ಜಿಯೋದೊಂದಿಗೆ ಕೈ ಜೋಡಿಸಿದ ಶಿಯೋಮಿ: ಬಂಪರ್ ಆಫರ್..! ಮಿಸ್ ಮಾಡ್ಕೋಬೇಡಿ..!
ದೇಶಿಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಠಿಸಿರುವ ಶಿಯೋಮಿ ಹಾಗೂ ದೇಶಿಯ ಟೆಲಿಕಾಂ ಲೋಕದಲ್ಲಿ ತನ್ನದೇ ಹೊಸತನವನ್ನು ಸೃಷ್ಟಿಸಿದ ರಿಯಲನ್ಸ್ ಜಿಯೋ ಕಂಪನಿಗಳು ಎರಡು ಸಹ ಒಂದಾಗಿದ್ದು, ಎರಡು ಸೇರಿ ದೇಶದಲ್ಲಿ ಹೊಸ ಬದಲಾವಣೆಯನ್ನು ತರಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಜಿಯೋ ಶಿಯೋಮಿ ಫೋನ್‌ಗಳ ಮೇಲೆ ಆಫರ್ ಘೋಷಣೆಯನ್ನು ಮಾಡಿದೆ.

ಶಿಯೋಮಿ ಹೊಸದಾಗಿ ಲಾಂಚ್ ಮಾಡಿದ ರೆಡ್‌ಮಿ ನೋಟ್ 5 ಮತ್ತು ರೆಡ್‌ಮಿ ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ಇದೇ ಫೆಬ್ರವರಿ 22 ರಿಂದ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಏಕ್ಸಕ್ಲೂಸಿವ್ ಆಗಿ ಸೇಲ್ ಆಗಲಿದ್ದು, ಮಿ ಡಾಟ್ ಕಾಂ ಮತ್ತು ಮಿ ಹೋಮ್ ನಲ್ಲಿ ಮಾರಾಟವಾಗಲಿದೆ.

ಕ್ಯಾಷ್ ಬ್ಯಾಕ್:
ಶಿಯೋಮಿಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿರುವ ರಿಯಲನ್ಸ್ ಜಿಯೋ ರೆಡ್‌ಮಿ ನೋಟ್ 5 ಮತ್ತು ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ಗಳನ್ನು ಖರೀದಿಸುವವರಿಗೆ ಕ್ಯಾಷ್ ಬ್ಯಾಕ್ ಆಫರ್ ಅನ್ನು ನೀಡಲಿದೆ. ರೂ. 2,200ರ ವರೆಗೂ ಕ್ಯಾಷ್ ಬ್ಯಾಕ್ ದೊರೆಯಲಿದೆ ಎನ್ನಲಾಗಿದೆ.

ಇನ್ನು ಇದೆ:
ಇದಲ್ಲದೇ ಜಿಯೋ ರೆಡ್‌ಮಿ ನೋಟ್ 5 ಮತ್ತು ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ಗಳನ್ನು ಖರೀದಿಸುವವರಿಗೆ ಕ್ಯಾಷ್ ಬ್ಯಾಕ್ ಆಫರ್ ದೊರೆಯುವದರೊಂದಿಗೆ 100% ಡೇಟಾ ಸಹ ದೊರೆಯಲಿದೆ. ಇದರಿಂದಾಗಿ ಸಾಮಾನ್ಯರಿಗೆ 45GB ಡೇಟಾದೊಂದಿಗೆ ಮತ್ತಷ್ಟು ಡೇಟಾ ಸಹ ದೊರೆಯಲಿದೆ ಎನ್ನಲಾಗಿದೆ.

ರೆಡ್ ಮಿ ನೋಟ್ 5 ವಿಶೇಷತೆ:
18:9 ಅನುಪಾತದಲ್ಲಿ 5.99 ಇಂಚಿನ FHD ಡಿಸ್‌ಪ್ಲೇ ಯೊಂದಿಗೆ 8.05mm ದಪ್ಪವಿರುವ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನ್‌ನಲ್ಲಿ ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ.3GB RAM ಮತ್ತು 32GB ಮೆಮೊರಿ ಹಾಗೂ 4GB ಮತ್ತು 64GB ಮೆಮೊರಿಯ ಎರಡು ಆವೃತ್ತಿಗಳಲ್ಲಿ ಕಾಣಿಸಿಕೊಂಡಿದೆ. 4000mAh ಬ್ಯಾಟರಿಯನ್ನು ಹೊಂದಿದೆ.

ರೆಡ್ ಮಿ ನೋಟ್ 5 ಬೆಲೆ
ಶಿಯೋಮಿ ರೆಡ್ ಮಿ ನೋಟ್ 5 ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಕಾಲಿಟ್ಟಿದ್ದು, 3GB RAM ಮತ್ತು 32GB ಮೆಮೊರಿ ಆವೃತ್ತಿ ಬೆಲೆ ರೂ. 9,999ಕ್ಕೆ ಹಾಗೂ 4GB ಮತ್ತು 64GB ಆವೃತ್ತಿ ಬೆಲೆ ರೂ. 11,999ಕ್ಕೆ ಬಿಡುಗಡೆಗೊಂಡಿದೆ.!

ರೆಡ್‌ಮಿ ನೋಟ್ 5 ಪ್ರೊ ವಿಶೇಷತೆ:
ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನಿನಲ್ಲಿ 6GB/ 4GB RAM ಅನ್ನು ಕಾಣಬಹುದಾಗಿದ್ದು, LPDDR4X RAM ಇದಾಗಿದೆ. ಸೋನಿ 12MP +5MP ಹಾರಿಜಂಟಲ್ ಕ್ಯಾಮೆರಾ ಸೆಟಪ್ ಅನ್ನು ಈ ಫೋನಿನಲ್ಲಿ ಕಾಣಹುದಾಗಿದ್ದು, ಸೋನಿ 20MP ಕ್ಯಾಮೆರಾವನ್ನು ಮುಂಭಾಗದಲ್ಲಿ ಕಾಣಬಹುದಾಗಿದೆ.


ರೆಡ್‌ಮಿ ನೋಟ್ 5 ಪ್ರೊ ಬೆಲೆ:
ರೆಡ್‌ಮಿ ನೋಟ್ 5 ಪ್ರೊ 6GB/64GB ಆವೃತ್ತಿಯ ಬೆಲೆಯೂ ರೂ. 16,999ಕ್ಕೆ ದೊರೆಯುತ್ತಿದ್ದು ಮತ್ತು 4GB/64GB ಆವೃತ್ತಿಯೂ ರೂ,13,999ಕ್ಕೆ ಲಭ್ಯವಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಈ ಸ್ಮಾರ್ಟ್‌ಫೋನ್ ಸೃಷ್ಟಿಸಲಿದೆ.
ಓದಿರಿ: ಮಳುಗಿದ ಟಿವಿ ಮಾರುಕಟ್ಟೆ: ಶಿಯೋಮಿಯಿಂದ 55 ಇಂಚಿನ, 4K UHD ಸ್ಮಾರ್ಟ್ ಟಿವಿ ರೂ.39,999ಕ್ಕೆ..!


Click it and Unblock the Notifications








