ಕಾರ್ಬನ್ ಫುಲ್ ಎಚ್‌ಡಿ ಸ್ಮಾರ್ಟ್‌ಫೋನ್ ಬಿಡುಗಡೆ
ಕಾರ್ಬನ್ ಕಂಪೆನಿಯ ಫುಲ್‌ಎಚ್‌ಡಿ ಸ್ಕ್ರೀನ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಟೈಟಾನಿಯಂ ಎಕ್ಸ್ ಹೆಸರಿನ ಸಿಂಗಲ್ ಸಿಮ್‌ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು 18,490 ಬೆಲೆಯನ್ನು ನಿಗದಿ ಮಾಡಿದೆ.
ದೇಶೀಯ ಮಾರುಕಟ್ಟೆಯಲ್ಲಿ ಕಾರ್ಬನ್‌ಗೆ ಪ್ರಬಲ ಸ್ಪರ್ಧಿಯಾಗಿರುವ ಮೈಕ್ರೋಮ್ಯಾಕ್ಸ್ ಪ್ರತಿಯಾಗಿ ಕಾರ್ಬನ್ ಈ ಫುಲ್ ಎಚ್‌ಡಿ ಸ್ಕ್ರೀನ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 5 ಇಂಚಿನ ಎಚ್‌ಡಿ ಸ್ಕ್ರೀನ್,ಆಂಡ್ರಾಯ್ಡ್ 4.2 ಜೆಲ್ಲಿಬೀನ್ ಓಎಸ್,1.5GHz ಕ್ವಾಡ್ ಕೋರ್ ಪ್ರೊಸೆಸರ್‌ನ್ನು ಈ ಸ್ಮಾರ್ಟ್‌ಫೋನ್ ಒಳಗೊಂಡಿದೆ.
ಮೈಕ್ರೋಮ್ಯಾಕ್ಸ್ ಈ ಹಿಂದೆ ತನ್ನ ಮೊದಲ ಫುಲ್ ಎಚ್‌ಡಿ ಸ್ಕ್ರೀನ್ ಸ್ಮಾರ್ಟ್‌ಫೋನ್ ಕ್ಯಾನ್‌ವಾಸ್ ಟರ್ಬೋವನ್ನು ಬಿಡುಗಡೆ ಮಾಡಿತ್ತು.ಮೈಕ್ರೋಮ್ಯಾಕ್ಸ್ ಟರ್ಬೋ ಸ್ಮಾರ್ಟ್‌ಫೋನ್ ಡ್ಯುಯಲ್ ಸಿಮ್,5 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್(1920*1080 ಪಿಕ್ಸೆಲ್),ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್,1.5 Ghz ಕ್ವಾಡ್ ಕೋರ್ ಪ್ರೊಸೆಸರ್,2 GB ರ್‍ಯಾಮ್,16GB ಆಂತರಿಕ ಮೆಮೊರಿ,13 ಎಂಪಿ ಹಿಂದುಗಡೆ ಕ್ಯಾಮೆರಾ,5 ಎಂಪಿ ಮುಂದುಗಡೆ ಕ್ಯಾಮೆರಾ,2000 mAh ಬ್ಯಾಟರಿ ವಿಶೇಷತೆಯನ್ನು ಹೊಂದಿದೆ.
ಕಾರ್ಬನ್ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಕಾರ್ಬನ್ ಟೈಟಾನಿಯಂ ಎಕ್ಸ್
ವಿಶೇಷತೆ:
ಸಿಂಗಲ್ ಸಿಮ್
5 ಇಂಚಿನ ಫುಲ್ ಎಚ್‌ಡಿ ಐಪಿಎಸ್‌ಸ್ಕ್ರೀನ್(1920 x 1080 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿಬೀನ್ ಓಎಸ್
1.5GHz ಕ್ವಾಡ್ ಕೋರ್ ಪ್ರೊಸೆಸರ್
1GB ರ್‍ಯಾಮ್
16GB ಆಂತರಿಕ ಮೆಮೊರಿ
ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಹೊಂದಿರುವ 13 ಎಂಪಿ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್,ಎ-ಜಿಪಿಎಸ್
2300mAh ಬ್ಯಾಟರಿ
ಇದನ್ನೂ ಓದಿ: ಆಡುವ ವಯಸ್ಸಿನಲ್ಲೇ ಆಪ್ ಕಂಪೆನಿ ಸ್ಥಾಪಿಸಿದ ಸಹೋದರರು


Click it and Unblock the Notifications








