Subscribe to Gizbot

ಮಳುಗಿದ ಟಿವಿ ಮಾರುಕಟ್ಟೆ: ಶಿಯೋಮಿಯಿಂದ 55 ಇಂಚಿನ, 4K UHD ಸ್ಮಾರ್ಟ್ ಟಿವಿ ರೂ.39,999ಕ್ಕೆ..!

Written By:

ಚೀನಾವನ್ನು ಬಿಟ್ಟರೇ ಭಾರತದಲ್ಲಿಯೇ ಮೊದಲ ಬಾರಿಗೆ Mi TV ಯನ್ನು ಶಿಯೋಮಿ ಭಾತರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಶಿಯೋಮಿ ಟಿವಿ ಹೊಸ ಸಂಚಲವನ್ನು ಉಂಟು ಮಾಡಲಿದೆ ಎನ್ನಲಾಗಿದೆ.

ಶಿಯೋಮಿಯಿಂದ 55 ಇಂಚಿನ, 4K UHD ಗುಣಮಟ್ಟದ Mi ಸ್ಮಾರ್ಟ್ ಟಿವಿ ರೂ.39,999ಕ್ಕೆ..!

ಕಳೆದ ಮೂರು ವರ್ಷಗಳಿಂದ ಶಿಯೋಮಿ ಟಿವಿ ಲಾಂಚ್ ಮಾಡಲಿದೆ ಎನ್ನುವ ಮಾತು ಕೇಳುತ್ತಿದ್ದರೂ ಲಾಂಚ್ ಆಗಿರಲಿಲ್ಲ. ಆದರೆ ಈ ಬಾರಿ Mi LED TV 4 ಮಾರುಕಟ್ಟೆಯನ್ನು ಪ್ರವೇಶಿಸಿದೆ. ಚೀನಾದಲ್ಲಿ ಮಾತ್ರವೇ ದೊರೆಯುತ್ತಿದ್ದ ಈ ಟಿವಿ, ಭಾರತೀಯ ಮಾರುಕಟ್ಟೆಯನ್ನು ಪ್ರವೇಶ ಮಾಡಿದ್ದು ಬೇರೆ ಎಲ್ಲಾ ಕಂಪನಿಗಳಿಗೆ ತಲೆ ನೋವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್ ಟಿವಿ:

ಸ್ಮಾರ್ಟ್ ಟಿವಿ:

Mi LED TV 4 ಸ್ಮಾರ್ಟ್ ಟಿವಿಯಾಗಿದ್ದು, 2GB RAM + 8GB ಇಂಟರ್ ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಬ್ಲೂಟೂತ್ ಕನೆಕ್ಟ್ ಮತ್ತು Wi Fi ಕನೆಕ್ಟ್ ಮಾಡಬಹುದಾಗಿದ್ದು, ಎರಡು USB ಪೋರ್ಟ್ ಗಳನ್ನು ಕಾಣಬಹುದಾಗಿದೆ. ಅಲ್ಲದೇ 100 MBPS ವೇಗದ ಇಂಟರ್ನೆಟ್ ಬಳಕೆ ಮಾಡಿಕೊಳ್ಳಬಹುದಾಗಿದೆ.

ಹೆಚ್ಚಿನ ಪಾಲುದಾರರು:

ಹೆಚ್ಚಿನ ಪಾಲುದಾರರು:

ಇದಲ್ಲದೇ ದೇಶದಲ್ಲಿ ಲಭ್ಯವಿರುವ ಎಲ್ಲಾ ಡಿಜಿಟಪ್ ಕಂಟೆಟ್ ಗಳನ್ನು ಕಾಣಹುದಾಗಿದ್ದು, ಹಾಟ್ ಸ್ಟಾರ್, ಸೋನಿ, ವೂಟ್, ಸನ್, ಹಂಗಾಮ ಸೇರಿದಂತೆ ಎಲ್ಲಾ ಕಟೆಂಟ್ ಗಳು ದೊರೆಯಲಿದ್ದು, ಇದಲ್ಲದೇ ಉಚಿತವಾಗಿಯೂ ನೋಡಬಹುದಾಗಿದೆ.

