೆ.

ಜಿಯೋ ಐಫೋನ್ 8 ಮತ್ತು 8+ ಪ್ರೀ ಆರ್ಡರ್ ಆಫರ್:
ಸೆಪ್ಟೆಂಬರ್ 22 ರಿಂದ 29ರ ಒಳಗೆ ಜಿಯೋ ಐಫೋನ್ ಬುಕ್ ಮಾಡಿದರೆ ಗ್ರಾಹಕರು ರೂ.10,000 ಕ್ಯಾಷ್ ಬ್ಯಾಕ್ ಪಡೆದುಕೊಳ್ಳಲಿದ್ದಾರೆ. ನೀವು ಈ ಆಫರ್ ಲಾಭ ಪಡೆಯಬೇಕಾಗಿದೆ ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಬೇಕಾಗಿದೆ.

ಐಫೋನ್ 8 ಬೆಲೆಯಲ್ಲಿ ಕಡಿತ:
ಐಫೋನ್ 8 64 GB ಆವೃತ್ತಿಯ ಬೆಲೆ ರೂ. 54,000 ಹಾಗೂ 256 GB ಆವೃತ್ತಿಯ ಬೆಲೆ ರೂ.67,00೦ಕ್ಕೆ ದೊರೆಯಲಿದೆ.

ಐಫೋನ್ 8+ ಬೆಲೆಯಲ್ಲಿ ಕಡಿತ:
ಐಫೋನ್ 8+ 64 GB ಆವೃತ್ತಿಯ ಬೆಲೆ ರೂ. 63,000 ಹಾಗೂ 256 GB ಆವೃತ್ತಿಯ ಬೆಲೆ ರೂ. 76,000ಕ್ಕೆ ದೊರೆಯಲಿದೆ.

ಐಫೋನ್‌ಗಾಗಿಯೇ ಜಿಯೋ ಪ್ಲಾನ್:
ಐಫೋನ್ 8 ಮತ್ತು 8+ ಸ್ಮಾರ್ಟ್‌ಫೋನ್‌ಗಳಿಗೆ ಜಿಯೋ ರೂ.799 ಪ್ಲಾನ್ ಘೋಷಣೆ ಮಾಡಿದೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. 90 GB ಡೇಟಾವನ್ನು ನೀಡಲಿದೆ. ಫ್ರೀ SMS ಸಹ ದೊರೆಯಲಿದೆ. ಅಲ್ಲದೇ ಎಲ್ಲಾ ಜಿಯೋ ಆಪ್‌ಗಳು ದೊರೆಯಲಿದೆ.


Click it and Unblock the Notifications