ನಾಣ್ಯದಷ್ಟು ತೆಳು:

ನಾಣ್ಯದಷ್ಟು ತೆಳು:

ವಿಶ್ವದ ಅತೀ ತಳುವಾದ LED TV ಎನ್ನಲಾಗಿದೆ. ಒಂದು ರುಪಾಯಿ ಕಾಯಿನ್ ನಷ್ಟು ಸಣ್ಣದಾಗಿದೆ ಎನ್ನಲಾಗಿದೆಗಿದೆ. ಇದು 4.9mm ನಷ್ಟು ತೆಳುವಾಗಿದ್ದು, ವಿಶ್ವದಲ್ಲಿಯೇ ಲಭ್ಯವಿರುವ ತೆಳು ಟಿವಿ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ .

ಸ್ಯಾಮ್ ಸಂಗ್ ಡಿಸ್‌ಪ್ಲೇ:

ಸ್ಯಾಮ್ ಸಂಗ್ ಡಿಸ್‌ಪ್ಲೇ:

Mi LED TV 4 ನಲ್ಲಿ ನೀವು ಸ್ಮಾಮ್ ಸಂಗ್ ಡಿಸ್‌ ಪ್ಲೇಯನ್ನು ಹೊಂದಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿಯನ್ನು ಮಾಡಿಕೊಂಡಿಲ್ಲ ಎನ್ನಲಾಗಿದೆ. ಇದು 55 ಇಂಚಿನ ಟಿವಿ ಇದಾಗಿದೆ. ಅಲ್ಲದೇ ಈ ಟಿವಿಗೆ ಫ್ರೇಮ್ ಇಲ್ಲ ಎನ್ನಲಾಗಿದೆ.

4K ಗುಣಮಟ್ಟ:

4K ಗುಣಮಟ್ಟ:

ಮಾರುಕಟ್ಟೆಯಲ್ಲಿ ಲಭ್ಯವಿರುವ Mi LED TV 4 4K UHD ಗುಣಮಟ್ಟವನ್ನು ಹೊಂದಿದ್ದು, ಇದರಲ್ಲಿ ಭಾರೀ ಗುಣಮಟ್ಟದ ವಿಡಿಯೋಗಳನ್ನು ಪ್ಲೇ ಮಾಡಬಹುದಾಗಿದ್ದು, ನೀಡು ಟಿವಿ ನೋಡುವ ವಿಧಾನವನ್ನು ಬದಲಾಯಿಸಲಿದೆ.

ಉತ್ತಮ ಮಿ ರೀಮೋಟ್:

ಉತ್ತಮ ಮಿ ರೀಮೋಟ್:

ಇದಲ್ಲದೇ ಸೆಟಪ್ ಬ್ಯಾಕ್ಸ್ ನೊಂದಿಗೆ ಟಿವಿ ಯೊಂದಿಹಗೆ ಸಿಂಕ್ ಆಗಲಿದ್ದು, ಇದಕ್ಕಾಗಿಯೇ ಮಿ ರಿಮೋಟ್ ಅನ್ನು ಬಿಡುಗಡೆ ಮಾಡಿದ್ದು, ಬೇರೆ ರಿಮೋಟ್ ಇಲ್ಲದೇ ಒಂದೇ ರಿಮೋಟ್ ನಲ್ಲಿ ಎಲ್ಲಾ ಕಾರ್ಯವನ್ನು ಮಾಡಬಹುದಾಗಿದೆ.

ಪ್ಯಾಚ್ ವಾಲ್:

ಪ್ಯಾಚ್ ವಾಲ್:

ಇದಲ್ಲದೇ ಈ ಟಿವಿಯಲ್ಲಿ ಹೊಸದೊಂದು ಪ್ಯಾಚ್ ವಾಪ್ UI ನಿರ್ಮಿಸಿದ್ದು, ಇದರಲ್ಲಿ ಟಿವಿ ಮತ್ತು ಇಂಟರ್ನೆಟ್ ಅನ್ನು ಒಂದೇ ಕಡಯಲ್ಲಿ ಕಾಣಬಹುದಾಗಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕಲಿದೆ.

ಬೆಲೆ:

ಬೆಲೆ:

ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ Mi LED TV 4 4K ಮಾರಾಟವಾಗಲಿದೆ ಎನ್ನಲಾಗಿದ್ದು, ರೂ. 39,999ಕ್ಕೆ ಮಾರಾಟವಾಗುತ್ತಿದ್ದು, ಇದು ಟಾಪ್ ಎಂಡ್ ಟಿವಿ ಮಾರಾಟಗಾರರಿಗೆ ಚಳಿ ಬಿಡಿಸಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Xiaomi Mi TV 4 with 55-inch 4K HDR in India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot